ಪುಟ:ವೇಣೀಬಂಧನ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗ್ಯೂಷಣ, ಅಶ್ವತ್ಥಾಮನು ಇದನ್ನು ಕಂಡು ಆಶ್ಚರ್ಯಚಕಿತನಾಗಿ ಎಲೈ ವೀರಾಗ್ರಣಿಗಳ, ಅಲೌಕಿಕ ವೀರನಾದ ನಮ್ಮ ತಾತನು ಸೇನಾಪತಿಯಾಗಿರಲು, ನೀವೆಲ್ಲರೂ ಹೀಗೆ ಯಾಕೆ ಬೆಂಗೊಟ್ಟೋಡುವಿರಿ? ಎಲೈ ಹೇಡಿಗಳಿರಾ, ಮನುಷ್ಯರಿಗೆ ಮರಣವು ಎಂದಿಗಾದರೂ ತಪ್ಪುವದೆ ? ಸಾವಿಗಂಜಿ ಯಾಕೆ ಓಡುತ್ತಿರು ವಿರಿ? ಶತ್ರುಗಳ ಸಂಗಡ ಕಾದಿ ವೀರಸ್ವರ್ಗ ಪಡೆಯುವದನ್ನು ಬಿಟ್ಟು ಓಡಿಹೋಗುವದರಲ್ಲಿ ಅದಾವ ಪುರುಪ್ರಾರ್ಥವಿರುವದು? ಎಲಾ! ನನ್ನ ಮಾತಿಗೆ ಯಾರೂ ಕಿವಿಗೊಡಲೊಲ್ಲರಲ್ಲ ! ಆದದ್ದಾದರೂ ಏನು? ಎಂದು ಬದರು ತಿರಲು, ಓಡಿ ಹೋಗುವವರೊಳಗಿನವನೊಬ್ಬನು-ಸ್ವಾಮೀ ಇನ್ನೆಲ್ಲಿಯ ನಿಮ್ಮ ತಾತರು ? ಅವರ ಅವತಾರವು ಆಗಲೇ ಮುಗಿದು ಹೋಗಿರುವದು ಅಂದನು. ಆ ಮಾತನ್ನು ನಂಬದೆ ಅಶ್ವತ್ಥಾಮನು ವಿಲಾ, ನೀಚಾ, ನಮ್ಮ ತಂದೆಯ ವಿಷಯವಾಗಿ ಹೀಗೆ ಕೆಟ್ಟ ಮಾತುಗಳನ್ನು ಆಡುತ್ತೀಯಾ ? ಈ ಮಾತನ್ನು ಆಡುವ ನಿನ್ನ ನಾಲಿಗೆಯು ಯಾಕೆ ಕಳಚಿ ಬೀಳಲಿಲ್ಲ ? ಈ ಪಾಂಡವರಲ್ಲಿ ಅವನನ್ನು ಸೋಲಿಸುವಂಥ ಗಂಡಸು ಅದಾವನಿರುವನು ? ಎಂದು ಮಾತಾಡುತ್ತಿರುವರೊಳಗೆ ದ್ರೋಣಾಚಾರ್ಯರ ಸಾರಥಿಯು ಘಾಯಪಟ್ಟು ಅಲ್ಲಿಗೆ ಬಂದನು. ಅವನು ಅಶ್ವತ್ಥಾಮನಿಗೆ ನಡೆದ ಸಂಗತಿ ಯನ್ನೆಲ್ಲ ಚನ್ನಾಗಿ ವರ್ಣಿಸಿ ಹೇಳಿದನು. ತಂದೆ ಸತ್ತ ಸುದ್ದಿ ಯು ಕಿವಿಗೆ ಬಿದ್ದ ಕೂಡಲೆ ಅಶ್ವತ್ಥಾಮನು-ಅಯ್ಯೋ ! ಅಬ್ಬಾ! ಹಾ! ತಂದೆಯೇ ? ಎಂದು ಮೂರ್ಛಯಿಂದ ನೆಲಕ್ಕೆ ಬಿದ್ದನು. ಕೆಲಹೊತ್ತಿನ ಮೇಲೆ ಎಚ್ಚತ್ತು, ಹಾ ಸುತವತ್ಸಲ, ಹಾ ಶೌರ್ಯರಾಶಿಯೆ, ಹಾ ಶಿಸ್ಮಪ್ರಿಯನೆ, ನನ್ನ ಸಲುವಾಗಿ ನೀನು ವ್ಯರ್ಥವಾಗಿ ಜೀವಕ್ಕೆ ಎರವಾದೆಯಾ? ನನ್ನ ಮರಣದ ಸುಳ್ಳು ಸುದ್ದಿಯನ್ನು ಕೇಳಿ ಕೂಡಲೆ ನೀನು ಸಾಯಲನುವಾದೆ; ಆದರೆ ನಾನು ಮಾತ್ರ ನಿನ್ನ ಮರಣದ ಸುದ್ದಿಯನ್ನು ಕೇಳಿದರೂ ಕೂಡ ಇನ್ನೂ ಜೀವದಿಂದಿರುವೆನು. ನಾನು ಎಂಥ ಕೃತಘ್ನನು; ಎಂಥ ನಿರ್ದಯನು ! ಎಂಥ ಪಾಪಿಯು !! ಎಂದು ನೆನೆನೆನಿಸಿ ದೊಡ್ಡ ಧ್ವನಿ ತೆಗೆದು ಅಳಹತ್ತಿದನು. ಆ ಸಮಯದಲ್ಲಿ ಕೃಪನು ದುಃಖಪಡುತ್ತ ಅಲ್ಲಿಗೆ ಬಂದನು. ಅಶ್ವ ಸ್ಥಾಮನು ತನ್ನ ಅನಿವಾರ ದುಃಖದಿಂದ ಇನ್ನೂ ಹಂಬಲಿಸಿ ಹಲುಬುತ್ತಲೇ ಇದ್ದನು. ದ್ರೋಣಾಚಾರ್ಯರ ಸಾರಥಿಯು ಅವನಿಗೆ ಕೃಪಾಚಾರ್ಯರು ಬಂದ ಸುದ್ದಿಯನ್ನು ಹೇಳಿದನು; ಸೋದರಮಾವನನ್ನು ನೋಡಿದ ಕೂಡಲೆ ಅಶ್ವತ್ಥಾಮನ ಗಂಟಲ ಶಿರಗಳು ಉಬ್ಬಿ ಬಾಯಿಂದ ಮಾತುಗಳು ಹೊರಡ ದಂತೆ * ಆದವು ! ಕೃಪನು ಅವನಿಗೆ ಕಂದಾ, ಇನ್ನು ಮೇಲೆ