ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೬೭ MY ಸಾಯುವುದಕ್ಕಿಂತ ಬದುಕಿದ್ದರೆ ಯಥೋಚಿತವಾಗಿ ಒಳ್ಳೆಯ ಕೆಲಸಗ ಳನ್ನು ಮಾಡಿ ತಾನು ಮಾಡಿದ ಪಾಪವನ್ನು ಪರಿಹರಿಸಿಕೊಳ್ಳಬಹುದೆಂದು ಪರಾಲೋಚಿಸಿ, ಮರಣದಂಡನೆಗೆ ಬದುಲಾಗಿ ಇಂಧ ಮುಳ್ಳಿನ ಮಂಚದ ಮೇಲೆ ಮಲಗತಕ್ಕೆ ದಂಡನೆಯನ್ನು ವಿಧಿಸಬೇಕೆಂದು ಪ್ರಾರ್ಥಿಸಿದನು. ದೊರೆಯು ಅದೇರೀತಿಯಲ್ಲಿ ಒಪ್ಪಿ, ತೀಕ್ಷ್ಯವಾದ ಕಬ್ಬಿಣದ ಮುಳ್ಳುಗ ಳುಳ್ಳ ಮಂಚವನ್ನು ಮಾಡಿಸಿ, ಅದರ ಮೇಲೆ ಇವನು ಮಲಗಿರಬೇಕೆಂಬು ದಾಗಿಯೂ, ಹಾಗೆ ಮಾಡದಿದ್ದರೆ ಇವನಿಗೆ ಶಿರಚ್ಛೇದವನ್ನು ಮಾಡಬೇಕೆಂ ಬುದಾಗಿಯೂ ಆಜ್ಞೆ ಮಾಡಿದನು. ಈ ಶಿಕ್ಷೆಯನ್ನು ಅನುಭವಿಸುವುದೇ ಸರಿಯೆಂದು ಆ ಬ್ರಾಹ್ಮಣನು ಸಂಕಲ್ಪ ಮಾಡಿ ಮಂಚವನ್ನು ಹತ್ತಿದನು. ಆ ಮುಳ್ಳುಗಳು ಮೈಗೆ ಚುಚ್ಚಿ ಕೊಂಡು, ಅನಿರ್ವಚನೀಯವಾದ ನೋವುಂ ಟಾಯಿತು. ಶಿರಚ್ಛೇದದಿಂದ ಪ್ರಾಣ ಹೋಗುವುದಕ್ಕೆ ಒದುಲಾಗಿ ಈ ಯಾತನೆಯಿಂದ ಹೋಗಲೆಂದು, ಅವನು ಹರವನ್ನು ಮಾಡಿದನು. ಕೆಲವು ದಿವಸಗಳೊಳಗಾಗಿ, ಇವನ ಶರೀರದ ಚರವು ಭೇಂಡಾಮೃಗದ ಚರಕ್ಕಿಂ ತಲೂ ಗಟ್ಟಿ ಯಾಗಿ, ರಕ್ತ ಬರುವುದು ನಿಂತುಹೋಯಿತು. ಶರೀರದಲ್ಲೆಲ್ಲ ಗಡ್ಡೆಗಳು ಕಟ್ಟಿ ಕೊಂಡುವು ಹೀಗೆ ಏಳುವರುಷಗಳು ಕಳೆದುವು. ಅನಂ ತರ, ಇವನ ಸಾಹಸವನ್ನು ನೋಡಿ ಆಶ್ಚಯ್ಯಪಟ್ಟು, ಮಹಾರಾಜನು ಇವ ನಿಗೆ ಬಿಡುಗಡೆಮಾಡಿಸಿದನು, ಆಮೇಲೆ ಬ್ರಾಹ್ಮಣನು ತನ್ನ ಮನೆಗೆ ಹೋಗಿ. ಸುಪ್ಪತ್ತಿಗೆಯ ಮೇಲೆ ಮಲಗಲು, ಅದು ಅವನಿಗೆ ಸುಖಕರವಾಗಿರಲಿಲ್ಲ. ಆಮೇಲೆ ಅವನು ಅದುವರೆಗೂ ಅಭ್ಯಾಸವಾದಂತೆಯೇ ಮುಳ್ಳಿನ ಮಂಚ ವನ್ನು ಮಾಡಿಸಿ ಅದರಮೇಲೆ ಮಲಗಲು, ಸುಖವಾಗಿ ನಿದ್ರೆ ಬಂದಿತು.