೧೦೮ ವಿದ್ಯಾರ್ಧಿ ಕರಭೂಷಣ ಬೇಕಾದ ಕೃತಜ್ಞತೆಗೆ ಜೋಸಪ್ಪನೇ ಪಾತ್ರನೆಂಬುದಾಗಿಯ, ಬಪನ್ನನು ಬರೆದಿರುವನು, ವಿದ್ಯಾರ್ಥಿಗಳು ಈ ವಿಷಯವನ್ನು ಪರಾಲೋಚಿಸಿ, ಚಿಂತನೆಯಿಂದಲೂ ಏಕಾಗ್ರತೆಯಿಂದಲೂ ಸ್ವಾಧೀನಪಡಿಸಿಕೊಳ್ಳಬೇಕಾದ ಗ್ರಂಥಗಳನ್ನು ವ್ಯಾಸಂಗಮಾಡುವುದಕ್ಕೆ ಸ್ವಲ್ಪವೂ ಚಿತ್ರವಿಕ್ಷೇಪ ಕಾರಣ ಒಲ್ಲದಿರತಕ್ಕೆ ಕಾಲವನ್ನು ಗೊತ್ತು ಮಾಡಿಕೊಳ್ಳಬೇಕು. ವಿಶ್ರಾಂತಿ ಯನ್ನು ಹೊಂದಿದಮೇಲೆ ಈ ವ್ಯಾಸಂಗಕಾಲ ದೊರೆಯುವಂತೆ ಮಾಡಿ ಕೊಳ್ಳಬೇಕು. ಯೂನಿವರ್ಸಿಟಿ ಪರೀಕ್ಷೆಗಳಲ್ಲಿ ಅತ್ಯುತ್ತಮವಾಗಿ ತೇರ್ಗಡೆಯಾಗಿ ಮಹೋನ್ನತಿಗೆ ಬಂದ ವಿದ್ವಾಂಸರಲ್ಲಿ ಅನೇಕರು, ಸಾಯಂಕಾಲ ಸೊಲ್ಯಾಸ್ತಮಯವಾಗುವುದರೊಳಗಾಗಿ ಊಟಮಾಡಿ, ಎಂಟುಘಂಟೆಗೆ ನಿದ್ರೆಗೆ ಉಪಕ್ರಮಮಾಡಿ, ಎರಡು ಅಥವಾ ಮರು ಘಂಟಿಗೆದ್ದು, ಬೆಳಗ್ಗೆ ಏಳು ಅಧವಾ ಎಂಟುಘಂಟೆಯವರೆಗೂ ಅವಿಚ್ಛಿನ್ನ ವಾಗಿ ವ್ಯಾಸಂಗಮಾಡಿದವರಾಗಿರುತ್ತಾರೆ. ವೃದ್ಧಿಗೆ ಬರಬೇಕೆಂಬ ಆಶೆ ಯುಳ್ಳ ವಿದ್ಯಾರ್ಥಿಗಳೆಲ್ಲರೂ, ಈ ವಿಷಯಕ್ಕೆ ಗಮನ ಕೊಟ್ಟು, ಬದು ಕುವ ಮಾರ್ಗದಲ್ಲಿ ಆಸಕ್ತರಾಗುವುದುತ್ತಮವು. ಮಧ್ಯರಾತ್ರಿಗೆ ಪೂರೈ ಭಾಗದಲ್ಲಿ ಒಂದು ಘಂಟೆ ನಿದ್ರೆ ಮಾಡಿದರೆ, ಮಧ್ಯರಾತ್ರಿಯಾದಮೇಲೆ ಎರಡು ಘಂಟೆ ನಿದ್ರೆಮಾಡಿದಷ್ಟು ಪ್ರಯೋಜನ ವಾಗುವುದೆಂದು, ಡಾಕ್ಟರ್ ಕೈಟರವರು ಅಪ್ಪಣೆ ಕೊಡಿಸಿರುವರು. ರಾತ್ರಿ ವಿಹಾರಾದಿಗಳಲ್ಲಿ ಕಾಲಕ್ಷೇಪಮಾಡಿ ಬೆಳಗ್ಗೆ ಎಂಟೊಂಬತ್ತು ಘಂಟೆಗೆ ಏಳತಕ್ಕ ಜನಗಳಿಗಿಂತ, ರಾತ್ರಿ ಎಂಟೊಂಬತ್ತು ಘಂಟೆಗಳೊಳಗಾಗಿ ಮಲಗಿ ಬೆಳಗ್ಗೆ ಮರುನಾಲ್ಕು ಘಂಟೆಗಳೊಳಗಾಗಿ ಎದ್ದು ಎಂಟೊಂಬತ್ತು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೬
ಗೋಚರ