ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಗ ೧ ೨೫. A #y/ MM೧೧ ೧n/v 1, vvvvvv ನಮ್ಮ ಪೌಲ್ಟಕರಲ್ಲಿ, ವರರುಚಿಯ ಗುರುಕುಲವಾಸವು ಏಕಾಗ್ರಕ್ಕೆ ಒಳ್ಳೆಯ ಉದಾಹರಣೆಯಾಗಿರುವುದು, ಈತನು ವಯಸ್ಸಾದಮೇಲೆ, ವಿದ್ಯಾಭ್ಯಾಸ ಮಾಡಬೇಕೆಂದು ಸಂಕಲ್ಪ ಮಾಡಿ, ಕಾಶಿಯಲ್ಲಿ ಒಬ್ಬ ಪಂಡಿತನ ಬಳಿಗೆ ಹೋದನು. ಆ ಪಂಡಿತನು, ಇಷ್ಟು ದೊಡ್ಡವನು »ವಿದ್ಯಾರ್ಥಿಯಾಗಿರುವುದಕ್ಕೆ ಅರ್ಹನೋ ಅಲ್ಲವೋ ಎಂಬುದನ್ನು ಪರೀಕ್ಷಿ ನವ ದಕ್ಕೊಸ್ಕರ, ಅವನ ಕೈಯಲ್ಲಿ ಸಂಪೂರ್ಣವಾಗಿ ಎಣ್ಣೆಯಿಂದ ತುಂಬಲ್ಪಟ್ಟ ಒಂದು ಬಟ್ಟಲನ್ನು ಕೊಟ್ಟು, ಆ ಬೀದಿಯ ಕೊನೆಯಲ್ಲಿದ್ದ ತನ್ನ ಮಿತ್ರನಿಗೆ ಅದನ್ನು ತಲುಪಿಸಿ ಬಂದರೆ ತಾನು ಪಾರಹೇಳು ವುದಾಗಿ ಹೇಳಿ, ಆ ಯೆಣ್ಣೆಯಲ್ಲಿ ಒಂದು ತೊಟ್ಟು ನಶ್ಯವಾದರೂ ಪಾರ ಹೇಳುವದಿಲ್ಲವೆಂದೂ ಹೇಳಿದನು. ಅದಕ್ಕೆ ಒಪ್ಪಿ, ವರರುಚಿಯು ಆ ವಂಡಿತನ ಆಜ್ಞೆಯನ್ನು ನೆರವೇರಿಸುವುದಕ್ಕೆ ಹೊರಟನು. ಕೂಡಲೆ, ಆ ವಂಡಿ ಶನ ಅಚ್ಛೆಯಿಂದ, ಇವನಿಗೆದುರಾಗಿ ವಾದ್ಯ ವಿಶೇಷಗಳೊಡನೆ ಅನೇಕ ನರ್ತಕಿಯರು ಬಂದರು ; ಅನಂತರ ಅನೇಕ ವಿದ್ಯಾರ್ಥಿಗಳು ನಾನಾವಿಧ ವಾರ ಕೋಲಾಹಲಗಳನ್ನು ಮಾಡಿಕೊಂಡು ಬಂದರು, ದನ ಕರು ಮೊದಲಾದುವುಗಳೂ ಬಂದುವು ದೃಷ್ಟಿ ಯನ್ನ ಮನಸ್ಸನ್ನೂ ಆಕರ್ಷಿಸ ತಕ್ಕೆ ಅನೇಕ ವಿಘ್ನಗಳುಂಟಾದುವು. ಆದರೂ, ವರರುಚಿಯ ದೃಷ್ಟಿಯ ಬುಕ್ಕಿಯ ಸಂಪೂರ್ಣವಾಗಿ ಆ ಬಟ್ಟಲಿನ ಮೇಲೂ ಎಣ್ಣೆಯ ಮೇಲೂ ಇದ್ದುವು. ಅವನು ಬಹುಜಾಗರೂಕನಾಗಿ ದಾರಿಯನ್ನೂ ಬಟ್ಟಲನ್ನೂ ನೋಡಿಕೊಂಡು, ಉದ್ದಿಷ್ಟನಾದ ಪಂಡಿತನ ಮನೆಗೆ ಹೋಗಿ, ಅದನ್ನು ಕೊಟ್ಟು, ಅದು ತಲುಪಿದುದಕ್ಕೆ ಆ ಪಂಡಿತನ ಲೇನವನ್ನು ತೆಗೆದು