ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೪೩. ಮಹಾತ್ಮನನ್ನು ನಿಂದಿಸುವುದು ಧಮ್ಮವ, ಇವನು ಬದುಕಿದ್ದರೆ ನಮ್ಮ ದೇಶಕ್ಕೆಲ್ಲ ಅಸಂಖ್ಯಾ ಕವಾದ ಕಲ್ಯಾಣಗಳನ್ನು ಮಾಡಬಲ್ಲನು. ಅದ ರಿಂದಲೇ, ದೇವರು ಕಾಲಕ್ಕೆ ಸರಿಯಾಗಿ ಇವನು ಬಾರದಂತೆ ಎಷ್ಟು ವನ್ನು ಮಾಡಿರುವನು. ದೇವರ ಸಂಕಲ್ಪಕ್ಕೆ ಅನುಸಾರವಾಗಿ ನಡೆಯುವುದು ಪ್ರಭುವಿನ ಕರ್ತವ್ಯವು, ಅದಕ್ಕೆ ಒಪ್ಪಿ ತಮ್ಮ ಯೋಗಕ್ಷೇಮಚಿಂತೆಯನ್ನು ಮಾಡಿಕೊಳ್ಳತಕ್ಕುದು ಪ್ರಜೆಗಳ ಕರ್ತವ್ಯವು ಕಾಲಕ್ಕೆ ಸರಿಯಾಗಿ ಡೇಮ «ನು ಬರುವುದಕ್ಕೆ ಆಗಲಿಲ್ಲ, ತಿರಚ್ಛೇದವನ್ನು ಮಾಡಿಸಿಕೊಳ್ಳುವ ಹಕ್ಕು ನನ್ನದಾಗಿರುವುದು, ತಾವೆಲ್ಲರೂ ಅನುಗ್ರಹಿಸಿ, ಈ ಭಾಗ್ಯವನ್ನು ನನಗೆ ಕೊಟ್ಟು, ಡೀಮನ್ನನು ಜೀವಂತನತೆಗಿದ್ದು ಕೊಂಡು ತನ್ನ ಧರ ದಿಂದ ಈ ದ್ವೀಪವನ್ನುದ್ಧರಿಸುವುದಕ್ಕೆ ಅವಕಾಶ ಕೊಡಬೇಕು.' ಎಂದು ಪ್ರಾರ್ಥಿಸಿ ದನು. ಇದನ್ನು ಕೇಳಿ, ಡೀಮನ್ನನು ದೊರೆಯ ಕಡೆಗೆ ತಿರುಗಿ “ ಅಯ್ಯಾ ! ಪ್ರಭುವೇ ! ಕಾಲಕ್ಕೆ ಸುಯಾಗಿ ಶಿರಚ್ಚೇದಮಾಡಿಸಿಕೊಳ್ಳುವುದಕ್ಕೆ ನಾನು ಬಾರದಿದ್ದರೆ ತಾನು ಶಿರಶ್ನೆದಾಡಿಸಿಕೊಳ್ಳುತ್ತೇನೆಂದು ಈತನು ಜಾವಾ ನಾಗಿದ್ದನೇ ಹೊರತು, ನಾನು ಬಂದಾಗೂ ನನಗೆ ಬದುಲಾಗಿ ಶಿರಚ್ಛೇದ ಮಾಡಿಸಿಕೊಳ್ಳುವೆನೆಂದು ಈತನು ಹೇಳಿರಲಿಲ್ಲ; ಅದಕ್ಕೆ ನೀವೂ ಒಪ್ಪಲಿಲ್ಲ. ಪ್ರತಿಕೂಲವಾದ ವಾಯುವಿನದೆಸೆಯಿಂದ ನನ್ನ ಹಡಗು ಈ ದ್ವೀಪಕ್ಕೆ ಒರುವುದಕ್ಕೆ ಕೆಲವುನಿಮಿಷ ಸಾವಕಾಶವಾಯಿತು.: ಆದಾಗ್ಯೂ, ದೈವಾ ನುಗ್ರಹದಿಂದಲೂ, ಈ ಕುದುರೆಯ ಸಹಾಯದಿಂದಲೂ, ಈ ನನ್ನ ಮಿತ್ರನ ಶಿರಚ್ಛೇದವಾಗುವುದಕ್ಕೆ ಮುಂಚೆಯೇ ನಾನು ಬಂದಿರುತ್ತೇನೆ. ನಾನು ಹಾಜರಾದಮೇಲೆ ಅವನ ಶಿರಚ್ಛೇದಮಾಡುವುದಕ್ಕೆ ಯಾವ ಕಾರಣವೂ