ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಚ ಎಗ 1. ೧೫ IMMY ಒಹುಜನಗಳು ಅಲ್ಲಿ ಸೇರಿದರು, ಗಾಳಿಯು ಬಲವಾಗಿ ಬೀಸುತಿದ್ದಿತು. ಈ ಹುಡುಗನು, ಕೆಳಗೆ ನೋಡದೆಯ, ದೃಷ್ಟಿಯನ್ನು ಆ ಸಲಾಕಿಯ ಶಿಖರದಲ್ಲಿಟ್ಟು ಕೊಂಡು, ಕಸಿಯಂತೆ ಹತ್ತುತಿದ್ದನು. ಗಾಳಿಯ ವೇಗ ದಿಂದಲೂ, 'ಇವನ ಭಾರದಿಂದಲೂ, ಸಲಾಕಿಯು ಅಲ್ಲಾಡುತಿದ್ದಿತು. ಇವನೆಲ್ಲಿ ಬಿದ್ದು ದೇಹವನ್ನು ಬಿಡುವನೋ ಎಂದು, ಜನಗಳು ಭಯ ಭ್ರಾಂತರಾಗಿ ನೋಡುತಿದ್ದರು. ಈ ಹುಡುಗನೋ, ಲೇಶವೂ ಭಯವಿಲ್ಲದೆ ಶಿಬಿರಕ್ಕೆ ಹೋಗಿ, ಕಾಲನ್ನು ಅದರ ತುದಿಯಲ್ಲಿಟ್ಟು ಅದರ ಮೇಲಕ್ಕೆ ಹತ್ತಿ ಸಿ೦ತುಕೊಂಡು, ನಿರ್ಭಯವಾಗಿ ಒಂದು ಪ್ರದಕ್ಷಿಣವನ್ನು ಮಾಡಿ ಇಳಿದುಬಂದನು. ಇಂಧ ಅಪಾಯಕರವಾದ ಮೇಲುಪಂಕ್ತಿಯನ್ನು ಇತರ ಹುಡುಗರಿಗೆ ಹಾಕಿದನೆಂದು, ಅವನಿಗೆ ಶಿಕ್ಷೆಯನ್ನು ಮಾಡಿದರು. ಅವನ ತಾಯಿ ತಂದೆಗಳಿಗಾಗಲಿ, ಗುರುಹಿರಿಯರಿಗಾಗಲಿ, ಅವನನ್ನು ಅವನ ಅದ್ಭುತವಾದ ಸಾಹಸಕ್ಕೆ ಅನುರೂಪವಾದ ಕೆಲಸದಲ್ಲಿ ನಿಯಮಿಸುವ ಶಕ್ತಿಯಿಲ್ಲದೆ ಹೋದುದನ್ನು ಕುರಿತು ವಿಷಾದಿಸಬೇಕಾಗಿದೆಯಲ್ಲವೆ ! ಇಂಥ ಅದ್ಭುತವಾದ ಸೈರವೂ ಶಕ್ತಿಯ ಯಾರಿಗಿರುವುದೋ ಅದನ್ನು ಪರಿಶೀಲಿಸಿ, ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುತ ಬಂದರೆ, ಅವರು ಹಿಡಿದ ಕೆಲಸಗಳಲ್ಲಿ ಅಸಾಧಾರಣವಾದ ಕೌಶಲ್ಯವನ್ನು ಹೊಂದಿ, ಪ್ರಪಂಚವನ್ನುದ್ದರಿಸುವ ಮೇಲುಸಂಕಿಯನ್ನು ಹಾಕುವುದಕ್ಕೂ ಅರ್ಹರಾಗುವರು, ಈ ವಿಷಯಕ್ಕೆ, ತಾಯಿತಂದೆಗಳೂ ಪೋಷಕರೂ ಗಮನಕೊಡಬೇಕಾಗಿರುವಂತೆಯೇ, ಪಾರಕರೂ ಗಮನಕೊಡಬೇಕಾಗಿ ರುವುದು,