ಪುಟ:ವಿದ್ಯಾರ್ಥಿ ಕರಭೂಷಣ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ vvvvv ಲಾಯರುಗಳ ಇಂದ್ರಜಾಲ ಮಹೇಂದ್ರಚಾಲಿ ವಿದ್ಯೆಗಳನ್ನೆಲ್ಲ ಭೇದಿಸಿ, ಅವರ ಅಧರ್ಮವಾದಗಳನ್ನು ನ್ಯಾಯಾಧಿಪತಿಗೆ ತೋರಿಸಿ, ಕೊನೆಗೆ ತನ್ನ ಆಸ್ತಿಯನ್ನು ತಾನು ನಡೆದನು, ಈ ರೀತಿಯಾಗಿ ಮೂರು ವರ್ಷ ತಪಸ್ಸು ಮಾಡಿದುದರಿಂದ, ಅವನ ಆಸ್ತಿಯು ಅವನಿಗೆ ದೊರೆತುದುದಲ್ಲದೆ, ಚಕ್ರ ವರ್ತಿಯ ಕೂಡ *” ಈ ಪ್ರಪಂಚವನ್ನೆಲ್ಲ ಗೆಲ್ಲುವುದು ಕಷ್ಟವಲ್ಲ ; ಡಿಮಾಸ್ತನೀಸನನ್ನು ಗೆಲ್ಲುವುದು ಅಸಾಧ್ಯ.” ಎಂದು ಹೇಳುವ ಸ್ಥಿತಿಗೆ ಬಂದನು. ೧' ಈ ಮೂರು ಜನಗಳ ಚರಿತ್ರೆಗಳನ್ನೂ ಪರಿಶೀಲಿಸಿ, ವಿದ್ಯಾರ್ಥಿಗಳು, ವ್ಯಾಸಂಗಮಾಡುವುದರಲ್ಲಿ ಯಾವರೀತಿಯಾದ ತಪಸ್ಸು ಆವಶ್ಯಕವೋಅದನ್ನು ಗೊತ್ತುಮಾಡಿಕೊಂಡು, ಅದನ್ನು ಆಚರಣೆಗೆ ತಂದುಕೊಳ್ಳುವುದು ಮುಖ್ಯ ಕರ್ತವ್ಯವು, ಈ ವಿಷಯಕ್ಕೆ ವಿದ್ಯಾರ್ಥಿಗಳ ಗಮನವು ಕೊಡ ಲ್ಪಟ್ಟ ಹೊರತು, ಅಮಗೆ ಶ್ರೇಯಸ್ಸುಂಟಾಗುವುದಿಲ್ಲ. ಹಿಡಿದ ಕೆಲಸಗಳು ಸಮರ್ಪಕವಾಗಿ ನಡೆಯಬೇಕಾದರೆ, ಆ ಕೆಲಸ ಗಳ ಮರ್ಮಗಳನ್ನು ತಿಳಿದು ಕೊಂಡು, ಏಕಾಗ್ರಚಿತ್ತದಿಂದ ಆ ಕೆಲಸವನ್ನು ಮಾಡಬೇಕು, ಅಂತಹ ಕೆಲಸವನ್ನು ಮಾಡುವುದರಲ್ಲಿ, ನಿಮಿಷಾರ್ಧದೊ ಳಗಾಗಿ ಫಲವಾಗಬೇಕೆಂದು ಅಪೇಕ್ಷಿಸಬಾರದು, ಗೊಡ್ಡಿ ಯಾದವಳಿಗೆ ಅಶ್ವ ಪ್ರದಕ್ಷಿಣದಿಂದ ಪತ್ರಸಂತಾನವಾಗುವುದೆಂದು ಹೇಳಲ್ಪಟ್ಟಿರುವುದು. ಒಂದು ಪ್ರದಕ್ಷಿಣವನ್ನು ಮಾಡಿದ ಕೂಡಲೇ, ಗರ್ಭೋತ್ಪತ್ತಿಯಾಯಿತೇ ಇಲ್ಲವೇ ಎಂದು ಹೊಟ್ಟೆಯನ್ನು ಮುಟ್ಟಿ ನೋಡಿಕೊಂಡರೆ, ಅವಳು ಪರಿ ಹಾಸಕ್ಕೆ ಗುರಿಯಾಗುವಳಲ್ಲವೆ ' ಗೊಡ್ಡಿ ಯರಿಗೆ ಗರ್ಭಕೋಶವು ತಲೆಕೆಳ