ಪುಟ:ವೇಣೀಬಂಧನ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ, ೧೬ AAYA ತಟ್ಟಿತು. ನಾವು ಮಾಡಿದ ಪ್ರತಿಜ್ಞೆಗಳನ್ನು ಉಪಾಯವಿಲ್ಲದೆ ಅಲ್ಲ, ಪಾಂಡವರ ಪಕ್ಷಪಾತದಿಂದ ಕೊನೆಗಾಣಿಸದೆ ಬಿಟ್ಟಿರುವರು, ಎಂದು ಅವನ ಮನವರಿಕೆ ಯಾಗಿತ್ತು, ಅದರಿಂದ ಅವನು ಈಗ ಕರ್ಣನು ಹೇಳುವ ಮಾತುಗಳಿಗೆ ಒಡಂಬಟ್ಟು ತಲೆದೂಗುತ್ತಿದ್ದನು. ಅವರಿಬ್ಬರು ಮಾತಾಡುತ್ತಿರಲು ಅಶ್ವತ್ಥಾ ಮನೂ, ಕೃಪಾಚಾರ್ಯರ.ಇ, ಅಲ್ಲಿಗೆ ಬಂದರು. ಆಗ ದುರ್ಯೋಧನನು ಆಚಾರ್ಯಪುತ್ರನನ್ನು ಕಂಡು ಪ್ರೇಮವನ್ನೂ, ಆದರವನ್ನೂ ತೋರಿಸಿದ್ದ ರಿಂದ ಕೃಪಾಚಾರ್ಯನು ಅಶ್ವತ್ಥಾಮನ ಶೌರ್ಯವನ್ನು ವರ್ಣಿಸಿ, ಅವನ ದುಃಖವನ್ನು ಕಡಿಮೆ ಮಾಡಲಿಕ್ಕೆ ಸೈನ್ಯಾಧಿಪತ್ಯವನ್ನು ಅವನಿಗೆ ಕೊಡಬೇ ಕೆಂದು ದುರ್ಯೋಧನನಿಗೆ ಸೂಚಿಸಿದನು. ಅದಕ್ಕೆ ದುರ್ಯೋಧನನು ಈ ಬಗ್ಗೆ ನಾನು ಈ ಮೊದಲೇ ಕರ್ಣನಿಗೆ ಮಾತು ಕೊಟ್ಟಿದ್ದೇನೆ ಎಂದು ಅಂದು ಮನಸ್ಸಿನಲ್ಲಿ ಆಲೋಚನೆ ಮಾಡಹತ್ತಿದನು. ಅದನ್ನು ಕಂಡು ಅಶ್ವತ್ಥಾಮ ನು ಒಳ್ಳೆ ಆವೇಶದಿಂದ ರಾಜಾ, ಕೌರವೇಶ್ವರಾ, ಏನು ವಿಚಾರ ಮಾಡು ತಿ? ಸೈನ್ಯಾಧಿಕಾರವನ್ನು ನನಗೆ ಕೊಟ್ಟು ನೋಡು. ಈ ಹೊತ್ತಿನ ದಿವಸವೇ ನಾನು ಯಾವತ್ತು ಶತ್ರುಗಳನ್ನು ನಾಶಮಾಡಿ ಯುದ್ದ ಕಾರ್ಯವನ್ನು ಮುಗಿಸಿ ಬಿಡುವೆನು ಎಂದು ಪರಾಕ್ರಮದ ಮಾತುಗಳನ್ನು ಆಡಿದನು, ಈ ಗರ್ವದ ಮಾತುಗಳನ್ನು ಕೇಳಿ ಕರ್ಣನಿಗೆ ಸಹನವಾಗಲಿಲ್ಲ. ಅವನು ಹೆಮ್ಮೆಯ ಮಾತು ಆಡುವದು ಬಹು ಸುಲಭ ಆದರೆ ಅದರಂತೆ ನಡುವದು ಬಲುಕಷ್ಟ ರವರ ಸೈನ್ಯದಲ್ಲಿ ಇಂಥ ಕೆಲಸಕ್ಕೆ ಬಹುಮಂದಿ ಸಮರ್ಥರಿರುವರು. ಎಂದು ತಿರಸ್ಕರಿಸಿ ಮಾತಾಡಿದನು. ಅದಕ್ಕೆ ಅಶ್ವತ್ಥಾಮನು--ಹೌದು ಅಂಗ ರಾಜರೇ, ನೀವನ್ನುವ ಮಾತು ನಿಜವದೆ, ಆದರೆ ನಾನು ಈಗ ದುಃಖಶೋಕ ಗಳ ಮೂಲಕ ಈ ಮಾತು ಆಡಿದೆನಲ್ಲದೆ ವೀರಜನರನ್ನು ನಿಂದಿಸುವ ಉದ್ದೇ ಶದಿಂದ ಆಡಿಲ್ಲ ಎಂದು ಸಭ್ಯತನದಿಂದಲೂ ಮರ್ಯಾದೆಯಿಂದಲೂ ಉತ್ತರ ವನ್ನು ಕೊಟ್ಟನು. ಕರ್ಣನು ಇಕ್ಕೇ ಸುಮ್ಮನಾಗಿ ಬಿಟ್ಟಿದ್ದರೆ ಮಾತು ಮುಗಿದು ಹೋಗುತ್ತಿತ್ತು. ಆದರೆ ಅವನು ಬಿಡದೆ-ಮೂರ್ಲಾ , ದುಃಖವಾಗಿ ದ್ದರೆ ಕಣ್ಣೀರು ಸುರಿಸು; ಸಿಟ್ಟು ಬಂದರೆ ಕೈಯಲ್ಲಿ ಶಸ್ತ್ರ ಪಾಳಿ ಒಬ್ಬನೇ ರಣ ಭ ಇಮಿಯನ್ನು ಹೊಕ್ಕು ಪರಾಕ್ರಮವನ್ನು ತೋರಿಸು. ಹೀಗೆ ಸುಮ್ಮನೆ ಯಾಕೆ ಬಡಬಡಿಸುತ್ತೀ ? -ಎಂದು ಬಿರುನುಡಿಗಳಿಂದ ಅವಮಾನ ಪಡಿಸಿದನು. ಅಶ್ವತ್ಥಾಮನಂಥ ಸ್ವಾಭಿಮಾನಿಯಾದ ವೀರಾಗ್ರಣಿಗೆ ದುರ್ಯೋಧನನ