ಪುಟ:ವೇಣೀಬಂಧನ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

      • • .

ವೇಳೇ ಬಂಧನ. (4) - ... .. ... .. --- “ ಕೌರವರಿಂದ ನಮ್ಮ ನಿರ್ವಾಹಕ್ಕಾಗಿ ಬರೇ ಅಯ್ತು ಗ್ರಾಮಗಳನ್ನು ಬೇಡಿಕೊಳ್ಳತಕ್ಕದ್ದು; ಹೆಚ್ಚಿನದೇನೂ ಇಲ್ಲ. ” ಎಂದು ಹೇಳಿದನು. ಈ ಮಾತು ಕೇಳಿ ಭೀಮಸೇನನಿಗೆ ಅತ್ಯಂತ ದುಃಖವಾಯಿತು. ಆಗ ಅವನು “ ಅಯ್ಯೋ ! ಸಹದೇವಾ, ಏನು ನಮ್ಮ ದುರ್ದೈವವು !! ಈ ಅಜಾತ ಶತ್ರು ವಾದ ಧರ್ಮರಾಜನ ಅತ್ಯುಗ್ರವಾದ ಕ್ಷಾತ್ರತೇಜವು ಎಲ್ಲಿ ನಷ್ಟವಾಗಿದ್ದೀತು? ಅದನ್ನೂ ಈತನು ಯಾವತ್ತು ರಾಜಲಕ್ಷೆಯ ಸಂಗಡ ಜೂಜಿನಲ್ಲಿ ವೈರಿ ಗಳಿಗೆ ಸೋತು ಬಿಟ್ಟಂತೆ ತೋರುತ್ತದೆ. ಇಲ್ಲದಿದ್ದರೆ, ಹೀಗೆ ನೀಚವೃತ್ತಿ ಯಿಂದ ಯಾತನೆಯನ್ನು ಮಾಡಲಿಕ್ಕೆ ಸಿದ್ಧವಾಗುತ್ತಿದ್ದನೆ? ತಮ್ಮಾ, ಈ ಮಾತು ಕೇಳಿ ಸಂತಾಪದಿಂದ ನನ್ನ ಹೃದಯವು ತಲ್ಲಣಿಸುವದು, ಅಣ್ಣನ ಸ್ವಭಾವಕ್ಕೆ ಏನು ಮಾಡಬೇಕೆಂಬುದು ನನಗೆ ತಿಳಿಯದಂತಾಗಿದೆ.” ಎಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತು, ಆ ಬಳಿಕ, “ ಅವನ ಸ್ವಭಾವವು ಹ್ಯಾಗೇ ಇರಲಿ, ಇನ್ನುಮೇಲೆ ಅದರ ವಿಚಾರವು ನನಗೆ ಬೇಕಾಗಿಲ್ಲ. ನಾನು ಪೂರ್ವದಲ್ಲಿ ಮಾಡಿದ ಪ್ರತಿಜ್ಞೆಯನ್ನು ಕೊನೆಗಾಣಿಸುವದು ನಿಶ್ಚಯವು” ಎಂದು ಅಂದನು. ಈ ಪ್ರಕಾರ ಮಾತಾಡುತ್ತಿರುವರಲ್ಲಿ ಪದಿಯು ತನ್ನ ದಾನಿಯೊಡನೆ ಅಲ್ಲಿಗೆ ಬಂದಳು. ಆ ಕಾಲಕ್ಕೆ ಅವಳ ಬೊಗಸೆಗಣ್ಣು ಗಳಿಂದ ನೀರು ಧಾರೆಗೊಂಡು ಸುರಿಯುತ್ತಿದ್ದವು. ಕುರುಕುಲವನ್ನು ಸಂಹ ರಿಸಲಿಕ್ಕೆ ನೀಡಿದ ಕೃತಾಂತಹವೋ ಏನೋ ಅನ್ನುವಂತೆ ಅವಳ ಕಪ್ಪು ವರ್ಣದ ಕೇಶಪಾತವು ಬೆನ್ನಮೇಲೆ ಬಿದ್ದಿತ್ತು. ದೇವಿಯೇ, ಯಾಕೆ ವ್ಯರ್ಥ ವಾಗಿ ದುಃಖಪಡುತ್ತಿ? ಯುವರಾಜ ಭೀಮಸೇನ ಮಹಾರಾಜರು ಸ್ವಲ್ಪ ದಿವಸಗಳಲ್ಲಿಯೇ ನಿನ್ನ ಈ ದುಃಖವನ್ನು ಹೋಗಲಾಡಿಸುವರು, ಎಂದು ದಾಸಿಯು ಅವಳನ್ನು ಪರಿಪರಿಯಿಂದ ಸಮಾಧಾನಪಡಿಸುತ್ತಿದ್ದಳು. ಅದಕ್ಕೆ ಬ್ರೌಪದಿಯು-ಸಖಿಯೇ, ನೀನನ್ನುವದು ನಿಜವು; ಭೀಮಸೇನ ಮಹಾ ರಾಜರು ಆ ನೀಚರ ವಿಷಯವಾಗಿ ಹಗಲಿರಳು ಕರಕರ ಹಲ್ಲು ತಿನ್ನು ತಿರುವರು; ಅವರ ಮನಸ್ಸಿಗೆ ಬಂದರೆ ನನ್ನ ದುಃಖದ ಪ್ರತೀಕಾರವು ತಡವಿಲ್ಲದೆ ಆಗುವದು. ಆದರೆ ಈ ಮಾತಿಗೆ ಧರ್ಮರಾಜ ಮಹಾರಾ ಜರು ಅನುಕೂಲರಾಗಬೇಕ? ಎಂದು ನಿಟ್ಟುಸುರು ಬಿಟ್ಟು (ನುಡಿ ದಳು, ಈ ಮೇರೆಗೆ ಮಾತಾಡುತ್ತ ಮಾತಾಡುತ್ತ ಅವರಿಬ್ಬರು ಭೀಮ ಸೇನನ ಸಮೀಪಕ್ಕೆ ಬಂದರು. ಆದರೆ ಭೀಮನು ಆಗ ಧಾಂಧನಾ