ಪುಟ:ವೀರಭದ್ರ ವಿಜಯಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ವರರೀತಿಭಾವದಿಂ ಶಂ ಕರಭಕ್ತರ ತರದಿನೆಸೆವುದೀ ಸತ್ಯಾವ್ಯಂ | ಮಲ್ಲಿಗೆಗಂಪಿನಂತೆ ಪೊಸಮಾಂದಳಿರಂತ ಸರೋಜದಂತೆ ಕಂ ಕೆಲ್ಲಿಯಜೊಂಪದಂತೆ ಸಲ ತೆಂಕಣತಂಬೆಲರಂತೆ ಕಾವನಾ | ಬಲ್ಲುಲಿಯಂತೆ ಕೂರ್ತ ಮನದನ್ನಳ ಕೂಟದ ಸೌಖ್ಯದಂತಿಳಾ ವಲ್ಲಭವೀರಭದ್ರನ ಕವಿತ್ವರಸಂ ಸೊಗಸೀವುದಾವಗಂ | ಇದು ಲಕ್ಕಣದಾಡುಂಬೊಲ ನಿದು ಸಕ್ಕದದೇ ಗಾಡಿನೆಲಸಿದ ನಾಡಿಂ | ಅದು ದೇಶೀಯದ ಬೀಡೆನಿ | ಪುದು ನವರಸಭರಿತನವ್ಯಕಾವ್ಯಂ ದಿವ್ಯಂ || ಇದು ಕವಿಗಳಕರ್ಣಾಮೃತ ಮಿದುರಸಿಕರಸಾಯನಂ ಬಟಿಕ್ಕಗಲೋಪ | ರ್ಗಿದು ಜವಳಿಗೊಳಿಪಮಂತ್ರದ ಸದನಂ ತಾನೆನಿಸುತಿರ್ಪುದೀ ಸತ್ಕಾವ್ಯಂ || ಶ್ರೀಕಂರವಂಶವಾರಿಧಿ ರಾಕಾಬ್ಬಂ ಚಿಕ್ಕವಿರುಪನಾದೃವನೆನಿ | ಪೀಕಾಮನೃಪಂ ತನುವಿಡಿ ದಾಕಾಮನೊ ಎನಿಸುತಯ್ದೆ ರಂಜಿಸುತಿರ್ಪ೦ || ಆತಂಗೀಜನ್ಮ ದೊಳೆಯ ಜಾತಂ ಕೈಗೂಡಿಸಿರ್ದ ಮೋಕ್ಷಾಂಗನೆಯನೆ | ರೀತಿಯಿನೊಪ್ಪಿ ರ್ಪತಿ ಕಾತನಸತಿ ವೀರಮಾಖ್ಯೆ ಮಿಗೆ ಸೊಗಯಿಸುತಂ || ಆಕೆಯ ಪುಣೋದರಕವು ಲಾಕರದಲ್ಲೊಗೆದ ರಾಜಹಂಸಂ ಪುಣ್ಯ | ಶ್ಲೋಕಂ ಶಿವಭಕ್ತಿಯಿದೆ ಬ್ಲಾಕಾಲಂ ಸೊಗಯಿಪಂ ವಿರೂಪಾಕ್ಷನೃಪಂ |