ವಿದ್ಯಾರ್ಧಿ ಕರಭೂಷಣ ಮನಸ್ಸಾಕ್ಷಿಗೆ ಅನುಸಾರವಾಗಿಯೂ, ಧರ್ಮಕ್ಕನುಸಾರವಾಗಿಯ ನಡೆದುಕೊಳ್ಳುತ ಬರುವುದಲ್ಲದೆ, ಹಾಗೆ ನಡೆಯುವುದರಿಂದ ಉಂಟಾಗ ತಕ್ಕ ಪ್ರಯೋಜನಗಳನ್ನು ಕೂಡ ಮಕ್ಕಳಿಗೆ ತಿಳಿಯಿಸುತ್ತ ಬರಬೇಕು. - ಪ್ರತಿಯೊಬ್ಬರಿಗೂ, ಜನ್ಮವನ್ನೆತ್ತಿದ ಉತ್ತರಕ್ಷಣದಲ್ಲಿಯೇ ವಿದ್ಯಾ ಬ್ಯಾಸಕ್ಕೆ ಉಪಕ್ರಮವಾಗುವುದು ಹೀಗೆ ಜನ ನೆತ್ತಿದವರಲ್ಲಿ, ಸಾವಿರ ಕೊಬ್ಬರು ಮನೋವಾಕ್ಕರ್ಮಗಳ ಧರ್ಮದಿಂದ ನಡೆಯುವುದೂ ಅಪೂರ್ವವಾಗಿರುವುದು, ಹಾಗೆ ನಡಯುವುದು ಕಷ್ಟವಲ್ಲ, ಆದಾಗ್ಯೂ, ಬಹುಜನಗಳು ಹಾಗೆ ನಡೆಯುವುದಿಲ್ಲ ಶ್ರೇಯಸ್ಸಿಗೆ ಅನೇಕ ವಿಘ್ನಗಳು ಬರುವುದುಂಟು. ಆ ವಿಘ್ನ ಗಳನ್ನು ಜಯಿಸುವ ಶಕ್ತಿಯುಳ್ಳವರು, ಬಹಳ ವಿರಳರಾಗಿರುತ್ತಾರೆ. ಅನೇಕರಿಗೆ, ಇಷ್ಟಾರ್ಧಪ್ರಾಗುಂಟಾಗತಕ್ಕೆ ವಿಘ್ನಗಳನ್ನು ಯಾವ ರೀತಿಯಲ್ಲಿ ನಿವಾರಣೆಮಾಡಿ ಕೊಳ್ಳಬೇಕೋ ಅದು ಕೂಡ ತಿಳಿಯದು. ನಮ್ಮ ಕ್ಷೇಮಾರ್ಧವಾಗಿ ಜಗದೀಶ್ವರನು ನಮಗೆ ಪಂಚೇಂದ್ರಿಯಗಳನ್ನು ಕೊಟ್ಟಿರುವನು. ಅವುಗಳನ್ನು ನಮ್ಮ ಕ್ಷೇಮಾರ್ಧ ವಾಗಿ ವಿನಿಯೋಗಿಸಿಕೊಳ್ಳುವುದಕ್ಕೆ ಸಾಧಕವಾದ ಬುದ್ಧಿಯನ್ನೂ ಕೊಟ್ಟಿ ರುವನು. ಈ ಒದ್ಧಿಯ ಸಾರಧಿಯು , ಇಂದ್ರಿಯಗಳೇ ಅಶ್ವಗಳು. ಪ್ರತಿಯೊಬ್ಬ ಮನುಷ್ಯನೂ ಒದ್ದಿಯನ್ನು ಸುಶಿಕ್ಷಿತವಾಗಿಯೂ ಧರ್ಮ ನಿರತವಾಗಿಯೂ ಇರುವಂತೆ ಮಾಡಿ ಕೊಂಡಿದ್ದರೆ, ಆ ಬುದ್ದಿಯು ೦ಂದ್ರಿಯ ಗಳೆಂಬ ಅಶ್ವಗಳಿಗೆ ಕಡಿವಾಣವನ್ನು (ಲಗಾಮನ್ನು ) ಹಾಕಿ ತನ್ನ ವಶ ದಲ್ಲಿಟ್ಟು ಕೊಳ್ಳುವುದು ಸುಶಿಕ್ಷಿತವಾದ ಬುದ್ಧಿಯಿಲ್ಲದವರು, ಇಂದ್ರಿಯ ಪರವಶರಾಗುವರು, ಇಂದ್ರಿಯಗಳಿಗೆಲ್ಲ, ಒಳ್ಳೆಯ ವ್ಯಾಪಾರವು ಹೇಗಿರು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೪
ಗೋಚರ