ಪುಟ:ವಿದ್ಯಾರ್ಥಿ ಕರಭೂಷಣ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ವಿದ್ಯಾರ್ಥಿಕರಭೂಷಣ - ದೊಡ್ಡ ಕೆಲಸಗಳನ್ನು ಮಾಡತಕ್ಕವರು, ಪ್ರತಿದಿನವೂ ಅಂಧ ಕೆಲಸ ಮಾಡುವುದಕ್ಕೆ ಕಾಲವನ್ನು ನಿಯಮಮಾಡಿಕೊಳ್ಳುವರು. ಆ ಕಾಲದಲ್ಲಿ ಕಾರಾಂತರಗಳನ್ನು ಬಿಟ್ಟು, ಚಾಂಚಲ್ಯಕ್ಕೆ ಒಳಗಾಗದೆ, ಹಿಡಿದ ಕೆಲಸ ಗಳನ್ನು ಸಾವಧಾನದಿಂದ ಮಾಡುವರು. ಕೆಲಸಮಾಡುವ ಕಾಲದಲ್ಲಿ, ತಮ್ಮ ಬುದ್ಧಿಯನ್ನು ಕೂಡ ಕಲಸದಮೇಲೆ ನಿಲ್ಲಿಸುವರು. ಅನೇಕ ವಿದ್ಯಾರ್ಥಿಗಳು, ಗ್ರಂಧ ಪುಸ್ತಕಗಳನ್ನು ಕಣ್ಣಿನಿಂದ ನೋಡುತ, ಬಾಯಲ್ಲಿ ಗಟ್ಟಿಯಾಗಿ ಗ್ರಂಧಗಳನ್ನು ಪಠಿಸುತ, ಮನಸ್ಸನ್ನು ವಿಷಯಾಂತರಗಳ ಮೇಲೆ ಬಿಡುವುದು, ಅನುಭವಸಿದ್ದವಾಗಿಯೇ ಇದೆ. ಕಣ್ಣಿನ ವ್ಯಾಪಾ ರಕ್ಕೂ ಬಾಯಿನ ವ್ಯಾಪಾರಕ್ಕೂ ಬುದ್ದಿಯ ವ್ಯಾಪಾರವು ಸೇರದಿದ್ದರೆ, ಗ್ರಂಧವು ಸ್ವಾಧೀನವಾಗುವುದಿಲ್ಲ, ಹೀಗೆ ಮಾಡಿದರೆ, ಪಾರ ಬರುವುದೇ? ಹಿಡಿದ ಕೆಲಸ ನೆಟ್ಟಗಾಗುವುದೇ ? ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಯಾಗುವರೇ ? ಸುಖವಾಗಿ ಜೀವಿಸುವುದಕ್ಕೆ ಬೇಕಾದ ಯೋಗ್ಯತೆ ಬರು ವುದೇ ? ಮನೋರಧಭಂಗವಾಗುವುದಿಲ್ಲವೇ ? ದಾರಿದ್ರವು ಪ್ರಾಪ್ತವಾ ಗುವುದಿಲ್ಲವೇ ? ಸಂಪತ್ತು ದೂರವಾಗುವುದಿಲ್ಲ ವೇ ? ಸರಸ್ವತೀಪ್ರಸನ್ನ ತೆ ಹೇಗೋ-ಹಾಗೆ ಲಕ್ಷ್ಮೀಪ್ರಸನ್ನ ತೆಯ ತಪ್ಪುವುದಿಲ್ಲ ವೇ ? ಈ ವಿಷಯ ವನ್ನು ಯೋಚಿಸತಕ್ಕ ವಿದ್ಯಾರ್ಧಿಗಳೂ, ಬೋಧಿಸತಕ್ಕ ಪಾರಕರೂ ಬಹಳ ನಿರಳರಾಗಿರುತ್ತಾರೆ, ವಿದ್ಯಾರ್ಥಿಗಳ ಇಷ್ಟ ಸಿದ್ದಿ ದೂರವಾಗುವುದಕ್ಕೆ, ಇದೇ ಮುಖ್ಯ ಕಾರಣವು, ಇದಕ್ಕೆ ಇನ್ನೂ ಒಂದು ಕಾರಣವುಂಟು. ಉಪಕ್ರಮಿಸಿದ ಕೆಲಸವನ್ನು ಪ್ರತಿದಿನವೂ ಮಾಡುತ ಬಂದರೆ, ಪ್ರತಿದಿನವೂ ಕೆಲಸಮಾಡಬೇಕೆಂಬ ಆಸಕ್ತಿಯ ಪ್ರಬಲವಾಗುವದು ; ಆಮೇಲೆ,