ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ೧೧೦ ವಿದ್ಯಾರ್ಥಿ ಕರಭೂಷಣ ಯಾರು ಆಲಸ್ಯಕ್ಕೆ ಗುರಿಯಾಗದೆ, ಸಾಯಂಕಾಲ ಹೊತ್ತಿಗೆ ಮುಂಚೆ ಭೋಜನವನ್ನು ಮಾಡಿ, ಎಂಟೊಂಬತ್ತು ಘಂಟೆಗಳೊಳಗಾಗಿ ಮಲಗಿಕೊಂಡು, ಬೆಳಗ್ಗೆ ನಾಲ್ಕು ಘಂಟೆಗೆ ಮುಂಚೆಯೇ ಎದ್ದು, ವ್ಯಾಸಂಗ ಮೊದಲಾದ ಕೆಲಸಗಳಲ್ಲಿ ಶ್ರದ್ಧೆಯಿಂದ ಕೃಷಿಮಾಡುವರೋ, ಅವರು ಸಕಲ ವಾದ ಇಷ್ಟಾರ್ಧಗಳನ್ನೂ ಪಡೆದು, ಇಹಪರಗಳನ್ನು ಸುಲಭವಾಗಿ ಸಾಧಿ ಸುವರು. ಹೊತ್ತಿಗೆಮುಂಚೆ ಏಳುವುದು ಕಷ್ಟವೆಂದು ಕೆಲವರು ತಿಳಿದು ಕೊಳ್ಳುವುದುಂಟು . ಅದೆಂದಿಗೂ ಕಷ್ಟವಲ್ಲ. ಸಂಕಲ್ಪ ಮಾಡಿದರೆ, ಆ ಸಂಕಲ್ಪಕ್ಕೆ ತಕ್ಕಂತೆ ಅನೇಕರಿಗೆ ಉದ್ದಿಷ್ಟವಾದ ಕಾಲಕ್ಕೆ ನಲಿಯಾಗಿ ಎಚ್ಚರಿಕೆಯಾಗುವುದು , ಹಾಗೆ ಎಚ್ಚರಿಕೆಯಾಗದಿರತಕ್ಕಮಗೆ, ಎಚ್ಚರಿಕೆ ಯಾಗುವಂತೆ ಮಾಡಿಕೊಳ್ಳುವುದಕ್ಕೂ ಉಪಾಯಗಳಿರುವುವು. ಅಲಾ ರಮ್ ಟೈಂಪೀಸ್‌ ಎಂಬ ಗಡಿಯಾರಗಳು, ಬಹಳ ಸುಲಭಕ್ರಯಕ್ಕೆ ದೊರೆಯುತ್ತವೆ, ಉದ್ದಿಷ್ಟ ವಾದ ಕಾಲಕ್ಕೆ ಸರಿಯಾಗಿ ಮುಳ್ಳನ್ನು ತಿರುಗಿಸಿಟ್ಟರೆ, ಆ ಕಾಲಕ್ಕೆ ಸರಿಯಾಗಿ ಘಂಟೆಗಳನ್ನು ಹೊಡೆದು ಅವು ಎಚ್ಚರಸಡಿಸುವುವು. ಕೆಲವು ದಿವಸಗಳೊಳಗಾಗಿ, ಇದೊಂದೂ ಇಲ್ಲದೆ ಜನಗಳು ತಾವಾಗಿ ಏಳುವ ಅಭ್ಯಾಸವನ್ನು ಹೊಂದುವರು. ಸಾಯಂಕಾಲ ಏಳೆಂಟುಘಂಟೆಗಳಿಗೇ ಮಲಗಿಕೊಂಡರೆ ನಿದ್ದೆ ಬರುವು ದಿಲ್ಲ ವೆಂದು ಕೆಲವರು ಅಭಿಪ್ರಾಯಪಡುವುದುಂಟು. ಅಭ್ಯಾಸವಿಲ್ಲ ದವರಿಗೆ ಒಂದುದಿವಸಮಾತ್ರ ಹೀಗಾಗಬಹುದು, ಆದಾಗ್ಯೂ ಲಕ್ಷ್ಯ ಮಾಡದೆ ಎರಡು ಅಥವಾ ಮೂರುಘಂಟೆಗೆ ಎದ್ದು ವ್ಯಾಸಂಗಮಾಡಿದರೆ, ಮಾರನೆಯ ದಿವಸದಿಂದ ಸರಿಹೋಗುವುದು, ವಿಶ್ರಾಂತಿಯಾಗುವುದಕ್ಕೆ