ಪುಟ:ವಿದ್ಯಾರ್ಥಿ ಕರಭೂಷಣ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ಯಲ್ಲೂ ಬರುತ್ತವೆ. ಆದುದರಿಂದ, ಚಿಕ್ಕ ವಯಸ್ಸಿನಲ್ಲಿ, ಸುತ್ತುಮುತ್ತಲೂ ಇರತಕ್ಕವರು, ಒಳ್ಳೆಯ ಮೇಲುಪಂಕ್ತಿಯನ್ನು ಹಾಕತಕ್ಕವರಾಗಿರಬೇಕು. ಹಾಗಿಲ್ಲದಿದ್ದರೆ, ಯಾವ ಮೇಲುಪಂಕ್ತಿಯು ಹಾಕಲ್ಪಡುವುದೋ, ಅದ ಕನುಸಾರವಾದ ನಡೆನುಡಿಗಳು ಮಕ್ಕಳಿಗೆ ಬರುತ್ತವೆ. ವೃದ್ದರಾದವರು, ತಮ್ಮ ಕೆಲಸ ಮುಗಿಯಿತೆಂಬುದಾಗಿಯೂ, ತಾವು ಪ್ರಪಂಚದ ವ್ಯಾಪಾರಗಳಲ್ಲಿ ಪರಾಬ್ಬು ಖರೆಂಬುದಾಗಿಯೂ, ತಮ್ಮ ನಡೆ ನುಡಿಗಳ ವಿಷಯದಲ್ಲಿ ತಾವು ಉದಾಸೀನರಾಗಿರಬಹುದೆಂಬುದಾಗಿಯೂ, ತಮಗೆ ಯಾವ ಹೊಣೆ ಜವಾಬುದಾರಿ)ಯ ಇರುವುದಿಲ್ಲ ವೆಂಬುದಾ tಗಿಯೂ ಭಾವಿಸುವುದುಂಟು. ಇದು ಸುತರಾಂ ಯುಕ್ತವಲ್ಲ. ಹಿರಿಯರ ನಡೆನುಡಿಗಳಿಗನುಸಾರವಾಗಿ ಕಿರಿಯರು ನಡೆಯುವರು, ಮಕ್ಕಳು ಸರ್ವ ಗುಣ ಸಂಪನ್ನರಾಗಬೇಕಾದರೆ, ಆ ಎಷಯದಲ್ಲಿ ಮೇಲುಪಂಕ್ತಿಯನ್ನು ಹಾಕುವದು ಹಿರಿಯರಿಗೆ ಮುಖ್ಯ ಕೆಲಸವಲ್ಲವೆ ! ಅವರ ಹೊಣೆಗಾರಿ ಕೆಯು (ಜವಾಬುದಾರಿ) ಅತ್ಯಂತ ದೊಡ್ಡದಲ್ಲ ವೆ! ಈ ಹೊಣೆಗಾರಿ ಕೆಯು ಸರಿಯಾಗಿ ನಡೆಯಿಸಲ್ಪಟ್ಟರೇ, ಅವರು ಕೃತಕೃತ್ಯರಾಗುವರು. ಇಲ್ಲವಾದರೋ, ಅವರು ನಿಂದೆಗೆ ಗುರಿಯಾಗಬೇಕಾಗುವುದು. ಈಗ ವಿದ್ಯಾರ್ಥಿಗಳಾಗಿರತಕ್ಕವರೇ, ಮುಂದೆ ಸಂಸಾರಿಗಳಾಗುವರು. ಅವರೆ ಲ್ಲರೂ ಸನ್ಮಾರ್ಗಪ್ರವೃತ್ತರಾಗಿಯ, ದುರಾರ್ಗಪರಾಯ್ಕುರಾ ಗಿಯ ಆದರೆ, ಪ್ರಪಂಚವೇ ಧರ್ಮಪ್ರವರ್ತನಕ್ಕೆ ಜನ್ಮ ಭೂಮಿಯಾಗು ವದು, ಈ ಕಾರಣದಿಂದ, ಗುರುಹಿರಿಯರಾದವರು, ತಮ್ಮ ನಡೆನುಡಿಗಳು ಮಕ್ಕಳಿಗೆ ಮೇಲುಪಂಕ್ತಿಯಾಗಿರುವುವೆಂದು ತಿಳಿದು ಕೊಂಡು, ತಮ್ಮ ತ