ಪುಟ:ವೇಣೀಬಂಧನ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ww. ವೇಣೀ ಬಂಧನ, rrrrrrrmw- w ಪ್ರಾಣನಾಥರೆ, ಬಹು ದಿವಸದಿಂದ ಈ ದಾಸಿಯ ಮನಸಿನಲ್ಲಿದ್ದ ಅರ್ಥವನ್ನು ಕೊನೆಗಾಣಿಸಬೇಕೆಂದು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ ಎಂದು ವಿನಯ ದಿಂದ ಬಿನ್ನಿಸಿದಳು. ಆಗ ಭೀಮಸೇನನು ಬ್ರೌಪದಿಯನ್ನು ಪ್ರೇಮಪೂರ್ಣ ದೃಷ್ಟಿಯಿಂದ ನೋಡಿ-ಪ್ರಿಯೆ, ನಾನು ಕ್ರೋಧಾಂಧನಾದದ್ದರಿಂದ ನಿನ್ನನ್ನು ನೋಡಲಿಲ್ಲ. ಅದಕ್ಕಾಗಿ ನೀನು ನನ್ನ ಮೇಲೆ ಸಿಟ್ಟಾಗದೆ ನನ್ನನ್ನು ಕ್ಷಮಿಸು ಅಂದನು. ಅದಕ್ಕೆ ಬ್ರೌಪದಿಯು-ಪ್ರಾಣನಾಥರೆ, ನೀವು ಸುಮ್ಮನೆ ಕುಳಿ ತಾಗ ನನ್ನ ಅನಾದರವಾಗಿ ಮಾತ್ರ ನಾನು ಸಿಟ್ಟಾಗುತ್ತಿದ್ದೆನು. ಸಿಟ್ಟಿನಿಂದ ಸಂತಪ್ತರಾದ ನಿಮ್ಮನ್ನು ಕಂಡು, ನನ್ನ ಮನಸಿಗೆ ಸಂತೋಷವೆ ಆಗುತ್ತದೆ ಎಂದು ಅಂದಳು. ಆ ಬಳಿಕ ಭೀಮಸೇನನು ಅವಳ ಕೈಹಿ ಡಿದು ತನ್ನ ಹತ್ತಿರ ಕುಳ್ಳಿರಿಸಿಕೊಂಡು ಅವಳ ಬಾಡಿದ ಮುಖಕಮಲವನ್ನು ನಿರೀಕ್ಷಿಸಿ-ಪ್ರಿಯೆ, ನಿನ್ನ ಸುಂದರವಾದ ಮುಖವು ಇಷ್ಟೇಕೆ ಬಾಡಿರು ವದು? ಮನಸು ಅಸ್ವಸ್ಥವಾಗಲು ಕಾರಣವೇನು ? ಒಹೋ ಆ ಅಸ್ವಸ್ಥ ತೆಯನ್ನು ನೀನು ಬಾಯಿಬಿಚ್ಚಿ ಹೇಳುವಕಾರಣವೇ ಇಲ್ಲ. ಈ ನಿನ್ನ ಬಿಚ್ಚಿದ ಕೇಶಪಾಶಗಳ ಸ್ಪಷ್ಟವಾಗಿ ಹೇಳುತ್ತಿರುವವು. ಅಯ್ಯೋ !! ಮಹಾ ಪರಾಕ್ರಮಿಗಳಾದ ಅಚ್ಚು ಮಂದಿ ಪಾಂಡವರು ಜೀವದಿಂದಿರಲು, ಪಾಂಚಾಲ ರಾಜಪುತ್ರಿಯು ಈ ಹಾಡನ್ನು ಅನುಭವಿಸಬೇಕೆ ? ಪ್ರಿಯೆ, ಇನ್ನು ಮೇಲೆ ನೀನು ನಿನ್ನ ಮನಸಿನ ದುಗುಡವನ್ನು ಬಿಟ್ಟು ಸಮಾ ಧಾನದಿಂದ ಇರು. ಸ್ವಲ್ಪ ದಿವಸಗಳಲ್ಲಿ ನಿನ್ನ ಮನಸಿನಲ್ಲಿದ್ದಂತೆ ಆಗುವದು, ಎಂದು ಹೇಳಿದನು. ಆಗ ಬ್ರೌಪದಿಯ ದಾಸಿಯು ಮುಂದೆ ಬಂದು-ಮಹಾರಾಜರೆ, ಇಂದು ದೇವಿಯವರ ಮನಸಿಗೆ ವಿಶೇಷ ದುಃಖವಾ ಗಲಿಕ್ಕೆ ಮತ್ತೊಂದು ಸಂಗತಿಯು ವರ್ತಿಸಿತು. ಅದು ಯಾವದೆಂದರೆದೇವಿಯವರು ಸುಭದ್ರಾ ಮೊದಲಾದ ಸವತಿಯರನ್ನು ಕೂಡಿಕೊಂಡು, ಅತ್ತೆ ಯಾದ ಗಾಂಧಾರಿಯ ದರ್ಶನಕ್ಕೆಂದು ಹೋಗಿದ್ದರು. ಅಲ್ಲಿಂದ ತಿರುಗಿ ಬರು ವಾಗ ದುರ್ಯೊಧನನ ಹೆಂಡತಿಯಾದ ಭಾನುಮತಿಯು ಬಳ್ಳ ಸೊಕ್ಕಿ ನಿಂದ ದೇವಿಯವರನ್ನು ಕಂಡು, ಏನೇ ದ್ರಿಪದಿ, ನಿನ್ನ ಗಂಡಂದಿರು ಅಯ್ದು ಗ್ರಾಮಗಳನ್ನು ತೆಗೆದುಕೊಂಡು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾ ರಂತಲ್ಲ? ನೀನು ಇನ್ನೂ ಯಾಕೆ ಹೆಳಲು ಹಾಕಿಕೊಂಡಿಲ್ಲ ? ಎಂದು ಚುಚ್ಚಿ ಮಾತಾಡಿದಳು, ಆ ಮಾತುಗಳನ್ನು ಕೇಳಿ ದೇವಿಯವರಿಗೆ ಬಹಳ ಅಸಮಾ