ಪುಟ:ವಿದ್ಯಾರ್ಥಿ ಕರಭೂಷಣ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೭೯ MMwwwmmmmmmmmmmmmmmm ಹಾರವನ್ನು ಹಾಕಿಕೊಳ್ಳುತಿದ್ದರು ಈ ಅಚೇತನವಾದ ಮಳೆಯಲ್ಲಿಯ ಕೂಡ ಅಪ್ರತಿಹತವಾದ ಧೈರ್ಯಸ್ಸರ್ಯಗಳುಂಟೆಂದು ತಿಳಿದುಕೊಳ್ಳು ವುದಕ್ಕೆ, ಅವನು ಬದುಕಿದ್ದ ಕಾಲದಲ್ಲಿ ಅವನು ತೋಗಿಸಿದ ಧೈರ್ಯ ಸ್ಪೇರ್ಯಗಳ ಪರಾಕಾಷ್ಠೆಯೇ ಮುಖ್ಯ ಕಾರಣವು, ಭಾವನೆಗೆ ಅನುಸಾರ ವಾಗಿ ಧೈರ್ಯಸ್ಸರ್ಯಗಳುಂಟಾಗುವುದುಂಟು ಯಂತ್ರ ಮೊದಲಾದು ವಗಳನ್ನು ಧರಿಸಿ ಕೆಲವು ಜನಗಳು ಪ್ರಯೋಜನ ಹೊಂದುತಲಿರುವುದು, ಇದಕ್ಕೆ ದೃಷ್ಟಾಂತವಾಗಿರುವುದು | ಈ ಪ್ರಪಂಚದಲ್ಲಿ ಮುಕ್ಕಾಲುಭಾಗವು ಸಮುದ್ರದಿಂದ ಆವರಿಸಲ್ಪ ಟ್ವಿದೆ. ಉಳಿದ ಕಾಲುಭಾಗದಲ್ಲಿ ಮುಕ್ಕಾಲು ಭಾಗವು, ಬೆಟ್ಟ ಗುಡ್ಡ ನದಿ ಸರೋವರ ಕಾಡು ಊ .ಷರಪ್ರದೇಶ - ಇವುಗಳಿಂದ ಆಕ್ರಮಿಸಲ್ಪಟ್ಟಿದೆ. ಉಳಿದ ಭೂಭಾಗವು ಬಹಳ ಕೊಂಚವಾಗಿದ್ದಾಗ್ಯೂ, ಇದರಲ್ಲಿ ಸರಿಯಾಗಿ ಕೃಷಿಯು ಮಾಡಲ್ಪಟ್ಟರೆ, ಪ್ರಪಂಚದಲ್ಲಿರತಕ್ಕ ಸ್ತ್ರೀ ಪುರುಷರಿಗೆಲ್ಲ ಉದ್ಯೋಗ ಸಿಕ್ಕುವದಕ್ಕೂ ಜೀವನವಾಗುವುದಕ್ಕೂ ಬೇಕಾದಷ್ಟು ಫಲ ವತ್ತಾದ ಭೂಮಿ ಸಿಕ್ಕುವುದು, ಅದೇ ರೀತಿಯಲ್ಲಿ ಇಪ್ಪತ್ತುನಾಲ್ಕು ಘಂಟೆ ಗಳುಳ್ಳ ಹಗಲುರಾತ್ರಿಗಳನ್ನು ಸರಿಯಾಗಿ ವಿನಿಯೋಗಿಸಿಕೊಂಡರೆ, ತಾನು ಹಿಡಿದ ಸಮಸ್ತ ಕೆಲಸಗಳನ್ನೂ ಸಮಗ್ರವಾಗಿ ಮಾಡಿ ಕೃತೃಕೃತ್ಯನಾಗು ವುದಕ್ಕೆ ಎಷ್ಟು ಕಾಲವಾವಶ್ಯಕವೋ ಅಷ್ಟು ಕಾಲವೂ ಮನುಷ್ಯನಿಗೆ ಸಿಕ್ಕಿಯೇ ಸಿಕ್ಕುವುದು, ಪೂರ್ವಾಪರಜ್ಞಾನವಿಲ್ಲದ ಸೋಮಾರಿಗಳು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ತಮಗೆ ವಿರಾಮವಿಲ್ಲ ವೆಂದು ಹೇಳಿಕೊಳ್ಳುವರು. ಇದು ಮೂರ್ಖಪ್ರಲಾಪವೇ ಹೊರತು, ಪ್ರಾಜ್ಞರ ಮಾತಲ್ಲ.