ಪುಟ:ವೇಣೀಬಂಧನ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

09 ವಾಗ್ಯೂಷಣ, ದುರ್ಯೋಧನನು ಮನಸ್ಸಿನಲ್ಲಿಯೇ ಬಿರುಗಾಳಿಯ ಉಪಕಾರವನ್ನು ನೆನಿ ಸುತ್ತ ಹರ್ಷಭರಿತನಾದನು. ಆ ಬಳಿಕ ಅವರು ಅಲ್ಲಿಯೇ ಸಮೀಪದಲ್ಲಿದ್ದ ಕ್ರೀಡಾಮಂದಿರಕ್ಕೆ ತೆರಳಿದರು; ಅಲ್ಲಿ ಅವರು ಕೆಲವು ಕಾಲವನ್ನು ವಿನೋದ ದಿಂದ ಕಳೆದರು. ಅಸ್ಟ್ರಲ್ಲಿ ಜಯದ್ರಥನ ತಾಯಿಯು, ತನ್ನ ಸೊಸೆಯ ದುರ್ಯೋಧನನ ತಂಗಿಯೂ ಆದ ದುಃಶೀಲೆಯನ್ನು ಕರಕೊಂಡು ಉಭಯ ತರೂ ಕಣ್ಣೀರು ಸುರಿಸುತ್ತ ದುರ್ಯೋಧನನ ಬಳಿಗೆ ಬಂದರು. ಜಯ ದ್ರಥನ ತಾಯಿಯು-ಅಪ್ಪಾ,ದುರ್ಯೋಧನಾ, ಅರ್ಜುನನು ಪುತ್ರಶೋಕದಿಂದ ಸಿಟ್ಟಾಗಿ ಜಯದ್ರಥನನ್ನು ಇಂದು ಸೂರ್ಯಾಸ್ತಮಾನದೊಳಗಾಗಿಕೊಲ್ಲುವೆನು ಇಲ್ಲವೆ ಅಗ್ನಿಕುಂಡದಲ್ಲಿ ಹಾರಿಕೊಳ್ಳುವೆನು, ಎಂದು ಪ್ರತಿಜ್ಞೆಯನ್ನು ಮಾಡಿ ರುವನು. ಹ್ಯಾಗಾದರೂ ಮಾಡಿ ನಿನ್ನ ತಂಗಿಯ ಸೌಭಾಗ್ಯವನ್ನು ಉಳಿಸಿಕೊ ಕಂಡಿಯಾ! ಎಂದು ಪರಿಪರಿಯಿಂದ ಬೇಡಿಕೊಳ್ಳಹತ್ತಿದಳು. ದು:ಶೀಲೆಯಂತೂ ದೊಡ್ಡ ಧ್ವನಿತೆಗೆದು ಬೋರಾಡಿ ಅಳಹತ್ತಿದಳು. ಅದಕ್ಕೆ ದುರ್ಯೋಧನನು ತಂಗೀ, ಹೆದರಬೇಡ, ಸಮಾಧಾನ ತಾಳು, ಜಯದ್ರಥನ ಕೂದಲಿಗೆಸಹ ಧಕ್ಕೆ ಹತ್ತಲಾರದೆಂದು ತಿಳಿ. ಆ ಹೇಡಿಯಿಂದಲೇನಾಗುವದು? ಅವನು ಕಡೆಗೆ ಅಗ್ನಿಯ ಪಾಲಾಗುವದೇ ನಿಶ್ಚಯವು ! ಆಗಲಿ ಶತ್ರುಗಳು ಅನಾಯಾಸ ವಾಗಿ ನಾಶಹೊಂದುವರು. ನೀವೇಕೆ ಚಿಂತೆ ಮಾಡುತ್ತೀರಿ ಎಂದು ಅವರಿಗೆ ಅಭಯವತನವನ್ನು ಕೊಟ್ಟು, ತನ್ನ ಸೇವಕರಿಂದ ರಥವನ್ನು ತರಿಸಿ ಕೊಂಡು, ಭಾನುಮತಿಗೆ ಪರಿವಾರದೊಂದಿಗೆ ರಾಜಮಂದಿರಕ್ಕೆ ಹೋಗೆಂದು ಅಪ್ಪಣೆಯನ್ನು ಕೊಟ್ಟು, ತಾನು ರಥವನ್ನೇರಿ ರಣಭೂಮಿಯಕಡೆಗೆ ಸಾಗಿದನು. ೩ನೇ ಪ್ರಕರಣ. ಶಸ್ತ್ರತ್ಯಾಗ, ಇತ್ತ ರಣಭೂಮಿಯಲ್ಲಿ ಉಭಯ ಸೈನ್ಯಗಳು ಒಳ್ಳೆ ವೀರಾವೇಶದಿಂದ ಕಾದುತ್ತಿದ್ದವು. ಅರ್ಜುನನು ಜಯದ್ರಥನನ್ನು ಕೊಂದು ತನ್ನ ಪ್ರತಿಜ್ಞೆ ಯನ್ನು ಪೂರ್ಣಮಾಡಿದನು. ಎರಡೂ ಸೈನ್ಯಗಳೊಳಗಿನ ಸಾವಿರಾರು ಸೈನಿ ಕರೂ, ಆನೆಕುದುರೆಗಳ, ಗಾಯಹೊಂದಿ ರಣಭೂಮಿಯಲ್ಲಿ ಸತ್ತು ಬಿದ್ದಿ