ಪುಟ:ವೇಣೀಬಂಧನ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೪) ವಾಗ್ಯೂಷಣ, hhhhhhh ಗಿದ್ದದರಿಂದ ಅವನಿಗೆ ಅವಳು ಬಂದದ್ದು ಸಹ ಗೊತ್ತಾಗಲಿಲ್ಲ. ಅದನ್ನು ಕಂಡು ಅವಳು ತನ್ನ ದಾನಿಯನ್ನು ಕುರಿತು-ಸಖಿಯೇ, ಈ ಕಾಲಕ್ಕೆ ಪ್ರಾಣನಾಥರು ನನಗೆ ಅನಾದರವನ್ನು ತೋರಿಸಿದಾಗ ನನಗೆ ದುಃಖ ವಾಗುವದಿಲ್ಲ. ತಿರುಗಿ ಆನಂದವೇ ಆಗುತ್ತದೆ. ಯಾಕಂದರೆ ಇವರ ಸಿಟ್ಟನ ಸ್ವರೂಪವೇ ನನ್ನ ದುಃಖದ ಪ್ರತೀಕಾರದ ಆಶ್ವಾಸನವೆಂದು ನಾನು ತಿಳಿ ಯುತ್ತೇನೆ. ಈ ಕಾಲಕ್ಕೆ ಇವರು ಏನು ಮಾತಾಡುತ್ತಾರೆಂಬದನ್ನು ಇಲ್ಲಿಯೇ ಮರೆಗೆ ನಿಂತು ಕೇಳೋಣ. ಎಂದು ದಾಸಿಯೂ ತಾನೂ ಒಟ್ಟಿಗೆ ಸರಿದು ನಿಂತುಕೊಂಡರು. ಇತ್ತ ಭೀಮಸೇನನು ಹುಬ್ಬು ಗಂಟಿಕ್ಕಿ ಹಲ್ಲು ಕಡಿಮತ್ರ ಒಳ್ಳೆ ಕೋಧಾವೇಶದಿಂದ ಎಲಾ ಸಹದೇವಾ, ಕೇಳು, ಆ ಧರ್ಮರಾಜನು ಬೇಕಾದ ಹಾಗೆ ಸಂಧಿಯನ್ನು ಮಾಡಿಕೊಳ್ಳಲಿ; ನಾನು ಈ ನನ್ನ ಗಗೆಯ ಹೊಡೆತದಿಂದ ಯಾವತ್ತು ಕುರುಕುಲವನ್ನು ಸಂಹಾರ ಮಾಡಿಬಿಡುವೆನು; ಎಂದು ಕೂಗಿ ಹೇಳುತ್ತಿರುವಾಗ ಕುತ್ತಿಗೆಯ ಶಿರಗಳು ಉಪ್ಪಿ ಕಿತ್ತು ಮಾತಾಡಲಾರದೆ ಸುಮ್ಮನಾದನು. ಈ ಮಾತನ್ನು ಕೇಳಿ ಬ್ರೌಪದಿಗೆ ಅತಿ ಹರ್ಷವಾಯಿತು. ಸ್ವಲ್ಪಹೊತ್ತಿನ ಮೇಲೆ ಭೀಮಸೇನನು ಪುನಃ ತಮಾ ಸಹದೇವಾ, ಸಿಂದಕ್ಕೆ ನಾವೆಲ್ಲರೂ ವನವಾಸಕ್ಕೆ ಹೋಗು ವಾಗ್ಗೆ ಯಾವತ್ತು ಕೌರವರ ನಿಃಪಾತವನ್ನು ಮಾಡುವ ಬಗ್ಗೆ ಪ್ರತಿಜ್ಞೆ ಯನ್ನು ಮಾಡಿದ್ದೆವ, ನೆನಪುಂಟೆ ? ಈ ಕಾಲಕ್ಕೆ ಜಾತಿಗಳ ಕುಲಕ ಯವಾಗುವದೆಂಬ ಹಾಳು ಹೆದರಿಕೆಯಿಂದಲೂ ಲೋಕಲಜ್ಜೆಯಿಂದಲೂ ಆ ಪ್ರತಿಜ್ಞೆಯನ್ನು ಮರೆತು, ತಿರಕರ ಹಾಗೆ ಅತಿ ದೈನ್ಯದಿಂದ ಆ ನೀಚರ ಬಳಿಯಲ್ಲಿಯೇ ಅಚ್ಚು ಗ್ರಾಮಗಳನ್ನು ಬೇಡುವದು ಎಂಥ ಹೇಡಿತನವು ? ಎಲಾ, ನಿಮಗೆ ನಿಮ್ಮ ವೈರಿಗಳ ಕೊಡ ಯುದ್ದ ಮಾಡಲಿಕ್ಕೆ ಜನರಲ್ಲಿ ನಾಚಿಕೆ ಬರುತ್ತದೆಯೇ ? ಮೂರ್ಖ ಶಿರೋಮಣಿಗಳೇ ನಿಮ್ಮ ಹೆಂಡತಿಯ ತುರುಬ ಹಿಡಿದು ನೆರೆದ ಸಭೆಯಲ್ಲಿ ಅಸಮಾನಮಾಡಿದ್ದರ ನಾಚಿಕೆಯು ನಿಮಗೆ ಎಳ್ಳ ಸ್ಟಾದರೂ ಇಲ್ಲವೆ ? ಎಂದು ಒಳ್ಳೆ ಆವೇಶದಿಂದ ಮಾತಾಡುತ್ತಿರಲು, ದೌಪ ದಿಯು ಈ ಭಾಷಣಗಳನ್ನು ಕೇಳಿ, ಅತ್ಯಾನಂದದಿಂದ ಭೀಮಸೇನನ ಹತ್ತರ ಬಂದು, ಸೈ ಸೈ ಪ್ರಾಣನಾಥರೆ, ನೀವೊಬ್ಬರೇ ಆ ಅಪಮಾನವನ್ನು ನೆನಪಿ ನಲ್ಲಿಟ್ಟಿರುವಿರಿ, ಉಳಿದವರಾರೂ ಅದನ್ನು ಮನಸಿನಲ್ಲಿ ಸಹ ತರುವದಿಲ್ಲ. ತಮ್ಮಿಂದಲೇ ನನ್ನ ದು:ಖದ ಪ್ರತೀಕಾರವಾದೀತೆಂದು ನಾನು ನಂಬಿದ್ದೇನೆ.