ಪುಟ:ವಿದ್ಯಾರ್ಥಿ ಕರಭೂಷಣ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ವಿದ್ಯಾರ್ಥಿ ಕರಭೂಷಣ ಅರೋಗದೃಢಕಾಯರಾದ ತಾಯಿತಂದೆಗಳಿಂದ ಜನಿಸಿದ ಮಕ್ಕಳು, ತಾವೂ ಅರೋಗದೃಢಕಾಯರಾಗಿರುವರು. ಬಲಿತ ಸೀರದಿಂದ ಜನನ ವನ್ನು ಹೊಂದಿದ ಮಕ್ಕಳು, ಒಳ್ಳೆಯ ಬುದ್ಧಿಶಕ್ತಿಯನ್ನು ಹೊಂದುವರು. ಅಂಧ ಬುದ್ಧಿಶಕ್ತಿಯುಳ್ಳ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದರಲ್ಲಿ, ತಾಯಿತಂದೆಗಳೂ ಪಾಠಕರೂ ಎಷ್ಟು ವ್ಯವಸಾಯಮಾಡುವರೋ, ಅಷ್ಟು ಫಲವುಂಟು. ಜನ್ಮವನ್ನೆತ್ತಿದ ಕೂಡಲೆ, ಮಕ್ಕಳಿಗೆ ವಿದ್ಯಾಭ್ಯಾಸವುಪಕ್ರ ಮಿಸುತ್ತದೆ. ಮಗುವಿನ ಸವಿಾಪದಲ್ಲಿರತಕ್ಕವರೆಲ್ಲರೂ, ಆ ಮಗುವಿಗೆ ಪಾಠಕರಾಗುತ್ತಾರೆ, ಅವರ ಸುಗುಣಗಳೂ, ದುರ್ಗುಣಗಳೂ ಪ್ರಯತ್ನ ವಿಲ್ಲದೆಯೇ ಮಗುವಿನಲ್ಲಿ ಪ್ರತಿಫಲಿಸುತ್ತವೆ. ಜನಗಳು ಯಾರ ಸಹವಾಸ ದಲ್ಲಿರುವರೋ-ಅದನ್ನು ಹೇಳಿದರೆ, ಅವರು ಸಜ್ಜನರೋ ದುರ್ಜನರೋಅಗನ್ನು ಹೇಳುವುದು ಕಷ್ಟವಲ್ಲ ವೆಂದು, ಒಬ್ಬ ವಿದ್ವಾಂಸನು ಬರೆದಿರು ವನು, ಇದು ನ್ಯಾಯವಾದ ಮಾತು. ಸಜ್ಜನರು ಸಜ್ಜನರ ಸಹವಾಸ ದಲ್ಲಿರುತ್ತಾರೆ ; ದುರ್ಜನರು ದುರ್ಜನರ ಸಹವಾಸದಲ್ಲಿರುತ್ತಾರೆ. ತಿರ ಗಂತುಗಳಲ್ಲಿಯೂ ಕೂಡ ಈ ಸಂಬಂಧವಿರುತ್ತದೆ. ಹುಲಿಗಳ ಜತೆಯಲ್ಲಿ ಇಲಿಗಳಿರುವದುಂಟೆ ? ಸಿಂಹಗಳ ಜತೆಯಲ್ಲಿ ಆನೆಗಳಿರುವುದುಂಟೆ ? ಹಾಗೆಯೇ, ದುಷ್ಟರ ಜತೆಯಲ್ಲಿ ಶಿಷ್ಟರಿರುವುದಿಲ್ಲ, ಸುಗುಣ ದುರ್ಗುಣ ಗಳೆರಡೂ, ಸಹವಾಸದಿಂದ ವೃದ್ಧಿಗೆ ಬರುತ್ತವೆ. ಆದುದರಿಂದ, ಮಕ್ಕಳಿಗೆ ಪ್ರಥಮತಃ ಸತ್ಸಹವಾಸವನ್ನುಂಟುಮಾಡಬೇಕು, ವಿದ್ಯಾವಿನಯಸಂಪತ್ತು ಗಳನ್ನು ಸಮಗ್ರವಾಗಿ ಹೊಂದಬೇಕಾದರೆ, ಸಾವಧಾನವಾಗಿ ಶ್ರದ್ದೆ. ಯಿಂದಲೂ ಏಕಾಗ್ರಚಿತ್ತದಿಂದಲೂ, ವ್ಯಾಸಂಗಮಾಡುವುದು ಬರಬೇಕು,