ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೪೧. MMmmmmmmmmmmmmmmm ತನ್ನ ಮಾತಿನಂತೆ ನಡೆಯುವುದಕ್ಕೆ ಪ್ರಯತ್ನ ಮಾಡಿದ್ದಾನೆ. ಸರಿಯಾದ ಕಾಲಕ್ಕೆ ಬರುವುದಕ್ಕೆ ಏನೋ ಒಂದು ಅನಿರ್ವಚನೀಯವಾದ ವಿಘ್ನ ಬಂದಿರಬೇಕು, ಹಾಗಿಲ್ಲದಿದ್ದರೆ ಇಷ್ಟು ಹೊತ್ತಿಗೆ ಅವನು ಇಲ್ಲಿರುತ್ತಿದ್ದನು. ಈ ವಿಘ್ನವು ದೈವಿಕವಾಗಿರಬಹುದು, ಡೀಮನ್ನನು ಸಕಲಶಾಸ್ತ್ರವಿಶಾರ ದನು ; ಸಕಲ ಧರಗಳೂ ಇವನ ಆಚರಣೆಯಲ್ಲಿರುವುವು ; ಇವನು ಲೋಕಹಿತೈಷಿ ; ಇವನು ಮಹಾ ಜನಗಳ ಭಾಗ್ಯಸ್ವರೂಪನು ; ಇವನು ಬದುಕಿದ್ದರೆ ಲೋಕದಲ್ಲಿ ಧರ್ಮವು ರೂಢಮಲವಾಗುವುದು. ಇನ್ನು ಸಾವಕಾಶಮಾಡಿದರೆ, ಅವನು ಬಂದುಬಿಡುವನು ಅವನ ಶಿರಚ್ಚೇದ ವನ್ನು ಮಾಡಿದರೆ, ಧರ ಕೇ ಶಿರಸ್ಸೇದಮಾಡಿದಂತಾಗುವುದು, ದೈವ ಯೋಗದಿಂದ ಇವನಿಗೆ ಬದುಲಾಗಿ ದೇಹವನ್ನು ಒಪ್ಪಿಸುವ ಭಾಗ್ಯವು ನನಗೆ ಉಂಟಾಯಿತು. ಎಂದು ಭಾವಿಸಿ, ದೊರೆಯನ್ನು ಕುರಿತು « ಮಹಾಸ್ವಾಮಿ ! ಸಾವಕಾಶಮಾಡ ಕೂಡದು ; ನನ್ನ ಜಾವಿಾನಿಗನು ಸಾರವಾಗಿ ನನ್ನ ಶಿರಚ್ಚೇದವನ್ನು ಮಾಡುವುದಕ್ಕೆ ಜಾಗ್ರತೆಮಾಡಬೇಕು. ಆಲಸ್ಯದಿಂದ ಅಮೃತವೂ ವಿಷವಾಗುವುದು ಕೃಪೆಯಿಟ್ಟು ನನ್ನ ಶಿರಚ್ಛೇದ ಮಾಡುವುದಕ್ಕೆ ಆಜ್ಞೆ ಮಾಡಬೇಕು.” ಎಂದು ಪ್ರಾರ್ಥಿಸಿದನು. ದೇಹ ವನ್ನು ಬಿಡತಕ್ಕ ವಿಷಯದಲ್ಲಿ ಪಿಥಿಯಾಸ್ ಎಂಬವನು ಇಷ್ಟು ಸಂತೋಷ ವುಳ್ಳವನಾಗಿಯೂ ಶ್ರದ್ಧೆಯುಳ್ಳವನಾಗಿಯೂ ಇರುವುದನ್ನು ನೋಡಿ, ಡಯೋನಿಸೆಸನು ಆಶ್ಚರ ಪಟ್ಟು, ಅವನ ಶಿರಚ್ಛೇದವನ್ನು ಮಾಡುವುದಕ್ಕೆ ಆಜ್ಞೆಯನ್ನು ಮಾಡಿದನು. ಜೈಲಿನಿಂದ ಅವನನ್ನು ಬೈಲಿಗೆ ಕರೆದುಕೊಂಡು ಒಂದರು. ಇವನ ಶಿರಚ್ಛೇದವನ್ನು ಮಾಡುತ್ತಾರೆಂದು ಕೇಳಿ, ಬಹು ಜನ