ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ೪ ವಿದ್ಯಾರ್ಥಿ ಕರಭೂಷಣ wwwmv rvvvvvvvvv ಇರುವುದಿಲ್ಲ, ಹಾಗೆ ಮಾಡುವುದು ಅತ್ಯಂತ ಅಧರವು, ಅವನ ಜಾಮಿಾ ನನ್ನು ಬಿಡುಗಡೆ ಮಾಡಿ, ನನ್ನಲ್ಲಿ ಕೃಪೆಯಿಟ್ಟು, ನನ್ನ ಶಿರಚ್ಛೇದವನ್ನು ಮಾಡುವಂತೆ ಆಜ್ಞೆ ಮಾಡಬೇಕು. ?” ಎಂದು ಪ್ರಾರ್ಥಿಸಿದನು. ಇವರ ಸೌಜನ್ಯವನ್ನೂ, ಧಮ್ಮ ಬುದ್ಧಿಯನ್ನೂ, ಒಬ್ಬರನ್ನು ರಕ್ಷಿಸುವುದಕೋಸ್ಕರ ಮತ್ತೊಬ್ಬರು ತಮ್ಮ ದೇಹವನ್ನೊಪ್ಪಿಸುವುದಕ್ಕೆ ಮಾಡಿದಪ್ರಯತ್ನಗಳನ್ನೂ, ಇವರ ಶೋಚನೀಯವಾದ ಸ್ಥಿತಿಯನ್ನೂ ನೋಡಿ, ಅತ್ಯಂತ ವ್ಯಸನದಿಂದ, ಮಹಾಜನಗಳು, ಕಣ್ಣೀರುಬಿಡುತ್ತ ಆಶ್ವರ ಪರವಶರಾದರು. ಇವುಗಳ ನ್ನೆಲ್ಲ ನೋಡಿ, ಡಯೋನಿಸೆಸ್ಸನು ಅತ್ಯಂತ ವಿಸ್ಮಿತನಾದನು, ಪರಮಾವಧಿ ದಶೆಯನ್ನು ಹೊಂದಿದ ಅವರ ಧರಪ್ರವರ್ತನಕ್ಕೂ, ಅತ್ಯಂತ ಜಘನ್ಯವಾದ ತನ್ನ ನಿರಂಕುಶಪ್ರವರ್ತನಕ್ಕೂ ಇರತಕ್ಕೆ ತಾರತಮ್ಯವು, ಅವನಿಗೆ ಸ್ಪಷ್ಟ ವಾಗಿ ಗೊತ್ತಾಯಿತು. ಇಂಧ ಧಮ್ಮ ಸ್ವರೂಪರಾದವರು ಶಿರಚ್ಚೇದಮಾಡಲ್ಪ ಡುವುದಕ್ಕೆ ಎಂದಿಗೂ ಅರ್ಹರಲ್ಲವೆಂಬುದಾಗಿಯೂ, ಇವರು ಬದುಕಿದ್ದರೆ ಧರಮಾರ್ಗೈಕಪರಾಯಣತೆಗೆ ಒಳ್ಳೆಯ ಮೇಲುಪಂಕ್ತಿಗಳಾಗಿ ಪರಿಣಮಿ ಸುವರೆಂಬುದಾಗಿಯೂ, ಇವನಿಗೆ ಭಾವನೆಯುಂಟಾಯಿತು, ಈ ಭಾವ ನೆಯುಂಟಾದ ಕೂಡಲೆ, ಈ ದೊರೆಯು ಹೀಗೆ ಹೇಳಿದನು:-ನೀವಿಬ್ಬರೂ ಜಗದ್ವಿಲಕ್ಷಣ ಪುರುಷರು, ಸತ್ವಗುಣವು ಜನಗಳಲ್ಲಿ ಹೀಗೆ ಮರ್ತಿ ಭವಿಸುವುದೆಂದು ನಾನು ತಿಳಿದುಕೊಂಡಿರಲಿಲ್ಲ, ದೇವತೆಗಳಿಗೂ ರಾಕ್ಷ ಸರಿಗೂ ಇರತಕ್ಕೆ ವೈಲಕ್ಷಣ್ಯವನ್ನು ತೋರಿಸುವುದಕ್ಕೊಸರ, ಜಗದೀಶ್ವ ರನು ನಿಮ್ಮಂಥ ಮಹಾಪುರುಷರನ್ನೂ, ನನ್ನ ಂಧ ಕಿರಾತರನ್ನೂ ನಿರ್ಮಾಣ ಮಾಡಿರಬಹುದೆಂದು ತೋರುತ್ತದೆ ಮಹಾಪುರುಷನಾದ ಡೇಮನ್ನಿಗೆ ಶಿರ