ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೩೫ ವಸ್ತುತತ್ವಜ್ಞಾನವುಂಟಾಗುತ್ತದೆ. ಪೂವ್ವ ಕಾಲದಲ್ಲಿ ಸೂರ್ ಚಂದ್ರ ನಕ್ಷತ್ರ ಮೊದಲಾದುವುಗಳೆಲ್ಲ ಆಕಾಶದಲ್ಲಿಡಲ್ಪಟ್ಟಿರುವ ದೀಪಗಳೆಂದು ಭಾವಿಸ ಲ್ಪಟ್ಟಿದ್ದುವು ಈಗ ಅವುಗಳು ನಕ್ಷತ್ರಗಳೆಂದೂ ಗ್ರಹಗಳೆಂದೂ ಗೊತ್ತಾ ಗುವುದಕ್ಕೂ, ಪ್ರತಿಯೊಂದು ನಕ್ಷತ್ರದ ಜ್ವಾಲೆಯ ಅಕ್ಷಾಂತರಮೈಲಿ ಗಳ ವಿಸ್ತೀರ್ಣವುಳ್ಳುದಾಗಿದೆಯೆಂದು ಗೊತ್ತಾಗುವುದಕ್ಕೂ ಉಪಕ್ರಮ ವಾಗಿದೆ. ವಿಚಾರದಿಂದ ಗೊತ್ತಾಗದಿರತಕ್ಕ ವಿಷಯವೇ ಅಪೂರೈ. ಬುದ್ಧಿಶಾಲಿಗಳಾದವರು, ವಿಚಾರಮಾಡುವುದರಲ್ಲಿ ಬದ್ದಾದರರಾಗಬೇಕು. ವಿಚಾರಪರತೆಗಿಂತ, ಜ್ಞಾನಾರ್ಜನೆಗೆ ಹೆಚ್ಚಾಗಿ ಸಾಧಕವಾದುದು ಯಾವುದೂ ಇಲ್ಲ, ವಿಚಾರವು ಮುಖ್ಯವಾದ ಸಮಸ್ತ ವಿಷಯಗಳ ಲ್ಲಿಯೂ ಸರಿಯಾದ ಮಾರ್ಗದರ್ಶನಕ್ಕೆ ಅತ್ಯಂತಸಾಧಕವಾದುದು. ಇಷ್ಟಾರ್ಧ ಸಿದ್ಧಿಯಲ್ಲಿ ಅಪೇಕ್ಷೆಯುಳ್ಳವರು, ದೊಡ್ಡ ವಿಷಯಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆಯೇ, ಅವುಗಳ ಗುಣದೋಷಗಳನ್ನೂ ಪರಿ ಸಾಮಫಲವನ್ನೂ ವಿಚಾರಮಾಡದೆ ಎಂದಿಗೂ ಉಪಕ್ರಮಮಾಡಬಾರದು. ನಮ್ಮ ಜನ್ಮಕ್ಕೆ ಕಾರಣಭೂತರಾದವರು, ತಾಯಿ ತಂದೆಗಳು, ಜನ್ಮ ವನ್ನೆತ್ತಿದಾಗ, ನಮ್ಮ ಯೋಗಕ್ಷೇಮಚಿಂತೆಯ ವಿಷಯದಲ್ಲಿ ನಮಗೆ ಯಾವ ಶಕ್ತಿಯೂ ಇರುವುದಿಲ್ಲ. ತಾಯಿತಂದೆಗಳು ಅತ್ಯಂತಜಾಗರೂ ಕತೆಯಿಂದ ನಮ್ಮನ್ನು ನೋಡಿಕೊಳ್ಳದಿದ್ದರೆ, ನಾವು ರೋಗಾದಿಗಳಿಗೂ ಅಕಾಲಮರಣಕ್ಕೂ ಗುರಿಯಾಗದಿರುವುದಿಲ್ಲ. ತಂದೆಗಿಂತಲೂ ತಾಯಿಯು ನಮಗೋಸ್ಕರ ಬಹಳ ಕಷ್ಟ ಪಡುತ್ತಾಳೆ. ಆ ಕಷ್ಟವು ಅನಿರ್ವಚನೀಯ ವಾದುದು, ನಾವು ತಾಯಿಯಲ್ಲಿ ಎಷ್ಟು ಭಕ್ತಿಯನ್ನೂ ಪ್ರೀತಿಯನ್ನೂ