ಪುಟ:ವಿದ್ಯಾರ್ಥಿ ಕರಭೂಷಣ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ವಿದ್ಯಾರ್ಧಿ ಕರಭೂಷಣ ದೃಷ್ಟಾಂತವು, ಮದರಾಸ್‌ ಪ್ರೆಸಿರ್ಡೆಸಿ ಕಾಲೇಜಿನ ನೂರಾವಸ್ಥೆ ಯಲ್ಲಿ, ಮೆ|| ಪವ೮ರವರು ಪಾರಕರಾಗಿದ್ದರು. ಇವರಲ್ಲಿ ವ್ಯಾಸಂಗ ಮಾಡಿದವರೊಳಗೆ ಪ್ರಾಯಕವಾಗಿ ಮುಕ್ಕಾಲುಪಾಲು ಜನಗಳು, ದಿವಾನ ಗಿರಿಯನ್ನೂ, ಅಧವಾ ದಿವಾನಗಿಗೆ ಸಮಾನವಾದ ಇತರ ಅಧಿಕಾರಗ ಳನ್ನೂ ಮಾಡಿ, ಸಕಲವಿದ್ಯಾವಿಶಾರದರೆಂಬ ಕೀರ್ತಿಯನ್ನೂ, ಧರ್ಮಮಾ ರ್ಗೈಕಪರಾಯಣರೆಂಬ ಯಶಸ್ಸನ್ನೂ ಸಂಪಾದಿಸಿದರು. ನಮ್ಮ ಸಂಸ್ಕಾ ನಕ್ಕೆ ಮೊದಲನೆಯ ದಿವಾನರಾದ ಮ|| ರಂಗಾಚಾರ್ರವರೂ, ನಮ್ಮ ರಿಟೈರ್ ದಿವಾನರಾದ ಮ|| ಆನಂದರಾಯರವರ ತಂದೆಗಳಾದ ರಾಜಾ. ಸರ್‌, ಟಿ. ಮಾಧವರಾಯರವರೂ, ಟ್ರಾವನ್ನೂರ್‌ ದಿವಾನಗಿರಿಮಾಡಿದ ವರಲ್ಲಿ ಅದ್ಭುತವಾದ ಶಕ್ತಿಯನ್ನು ಹೊಂದಿದ್ದ ಸರ್, ಶೇಷಯ್ಯ ಶಾಸ್ತ್ರಿ ಗಳವರೂ, ಇಂದೂರ್‌ ದಿವಾನಗಿರಿಯನ್ನು ಮಾಡಿ ಭಾರತೀಯರಲ್ಲಿ ನಿಸ್ಸ ಹಚಕ್ರವರ್ತಿಗಳೆಂಬುದಾಗಿಯೂ ಅಭಿನವಮಹರ್ಷಿಗಳೆಂಬುದಾಗಿಯೂ ದಿಗಂತ ವಿಶ್ರಾಂತವಾದ ಕೀರ್ತಿಯನ್ನು ಪಡೆದ ದಿರ್ವಾ ಬಹದ್ದೂರ್‌ ರಘುನಾಥರಾಯರವರೂ, ಇನ್ನೂ ಇವರಂತಹ ಅನೇಕ ದೊಡ್ಡ ಮನು ಹ್ಯರೂ, ಮೆ|| ಪವಲ್‌ರವರ ಶಿಷ್ಯರು. ಶರೀರಸಂಬಂಧವಾದ ಮಾತಾಪಿತೃಗಳ ಗುಣಗಳು ಮಕ್ಕಳಲ್ಲಿ ಕಾಣು ವುವು ಅದೇರೀತಿಯಲ್ಲಿ ವಿದ್ಯಾಗುರುಗಳ ಗುಣಾತಿಶಯಗಳೂ ಶಿಷ್ಯರಲ್ಲಿ ಮರ್ತಿಭವಿಸುವುವು. ಯಾವ ಗುರುಗಳು, ತಾವು ಹೇಳತಕ್ಕ ಪಾಠ ಗಳನ್ನು ಸಮಗ್ರವಾಗಿ ತಿಳಿದುಕೊಂಡಿರುವರೋ, ಅಂಧವರಿಗೆ, ತಾವು ಹೇಳ ತಕ್ಕ ಗ್ರಂಧದ ಪುಸ್ತಕಗಳನ್ನು ಅವಲೋಕಿಸುವುದು ಕೂಡ ಆವಶ್ಯಕ