ಪುಟ:ವಿದ್ಯಾರ್ಥಿ ಕರಭೂಷಣ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ವಿದ್ಯಾರ್ಥಿ ಕರಭೂಷಣ ಸೌಖ್ಯವೂ ಸಂಪತ್ತೂ ಹೇಗಾದರೂ ಇರಲಿ ; ಲೋಕಾಂತರದಲ್ಲಿ ಬಳ್ಳೆಯ ಪದವಿ ನಮಗೆ ಲಭ್ಯವಾಗುವಂತೆ ಮಾಡಿಕೊಳ್ಳಬೇಕು.' ಎಂದು ನಮ್ಮಲ್ಲಿ ಅನೇಕರು, ಸನ್ಯಾಸಿಗಳಾಗಿಯ, ಸಾಧುಗಳಾಗಿಯ, ಫಕೀರರಾ ಗಿಯ, ಯೋಗಿಗಳಾಗಿಯೂ ಇರುತ್ತಾರೆ. ಇವರಲ್ಲಿ ಸ್ವಶಕ್ತಿಯಿಂದ ಸುಖವಾಗಿ ಜೀವನವನ್ನು ಸಂಪಾದಿಸಿಕೊಳ್ಳುವುದಕ್ಕೆ ಮನಸ್ಸಿಲ್ಲದೆ ಉದರ ನಿಮಿತ್ತವಾಗಿ ಪರಮೈ ಕಾಂತಿವೇಷವನ್ನು ಧರಿಸಿರತಕ್ಕವರು, ನೂರಕ್ಕೆ ತೊಂಬತ್ತೊಂಬತ್ತು ಜನಗಳಿಗಿಂತ ಕಡಮೆಯಾಗಿರುವುದಿಲ್ಲ, ಇವರ ಚರೈ ಗಳಿಗೂ, ಇವರ ವೇಷಗಳಿಗೂ, ಲೇಶವೂ ಸಂಬಂಧವಿರುವುದಿಲ್ಲ, ನಿಜ ವಾದ ವೈರಾಗ್ಯವು, ಇವರಲ್ಲಿ ಬಹಳ ಕೊಂಚಜನಗಳಿಗಿರುವುದು ಇವರಲ್ಲಿ ಅನೇಕರಿಗೆ, ಈ ಲೋಕದ ಸೌಖ್ಯವು ಪರಿಪೂರ್ಣವಾಗಿರುವದಿಲ್ಲ. ಲೋಕಾಂತರದಲ್ಲಿ, ನರಕಯಾತನೆ ವಿನಾ ಇನ್ಯಾವುದೂ ಲಭ್ಯವಾಗುವು ದಿಲ್ಲ. ಈ ಪಾಪಿಗಳಿಗೆ c« ಈ ಲೋಕದಲ್ಲಿ ನಾವು ಮಾಡತಕ್ಕೆ ಕರೆಗಳೇ ಲೋಕಾಂತರಕ್ಕೆ ಸೋಪಾನ ಎಂಬ ವಿಷಯವು ಗೊತ್ತಾಗಿರುವದಿಲ . ಇದು ತುಂಬ ಶೋಚನೀಯವಾದುದು ಯಾರು ತುಂಬ ಕೆಲಸಮಾಡುವರೋ, ಅವರಿಗೆ ಇನ್ನೂ ಹೆಚ್ಚಾಗಿ ಕೆಲಸಮಾಡುವುದಕ್ಕೆ ಅವಕಾಶವಿರುವುದು, ಅವರು ಬೇಕಾದಷ್ಟು ಕಾಲ ವನ್ನು ಗೊತ್ತು ಮಾಡಿ ಕೊಳ್ಳುವರು. ಆ ಕಾಲದಲ್ಲಿ ಎಂಧ ವಿಘ್ನಗಳು ಬಂದಾಗ್ಯೂ, ಉದ್ದಿಷ್ಟವಾದ ಕೆಲಸವನ್ನು ಮಾಡದೆ ಬಿಡುವುದಿಲ್ಲ. ಆ ಕೆಲಸವನ್ನು ಮಾಡಿದ ತರುವಾಯ ಇತರ ವಿಷಯಗಳಲ್ಲಿ ಗಮನಕೊಡು ವರು, ಈ ರಾಜಧಾನಿಯಲ್ಲಿ, ಒಬ್ಬ ಡಾಕ್ಟರ ಬಳಿಗೆ ಬಹಳ ಒಡವನಾದ