ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ .ಗಾ ಧಿ” ಕರಭೂಷಣ ಗದ್ಯ ಪದ್ಯಾತ್ಮಕವಾದ ಅನೇಕ ಗ್ರಂಧಗಳನ್ನು ವಾಚೊವಿಧೇಯವಾಗು ವಂತೆ ವ್ಯಾಸಂಗಮಾಡಿ, ಧಮ್ಮ ಸೂಕ್ಷ್ಮಗಳನ್ನು ತಿಳಿದು ಕೊಂಡನು. ಹೀಗೆ ವ್ಯಾಸಂಗಮಾಡತಕ್ಕ ಕಾಲದಲ್ಲಿ, ಒಂದು ನೆಲಮಾಳಿಗೆಯನ್ನು ಮಾಡಿ ಕೊಂಡು, ತಾನಿರುವ ಸ್ಪಳವು ಯಾರಿಗೂ ಗೊತ್ತಾಗದಂತೆ ಏರ್ನಡಿಸಿ, ತಲೆಯಲ್ಲಿಯೂ ಮುಖದಲ್ಲಿಯೂ ಒಂದು ಭಾಗ ಮಾತ್ರ ಕ್ಷೌರಮಾಡಿ ಕೊಂಡು, ಮತ್ತೊಂದು ಭಾಗದಲ್ಲಿ ಕೂದಲುಗಳನ್ನು ಬೆಳೆಸಿಕೊಂಡಿ ದೈನು ಹೀಗೆ ಮಾಡಿಕೊಳ್ಳುವುದಕ್ಕೆ ಕಾರಣವನ್ನು ಅವನೇ ಬರೆಗಿರು ವನು. ಅವನು ಹೇಳಿರುವುದೇನೆಂದರೆ ... ವ್ಯಾಸಂಗಮಾಡತಕ್ಕವರಿಗೆ, ಸ್ನೇಹಿತರೂ ಪರಿಚಿತರೂ ಇರಕೂಡದು. ಏಕಾಗ್ರಚಿತ್ತದಿಂದ ಓದುವುದಕ್ಕೆ ಅವಕಾಶವಿರಬೇಕು, ಅಂಧ ಅವಕಾಶ ವಿದ್ಯಾಗ್ಯೂ, ಬಂಧುಮಿತ್ರರನ್ನು ನೋಡಬೇಕೆಂಬ ಅಭಿಲಾಷೆ ಬರುವು ದುಂಟು. ಇಂಧ ಅಭಿಲಾಷೆ ನೆರವೇರದಿರಲೆಂದು, ವಿರೂಪವಾಗಿ ಕ್ಷೌರ ಮಾಡಿಕೊಂಡು, ವಿಷಯಾಂತರಗಳಿಗೆ ಮನಸ್ಸನ್ನು ಕೊಡದೆ ನಾನು ಮೂರು ವರುಷಗಳು ವ್ಯಾಸಂಗಮಾಡಿದೆನು, ಈ ಮೂರು ವರುಷಗಳಲ್ಲಿ, ಸಕಲ ಶಾಸ್ತ್ರಗಳನ್ನೂ ಎಲ್ಲ ಕಾನೂನುಗಳನ್ನೂ ಓದಿದೆನು, ಮುವ್ವತ್ತು ವರು ಷಗಳಲ್ಲಿಯೂ ಅಸಾಧ್ಯವಾದಷ್ಟು ವ್ಯಾಸಂಗವು, ಈ ಯೇರ್ಪಾಡಿನಿಂದ ಮರು ವರುಷಗಳಲ್ಲಿ ಸಾಧ್ಯವಾಯಿತು. ಈ ಡಿಮಾಸ್ತಸೀಸನು, ಈ ರೀತಿಯಲ್ಲಿ ವ್ಯಾಸಂಗಮಾಡಿ, ಧರಶಾಸ್ತ್ರ ಗಳಲ್ಲಿ ಅಸಾಧಾರಣವಾದ ಕೌಶಲ್ಯವನ್ನು ಹೊಂದಿ, ತಮ್ಮ ಚಿಕ್ಕಪ್ಪನ ಮೇಲೆ ತನ್ನ ಆಸ್ತಿಗೋಸ್ಕರ ಪುನಃ ವ್ಯವಹಾರ ಮಾಡಿ, ಅವನ ಕಡೆಯ