ಪುಟ:ವೀರಭದ್ರ ವಿಜಯಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ವರನೇತ್ರತ್ರಯಮಿರ್ದುಂ ಗಿರಿಜಾಸಂಶ್ಲೇಷಪಾರವಶ್ಯದ ಭರದಿಂ | ದರೆಗಣ್ಣನಾಗಿ ಚಿತ್ರ ಕ್ಕಿರವೆನಿಸಿದ ವಿಶ್ವನಾಧನೀಗಭಿಮತಮಂ || ಈಪರಿಯಲ್ಲಿ ವಿಶ್ವಪತಿ ಸರಜನಂಗಳನೆಯ್ದೆ ಪಾಲಿಸು ತಾಪರಿತೋಷದಿಂದಖಿಳವೈಭವದಿಂದತಿಸೌಖ್ಯದಿಂದ ಕಾ | ಶೀಪುರಿಯಲ್ಲಿ ರಂಜಿಸುವಿನಂ ನಡೆತಂದುದು ಚೈತ್ರಮಾಸವು ದೀಪನಕಾರಿ ಭೋಗಿನಿವಹಕ್ಕೆ ವಿಯೋಗಿಗೆ ವೈರಿ ತಾನೆನಲ್ | ಲಲಿತಾಮ್ರಂ ಛತ್ರಂ ಕೋ ಕಿಲನಿನದಂ ಭೇರಿ ಪೂಗಪುಷ್ಪಂ ಚಮರಂ | 1 ಗಿಳಿಗಳಾಯಕರೆನೆ ಕಂ ಗೂಳಿಸಿರ್ಪಂ ರಾಜವಿಭವದೊಳ್ಳಧುರಾಜಂ || ವ|| ಆ ಸಮಯದೊಳ್‌, ಸರಸಂಭತ್ತ ವಸಂತವಲ್ಲಿಯೆನಿಸಿರ್ಪಂಭೋಜಪತ್ರಾಕ್ಷಿಯಂ ನೆರೆದೋರಂತೆ ಬೆವರ್ತು ನಾಡೆ ಬಳಯ್ತರ್ಪಂತೆ ಸೌರಭ್ಯದಿಂ | ಬರಿದುಂ ಶೈತ್ಯದಿನಂತು ಮಂದಗತಿಯಿಂದಲ್ಲಾಗಳುಂ ಸೌಖ್ಯದು ತರಮಂ ಬೀರುತೆ ಬಂದುದಾಸಮಯದೊಳಂಗಾಳಿಯಾನಂದದಿಂ || ವ!! ಆಗಲ್, ಮುನಿಗಳವೋಮರಹಿತಂ 2 ಘನತರನಾಕಂಬೊಲೆಯ ಸುಮನೋವಾಸಂ | ವನನಿಧಿಯಂತುಕ್ಕಳಿಕಾ ಜನನಕ್ಕಿಂಬಾಗಿ ನಂದನಂ ರಂಜಿಸುಗುಂ | 1 ಗಿಳಿಗಳ್ಳಕ್ಕಿಪರೆನೆ. 2 ಘನತರಸಗ್ಗಂಬೊಲಯ್ಕೆ, 23