ಪುಟ:ವೀರಭದ್ರ ವಿಜಯಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 ವೀರಭದ್ರ ವಿಜಯಂ ರಕರಿಪು ಸುರಸೇನಾನಾ ಯಕನಡಗಡೆಯಲ್ಲಿ ಬಂದನಾಪರಶಿವನಾ ! ಪಿಂತೇಕಾದಶರುದ್ರ ರ್ಮುಂತೆ ಮಹಾಕಾಳನಂದಿಗಳ ಡೆತರಲತಿ | ಸಂತೋಷದೊಳಾವುವವನ ಮಂ ತೀವ್ರದೆ ಸಾರ್ದನಿಂದುಶೇಖರನಾಗಳ್ || ವರಮಕರಂದವೆಂಬ ಜಲದಲ್ಲಿ ಮುಟುಂಗಿ ಪವಿತ್ರನಾಗಿ ಬಂ ಧುರವೆನಿಸಿರ್ಪ ಪುಷ್ಟರಜವೆಂಬ ವಿಭೂತಿಯನಾಂತು ಮಲ್ಲಿಕೊ ರಮುಖಪುಷ್ಪವೃಂದದ ಸುವಾಸನೆಯಂ ಸಲೆ ಕಾಣ್ಗೊಂಡು ತಾ ನಿರದಿದಿರಂದನಾಗಳಭವಂಗೆ ಮನೋಹರಮಂದಮಾರುತಂ | ವ|| ಅಂತಿದಿರಂದ ಮಂದಮಾರುತನಂ ಮನ್ನಿಸಿ ವಿಶ್ವನಾಧಂ ವೃಷಭೇಶ್ವ ನಿಂದವನಿತಳಕ್ಕವತರಿಸಿ ತನ್ನೊಡನೇuಂದ ನಂದಿಮುಖ್ಯಗuಂಗಳಂ ಪೊಅವಳಂ ದೊಳ್ಳಿಲಸಿ ಪಾರತಿಯ ಕೈಲಾಗಿನೊಳಖಿಳಾಪ್ಪರಸ್ತ್ರೀಪರಿವೃತನಾಗಿ ನಂದನ ಬೊಕ್ಕು ನಡೆತರ್ಪಾಗಳೇ, ಮಾರಂ ದಿಗ್ವಿಜಯಕ್ಕಂ ದೂರಂತೆ ತೆರಳು ದಕ್ಕೆ ಪೊಯ್ತಿದ ಪೊಸ ಗೂ | ಡಾರಂಗಳೆಂಬವೂಹ ಕಾರಂಗಳನಂತಮಿರ್ದುವಾವುಪವನದೊಳ್ || ತಳಿರಿಂ ಏಕಮಂ ಪೂವಿಂ ದಳಿಯಂ ತನಿವಣ್ಣಳಿಂದೆ ಶುಕಸಂತತಿಯಂ | ನೆಬಲಿಂ ನವಿಲಂ ರಕ್ಷಿಸಿ ಬೆಳೆದಿನಿಮಾವನರತರುವಿನಂತೆಸೆದಿರ್ಕು೦ || ಲಲಿತಮ್ಮದೂಕ್ತಿಯಿಂದ ತನುಸೌರಭದಿಂ ಮೊಗಗೂಟದಿಂದ ಕಂ ಗೊಳಿಸುವ ಚೆಲ್ಪನಿಂದೆ ಸಲೆ ಸಂಗದಿನೈದೆತಿಪ್ಪಿಂದ್ರಿಯಕ್ಕೆಯ | ಗೃಳಸೊಗಸೀವ ನಾರಿಯವೊಲಾಜಡಿಯಿಂಚರದಿಂದ ಭೂಗಳಿಂ ಫಳದೆ ನೆಬಲ್ಗಳಿಂದೆ ತಳಿರಿಂದೆಸೆದಿರ್ದುವು ಚೂತವಲ್ಲಿಗಳ್ | ಒಗೆದನುರಾಗದಿಂದೆ ನವಪಕ ಫಳಕ್ಕೆಳಸುತ್ತೆ ಸಾರ್ದದಂ ಮುಗುಟ್ಟರೆಗಣ್ಣಳೊಪ್ಪುತಿರೆ ಸೇವಿಸುತಿರ್ದ ಶುಕಂ ನಿವಿರ್ದು ಕೂ |