ಪುಟ:ವೀರಭದ್ರ ವಿಜಯಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xili ಈ ಲೈಬ್ರೆರಿಯಲ್ಲಿ ಈ ಗ್ರಂಧ ಶೋಧನೆಗೆ ಆಧಾರವಾದ ಕೈಬರೆಹದ ಪ್ರತಿಯು ಒಂದು ಮಾತ್ರವೇ ಇದ್ದಿತು ಅದರಲ್ಲಿ ನೂರಾರು ಪದ್ಯಗಳಲ್ಲಿ ಲೇಖಕರ ಆಪ್ತ ತೆಯಿಂದುಂಟಾದ ವರ್ಣಭಂಗ ಪಾದಭಂಗ, ಪದಭಂಗ ಮತ್ತು ಛಂದೋಭಂಗವೇ ಮುಂತಾದ ಅನೇಕದೋಷಗಳು ಕಂಡುಬಂದರೂ, ಪ ತ್ಯಂತರವನ್ನು ಎಲ್ಲಿಯಾ ದರೂ ಸಂಪಾದಿಸಬಹುದೆಂಬ ನಂಬುಗೆಯಿಂದ ಈ ಗ್ರಂಥವನ್ನು ಶೋಧಿಸಿ ಮುದ್ರಿ ಸಲು ಪ್ರಾರಂಭಿಸಿದ್ದಾಯಿತು ಆದರೆ ಅನೇಕ ಕಡೆ ವಿಚಾರಿಸಿದರೂ, ಬೇರೆ ಪ್ರತಿಯಾ ವುದೂ ದೊರೆಯದೇ ಇದ್ದುದರಿಂದ ಲೈಬ್ರರಿಯ ಏಕಮಾತ್ರ ಪ್ರತಿಯನ್ನೇ ಶರಣು ಹಕ್ಕು, ಅದರಲ್ಲಿದ್ದ ತಪ್ಪುಗಳನ್ನು ಯಧಾಮತಿಯಾಗಿ ತಿದ್ದಿ, ಹಾಗೆ ತಿದ್ದಿದ ಪಾರಗಳನ್ನು ಮೇಲೆ ಬರೆದೂ, ಅವುಗಳಿಗೆ ಪ್ರತಿಯಾಗಿಯೂ, ಅರ್ಧವಾಗದೆಯ ದೋಪಯಕ್ತವಾಗಿಯೂ, ಅಸಮಂಜಸವಾಗಿಯೂ ಕಂಡುಬಂದ ಮಾತ್ರಕೆಯಲ್ಲಿನ ಪಾರಗಳನ್ನು ಆಯಾಯ ಪುಟದ ಕೆಳಗೆ ಬರೆದೂ ತೋರಿಸಲಾಗಿದೆ ಅಬದ್ಧ ಮಯವೂ, ಅನೇಕ ಕಡೆ ಗ್ರಂಧಲೋಪವುಳ್ಳದೂ ಆದ ಒಂದು ಪ್ರತಿಯ ಸಹಾಯ ದಿಂದಲೇ ಪುಸ್ತಕವನ್ನು ಮುದಿ ಸುವುದು ಎಷ್ಟು ಶ್ರಮಸಾಧ್ಯವೆಂಬುದನ್ನರಿತ ಸಹೃದಯರಾದ ಪಾರಕರು ಈ ಗ್ರಂಧದ ಶೋಧನೆಯಲ್ಲಿಯೂ ಮುದ್ರಣದಲ್ಲಿಯೂ ಪ್ರಮಾದದಿಂದಾಗಿರಬಹುದಾದ ತತ್ತ್ವಗಳನ್ನು ತಿದ್ದಿಕೊಳ್ಳಬೇಕಾಗಿ ಕೋರುವ, ಎಂ ಎಸ್ ಬಸವಲಿಂಗಯ್ಯ, Issistan! Curator, Orientul Library