ಪುಟ:ವೇಣೀಬಂಧನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ, ೧೩ ದ್ದವು. ಅವರ ಶರೀರದಿಂದ ರಕ್ತದ ನದಿಗಳು ಹರಿಯುತ್ತಿದ್ದವು. ರಣಭೂಮಿ ಯ ನೆಲವು ರಕ್ತಮಾಂಸಗಳಿಂದ ಕೆಸರಾಗಿತ್ತು. ಕುರುಸೇನಾನಾಯಕರಾದ ದ್ರೋಣಾಚಾರ್ಯರು ಶತ್ರುಸೈನ್ಯದ ಕೂಡ ಒಳ್ಳೆ ನಿಕರದಿಂದ ಕಾದು ರಲು, ಅವರನ್ನು ಸೋಲಿಸುವದು ಪಾಂಡವರಿಗೆ ಬಹಳ ಕಸ್ಮವಾಯಿತು. ಆಗ ಶ್ರೀಕೃಷ್ಣನು ಒಂದು ಉಪಾಯವನ್ನು ಯೋಜಿಸಿದನು. ಅದು ಯಾವ ದೆಂದರೆ:-ಭೀಮಸೇನನು ಕುರುಸೈನ್ಯದೊಳಗಿನ ಅಶ್ವತ್ಥಾಮವೆಂಬದೊಂದು ಆನೆಯನ್ನು ಕೊಂದನು; ಆಗ ಅಶ್ವತ್ಥಾಮೋ ಹತಃ ಅಶ್ವತ್ಥಾಮೋ ಹತಃ ಎಂಬ ಸುದ್ದಿ ಯು ರಣಭೂಮಿಯಲ್ಲಿ ನಾಲೂಕಡೆಗೆ ಹಬ್ಬಿತು. ದ್ರೋಣಾ ಚಾರ್ಯರು ಈ ಸುದ್ದಿಯನ್ನು ಕೇಳಿ ಸಂಶಯಗೊಂಡು ದೇಹವನ್ನು ತಮ್ಮ ರಥದಲ್ಲಿಯೇ ಬಿಟ್ಟು ಸತ್ಯಸಂಧನೂ ಅಜಾತಶತ್ರುವೂ ಆದ ಧರ್ಮರಾಜ ನನ್ನು ಈ ಮಾತು ಸಟಿಯೋ ದಿಟವೋ ಎಂಬ ಬಗ್ಗೆ ಕೇಳಬಂದರು; ಧರ್ಮರಾಜನಿಗೆ ನಿಜವಾದ ಸಂಗತಿಯು ಗೊತ್ತಿದ್ದರೂ ಶ್ರೀಕೃಷ್ಣನು ಮೊದಲೇ ಸೂಚಿಸಿದ ಮೇರೆಗೆ “ ಅಶ್ವತ್ಥಾಮೊ ಹತಃ ನರೋ ವಾ ಕುಂಜ ರೋ ವಾ” ಎಂದು ಕಿವಿಯ ಮೇಲೆ ಕೈ ಇಟ್ಟು ಕೊಂಡನು. ಆಚಾರ್ಯರು ಮಗನೇ ಸತ್ತನೆಂದು ತಿಳಿದು ಒಳ್ಳೆ ದುಃಖದಿಂದ ಕೈಯೊಳಗಿನ ಧನುಷ್ಯ ಬಾಣಗಳನ್ನು ಕೆಳಗಿಟ್ಟು ಸ್ವಸ್ಥರಾಗಿ ಯೋಗಬಲದಿಂದ ಜೀವವನ್ನು ನೆತ್ತಿಗೇ ರಿಸಿಕೊಂಡು ಕುಳಿತರು. ಆಗ ದ್ರುಪದರಾಜನ ಮಗನಾದ ದೃಸ್ಮಯ್ಯುವನು ತನ್ನ ಪೂರ್ವ ವೈರವನ್ನು ಸಾಧಿಸಲಿಕ್ಕೆ ಇದೇ ಸಮಯವೆಂದು ನೆನಿಸಿ ನೆಟ್ಟಗೆ ದ್ರೋಣಾಚಾರ್ಯರ ಬಳಿಗೆ ಹೋಗಿ ಅವರ ಶಿರಚ್ಛೇದವನ್ನು ಮಾಡಿದನು. ಅದನ್ನು ಕಂಡು ಕೌರವ ಸೈನಿಕರು ಆಕಾಶ ಪಾತಾಳಗಳು ಒಂದಾಗುವಂತೆ ಕೋಲಾಹಲವನ್ನು ಎಬ್ಬಿಸಿದರು. ಈ ಭಯಂಕರವಾದ ಗದ್ದಲವನ್ನು ಕೇಳಿ ಅಶ್ವತ್ಥಾಮನು ಶಸ್ತ್ರಧಾರಿಯಾಗಿ ಬಂದು, ಒಹೋ ಇದೇನು? ಪ್ರಳಯಕಾಲಕ್ಕೆ ಬಿಟ್ಟ ಝಂಝಾವಾತದಿಂದ ಕ್ಷುಬ್ದ ವಾದ ಪುಷ್ಕರಾವರ್ತ ಮೇಘಗಳ ಗಡಗಡನ ಟದ ಪ್ರತಿಧ್ವನಿಯೋ ಏನೋ ಅನ್ನುವಂತೆ ರಣಭೂಮಿಯಲ್ಲಿ ಭಯಂಕರ ಶಬ್ದವು ಯಾಕಾಗುತ್ತಿದ್ದೀತು ? ನಾನು ನಿಜವಾದ ಪರಾಕ್ರಮದಿಂದ ಹಗೆ ಗಳನ್ನು ಸಂಹರಿಸಿದ್ದರಿಂದ ಕುರುಸೈನ್ಯವು ಆನಂದದಿಂದ ಕೋಲಾಹಲ ವನ್ನು ಎಬ್ಬಿಸಿದಂತೆ ತೋರುವದು, ಒಳ್ಳೇದು ಹೋಗಿ ನೋಡಿದರೆ ತಾನೇ ಗೊತ್ತಾಗುವದು ಎಂದು ರಣಭೂಮಿಯಕಡೆಗೆ ಸಾಗಲು, ಕುರು ಸೈನ್ಯದೊ ಳಗಿನ ಕರ್ಣ ಮೊದಲಾದವರು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದರು.