ಪುಟ:ವೀರಭದ್ರ ವಿಜಯಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

49 ಪಂಚಮಾಶ್ವಾಸಂ ವ॥ ಮತ್ತಮಾ ಮುನಿವರರ್ಪರಮೇಶ್ವರನಂತೆ ಸತ್ಯಾಸ್ಪದರುಂ, ರಾಮ ಚಂದ್ರನಂತೆ ಧಮ್ಮ ಶಾಸ್ತ್ರಕೋವಿದರುಂ, ಮಂತ್ರಿಜನದಂತೆ ಯೋಗಾನ್ವಿತರುಂ, ಶಿಶಿ ರಕಾಲದಂತೆ ತಪೋವಿರಾಜಿತರುಂ, ಋಷ್ಯಶೃಂಗನಂತೆ ಶಾಂತಾಂತ ಕರಣರುಂ, ಇಂದ್ರನಂತೆ ಸದಾರಂಭಾಸಕ್ಕರುಂ, ಸಮವರ್ತಿಯಂತೆ ದಂಡಧರರುಂ, ಕೋದಂಡ ದಂತೆ ಸದ್ದು ಗೋಪೇತರುಂ, ಉಪವನದಂತೆ ಕಾರಕಾನ್ವಿತರುಂ, ವಿನತಾಗರ್ಭ ದಂತ ವಿಭೂತಿಭಾಸುರರುಂ, ಶುಕನಿಕರದಂತೆ ಫಲತರುದ್ರಾಕ್ಷಾಸಕ್ತರುಂ, ಹುತ ವಹನಂತೆ ಸಪ್ತಶಿಖಾನ್ಸಿ ತರುಂ, ಮಹಾರಣ್ಣ ದಂತಕ್ಷಮಾಲಾವಿರಾಜಿತರುಂ, ಸುಮ ನೋಬಾಣನಂತೆ ಸುರಭಿಸಮೇತರುವಾಗಿರ್ಪರಂತುಮಲ್ಲದೆಯುಂ, ಪವನಾಶಿಗಳಾಗಿರ್ದುಂ ಪವನಾಶಿಗಳನ್ನು ಮುನಿಗಳೆನಿಸುತ್ತುಂ ಮ | ಇವರ್ಗಳ್ಳು ನೀಗಳೆಯಲ್ಲಂ ತು ವಿಚಿತ್ರಂ ನೋಡಲಾ ತಪಸ್ವಿಗಳಿರವಂ | ವ! ಇಂತಪ್ಪ ಋಷಿಗಳ ಆಶ್ರಮಂಗಳಂ ನೋಡುತ್ತ ಸಮಸ್ತಪ್ರಮಧಗಣ ಸಮೂಹಸಹಿತಂ ವಿಶ್ವನಾಧಂ ಮುಂದೆ ನಡೆತರ್ಪಾಗಳಜಾಸುರಂ ಕೇಳು ತನ್ನ ಮೇಲೇರ್ಪ ದಾಳಿಯಿಂದಅದು ಮನದೊಳೆ ಖತಿಯಂ ತಾಲ್ಲು ತನ್ನ ಸೇನಾಪತಿ ಯದೊರ ರಕ್ಕಸನೊಳಿಂತೆಂದು, ಬರ್ದುಕಿದೆನಿನಿತು ದಿನಂ ನನ ಗಿದಿರ್ವಂದು ಪೊಣರ್ಚಿದವನ ನಾಂ ಕಂಡಯ್ಯಂ | ಇದು ಚಿತ್ರಂ ಪೆಣ್ಮಯ್ಯಂ ಕದನಕ್ಕೆಂದ ಗಡಮೆನುತ್ತವನುಸಿರ್ದ೦ || ಮಂದರಮನುರುಪಿ ಸಿತನಗ ಮಂ ದಹಿಸಿ ಸುವರ್ಣಶೈಲಮಂ ಪಿರಿದುಂ ಸು | ಟೈಂದಿಗಳ ಸಣದೊಳಿ ರ್ಪಂದದೆ ನಾ ಮಾಡುವಂ ಕಪಾಲಿಯನದಟಿಂ 9. ವ! ಇಂತೆಂದು ತನ್ನ ಸೇನಾಪತಿಯೊಳುಸಿರನ್ನ ಮಾ ಸಮಯದೊತ್ಮಹೇ ಶೃರಂ ಲೋಕಾನುಗ್ರಹಕ್ಕೆ ರಾಜಧರ್ಮವನನುಸರಿಸುತ್ತೊರ ಗಣಿತೃರನಂ ಗಜಾ ಸುರನಿರ್ದಡೆಗೆ ಕಳುಪಲಾತನೆಂದವನೊಳಿಂತೆಂದಂ,