ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೨೩ M

  • M

ಭಿಕ್ಷಕರೆಂದಿಗೂ ಒಳ್ಳೆಯ ಪದವಿಗೆ ಬರುವುದಿಲ್ಲ, ಇವರು ಅಭಿನಯಿಸುವ ವೈರಾಗ್ಯವು, ಎಂದಿಗೂ ಅಕೃತ್ರಿಮವಾದುದಲ್ಲ. ಅಭಾವದಿಂದುಂಟಾದ ವೈರಾಗ್ಯವು, ನಿಜವಾದ ವೈರಾಗ್ಯವೇ ಅಲ್ಲ, ದೈವಾಧೀನದಿಂದ, ಕೆಲವ್ರಜನ ಭಿಕ್ಷುಕರು ಭಿಕ್ಷಾವೃತ್ತಿಯನ್ನು ಬಿಟ್ಟು ತಮ್ಮ ಶಕ್ತಿಯಿಂದ ಬದುಕುವರು. ಒಬ್ಬ ಫಕೀರನು, ನಿತ್ಯವೂ ಅಹೋರಾತ್ರಿಯ ಬಹಳದೈನ್ಯದಿಂದ ಭಕವನ್ನೆತ್ತಿ ಉದರಭರಣಮಾಡಿಕೊಳ್ಳುತಿದ್ದನು. ಒಂದಾನೊಂದು ದಿನ, ಒಂಟೆಯಮೇಲೆ ಹೋಗುತಿದ್ದ ಒಬ್ಬ ದೊಡ್ಡ ಮನುಷ್ಯನನ್ನು, ಏನಾದರೂ ಭಿಕ್ಷೆ ಕೊಡಬೇಕೆಂದು ಕೇಳಿದನು, ಅವನು, ಒಂದು ಮೂರುಕಾಸಿನ ಬಿಲ್ಲೆಯನ್ನು ಕೊಡುವುದಕ್ಕೆ ತೆಗೆದನು. ಅದನ್ನು ತೆಗೆದು ಕೊಳ್ಳುವುದಕ್ಕೆ, ಈ ಭಿಕ್ಷುಕನು ಒಂಟೆಯ ಸವಿಾಪಕ್ಕೆ ಹೋದನು. ಅದು ಅವನನ್ನು ಝಾಡಿಸಿ ಒದ್ದಿತು. ಈ ವೊದೆಯಿಂದ ತುಂಬ ಗಾಯವಾಗಿ ಕೆಳಕ್ಕೆ ಬಿದ್ದು, ಅವನು ಮೂರ್ಛಹೋದನು. ಇದನ್ನು ನೋಡಿ, ಒಂಟೆಯ ಮೇಲೆ ಸವಾರಿಮಾಡುತಿದ್ದ ಮನುಷ್ಯನೂ, ದಾರಿಯಲ್ಲಿ ಹೋಗುತಿದ್ದ ವರೂ, ಶೈತ್ಯೋಪಚಾರಗಳಿಂದ ಅವನು ಚೇತರಿಸಿಕೊಳ್ಳುವಂತೆ ಮಾಡಿ ಮನೆಗೆ ಕಳುಹಿಸಿದರು ಒಂದೆ ಯ ಒದೆಯಿಂದಾದ ಗಾಯಗಳು ವಾಸಿ ಯಾಗುವುದಕ್ಕೆ ಕೆಲವುದಿವಸಗಳಾದುವು. ತರುವಾಯ, ಅವನು ಇನ್ನು ಮೇಲೆ ಭಿಕ್ಷವನ್ನು ಮಾಡುವುದಿಲ್ಲ ವೆಂದು ಪ್ರತಿಜ್ಞೆ ಮಾಡಿ, ಒಬ್ಬ ವರ್ತಕ ನಲ್ಲಿ ಜವಾನನಾಗಿ ಸೇರಿದನು. ಕೆಲವುದಿವಸಗಳಲ್ಲಿ ಅವನಿಗೆ ವ್ಯಾಪಾರ ಧರ್ಮಗಳೆಲ್ಲ ಗೊತ್ತಾದುವು. ಅನಂತರ ತಾನೇ ವ್ಯಾಪಾರಮಾಡುವ