ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೬ ವಿದ್ಯಾರ್ಥಿ ಕರಭೂಷಣ ತೋರಿಸಿದರೂ, ಅವಳ ಸೇವೆಯನ್ನು ಎಷ್ಟು ಅಕೃತ್ರಿಮವಾದ ಪ್ರೀತಿ ಯಿಂದ ಮಾಡಿದರೂ, ನಮ್ಮನ್ನು ದ್ದರಿಸುವುದರಲ್ಲಿ ಅವಳು ಪಟ್ಟ ಕಷ್ಟಕ್ಕೆ ಏಕದೇಶಪ್ರತಿಫಲವನ್ನೂ ನಾವು ಕೊಡಲಾರೆವು, ಈ ಕಾರಣದಿಂದಲೇ, ನಮ್ಮ ಹಿರಿಯರು, ಜನಗಳಿಗೆ ತಾಯಿಗಿಂತ ಬೇರೆ ದೇವರಿಲ್ಲ ಎಂದು ಹೇಳು ವರು, ಇದು ನಿಜವಾದ ಮಾತು, ಯಾರು ತಾಯಿಯನ್ನು ದೇವರಂತೆ ಭಾವಿಸಿ, ಅವಳ ಮನಸ್ಸಿಗೆ ಲೇಶವೂ ಅಸಮಾಧಾನವನ್ನುಂಟುಮಾಡದಂತೆ ನಡೆದುಕೊಳ್ಳುವರೋ, ಅವರಿಗೆ ಇಹಪರಸೌಖ್ಯಗಳೆರಡೂ ದೊರೆಯು ವುವು, ತಾಯಿಗೆ ಅಸಮಾಧಾನವನ್ನು ಮಾಡಿ ಮನಸ್ಸನ್ನು ನೋಯಿಸ ತಕ್ಕವರು, ಕೃತಘ್ನು ರಲ್ಲಿ ಶಿರೋಮಣಿಗಳೆಂದು ಭಾವಿಸಲ್ಪಡುವರು, ಇಂಧ ಕೃತಘ್ನತೆಗೆ ಶಿಕ್ಷೆ ತಪ್ಪುವುದಿಲ್ಲ, ಅಂಥ ಜನಗಳಿಗೆ ಇಹಪರಗಳೆರಡೂ ನಷ್ಟ ವಾಗುವುದರಲ್ಲಿ ಸಂದೇಹವಿಲ್ಲ. ಸತ್ವ ಸಂಗಸರಿತ್ಯಾಗವನ್ನು ವಹಿಸಿ ದವರೂ ಕೂಡ, ತಂದೆಯ ನಮಸ್ಕಾರಕ್ಕೆ ಪಾತ್ರರಾದಾಗ್ಯೂ, ತಾವು ತಮ್ಮ ತಾಯಿಗೆ ನಮಸ್ಕಾರಮಾಡಬೇಕೆಂದು, ಶಾಸ್ತ್ರವಿರುವುದು, ಈ ವಿಷಯವನ್ನು ಸರೈ ರೂ ಸದಾ ಮನಸ್ಸಿನಲ್ಲಿಟ್ಟುಗೊಂಡು, ತಾಯಿ ತಂದೆಗಳ ವಿಷಯದಲ್ಲಿ ಅಕೃತ್ರಿಮವಾದ ಭಕ್ತಿಯಿಂದಲೂ ಪ್ರೀತಿಯಿಂದಲೂ ನಡೆದು ಕೊಳ್ಳಬೇಕು. ತಾಯಿಯ ಮನಸ್ಸಿಗೆ ಕೇಶವನ್ನುಂಟುಮಾಡತಕ್ಕ ವರು, ಎಂದಿಗೂ ಕೃತಕೃತ್ಯರಾಗುವುದಿಲ್ಲ. ಚಾಲ್ಯದಲ್ಲಿ ಪ್ರತಿಯೊಬ್ಬರಿಗೂ ಪರಿಚಯಸ್ವರೂ, ಜತೆಗಾರರೂ, ಸಹಾಧ್ಯಾಯಿಗಳೂ, ಸ್ನೇಹಿತರೂ ದೊರೆಯುವರು, ಪರಿಚಯವೂ, ಸಹ ವಾಸವೂ, ಕ್ರಮಕ್ರಮವಾಗಿ ಸ್ನೇಹಕ್ಕೆ ಅವಕಾಶಮಾಡುವುವು, ಹೀಗೆ