ಪುಟ:ವೀರಭದ್ರ ವಿಜಯಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

104 ವೀರಭದ್ರ ವಿಜಯಂ ಕುಲಹೀನಂ ಬಳಿಕಾತನೆ ನೆಲೆಗಾಣಿಂ ಗುಣವಿದರನಾಗಿರ್ಪಂ ವ | ದ್ವಿಲಸತ್ಕತುಗಾತನನಾಂ ಬಲಗೊಂಬೆನೆ ಮಗಳೆ ಕೇಳೆನುತ್ತಿಂದಂದಂ | ನೋಡಬಲಿಯೊಳಾವಗಂ ಸಲೆ ಗುಡಿಗಟ್ಟಿ ರ್ಪವವನಂತೆ ಬೊಮ್ಮನ ತಲೆಯಂ | ಪೊಡೆದನನಗ್ಗಳಧರ್ಮ೦ ಗೆಡಿಸಿದನಂ ಮನ್ನಿಸುವೊಡೆ ನಾನೇಂ ಮರುಳೇ || ಇನ್ನಾಂ ಮನ್ನಿವೆನೆಂದೊಡೆ ತಾರೆ ಸತ್ತುದ ಸಮಸ್ತದೇವಸಮೂಹಂ | ನಿನ್ನಯ ಗಂಡನ ನಾನಿ ರ್ಪನ್ನಂ ಮನ್ನಿಸೆನೆನುತ್ತೆ ನುಡಿದಂ ಮರ್ಖಂ | ಛ ವ|| ಇಂತೀಶ್ವರನಂ ನಿಂದೆಗೆಯ ದುರಾತ್ಮಂಗೆ ಮುಳಿದವನೊಳ್ಳಾದೇವಿ ಯಿಂತೆಂದಳ್, ದೇವೇಂದ್ರಂ ವಾರಿಜಾತೋದ್ಭವಹರಿಮೊದಲಾಗೆಯೆ ರಂಜಿಪ್ಪ ನಾನಾ ದೇವವಾತಂ ಮಹಾತಾಪಸಜನದುಸುರರ್ನಾಗಲೋಕಾಧಿನಾಧರ್ | ತೀವಿರ್ಪಾಶಕ್ತಿಯಿಂದರ್ಚಿಸ ಬಹುಭುವನಾರಾಧ್ಯ ವಿಶ್ವರಂ ಮಾ ದೇವಂ ನಿನ್ನಿಂದೆ 1 ಪೂಜ್ಯತ್ವ ಪಡೆದವನೇ ದುಷ್ಟ ಹೋ ಕೆಟ್ಟೆಯಿಂದ | ೮೬ ಅವನ ಕಣ್ಣಳೊಪ್ಪುವ ಜಗಕ್ಕವು ಕಣ್ಣಳವಾಗಿ ತೋರ್ಪುವಂ ತಾವನ ಕಾಯವೇ ಸಕಲಲೋಕಕೆ ಕಾಯಮದಾದುದೊಳ್ಳಿನಿಂ | ದಾವನ ಬಾಣಮಾವಿವಿಧವಿಷ್ಟಪಮಂ 2 ಸಲೆವುತಿರ್ಪುದಾ ದೇವಮಹೇಶನಂಘಿಗಳನರ್ಚಿಸದಿರ್ಪವರಾರ್ಧರಿತ್ರಿಯೊಳ್ ! - ೮೭ ಪರಮೇಶಂ ಮುಡಿದಿರ್ದ ಪೂವಿದು ಬಳಿಕ್ಕಂತಾಸುಧಾಸೂತಿಯಾ ಕರದಿಂ ಪೊಣ್ದ ಧಾನ್ಯಸಂತತಿಯದೆಲ್ಲಂ ನೋನಂ ನಾಡ ಶಂ | ಕರಶೇಷಂ ಸಲೆ ವೀತಿಹೋತ್ರಮುಖದಿಂದಾ ಧಾಮಂ ಕೊಳ್ಳ ತ ತುರರೆಲ್ಲಂ ಪರಮಪ್ರಸಾದಿಗಳಲಾ ನೋಡಾ ಮಹಾದೇವನಾ || 1 ಪೂಜ್ಯತೆವಡೆದವನೇ, 2 ಸಲೆಯಾವುತಿರ್ಪದಾ.