ಪುಟ:ವೇಣೀಬಂಧನ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ, ನಾನಂತೂ ಕರ್ಣನಮೇಲೆ ಸಿಟ್ಟಾಗಿ ಬಹುದೊಡ್ಡ ತಪ್ಪನ್ನು ಮಾಡಿದನು. ನೀವಾದರೂ ರಣಭೂಮಿಗೆ ಹೋಗಿ ದು: ಶಾಸನನ ಸಂರಕ್ಷಣೆಯನ್ನು ಮಾಡಿರಿ ಎಂದು ಹೇಳಿ ತನ್ನ ಶಿಬಿರಕ್ಕೆ ಹೊರಟು ಹೋದನು. ಇತ್ತ ದುರ್ಯೋಧನನನ್ನು ಅಡ್ಡಗಟ್ಟಿದ ಅರ್ಜುನನು ಅವನಮೇಲೆ ಬಾಣದ ಮಳೆ ಯನ್ನು ಸುರಿಸಿ ಅವನ ಆಟವನ್ನು ಸಾಗಗೊಡಲಿಲ್ಲ. ಭೀಮಸೇನನು ದು:ಶಾ ನನನ್ನು ಕೊಂದು ಮೈಯನ್ನು ರಕ್ತದಿಂದ ಮುಳಿಗಿಸಿಕೊಂಡು ನೋಡಿದವರಿ ಗೆ ಅಂಜಿಕೆ ಬರುವ ಸ್ವರೂಪವನ್ನು ತಾಳಿ ದುರ್ಯೋಧನನನ್ನು ಹುಡುಕುತ್ತ ಬರುತ್ತಿದ್ದನು. ಅವನನ್ನು ಕಂಡು ಕೌರವ ಸೈನಿಕರು ಹೆದರಿ ಕೈಯೊಳಗಿನ ಶಸ್ತ್ರಾಸ್ತ್ರಗಳನ್ನು ಕಲ್ಲಿ ಕೊಟ್ಟು ದಾರಿ ಸಿಕ್ಕ ಕಡೆಗೆ ಓಡಿಹೋಗುತ್ತಿದ್ದರು. ದುರ್ಯೋಧನನ ಸಾರಥಿಯು ಅವನನ್ನು ಕಂಡು ಈ ಮದಾಂಧನು ದುಃಶಾ ಸನನಿಗೆ ಮಾಡಿದ ಅವಸ್ಥೆಯನ್ನೇ ಇವನಿಗಮಾಡಿಯಾನು ಎಂದು ಆಲೋ ಟಿಸಿ ಅಲ್ಲಿಯೇ ಸಮೀಪದಲ್ಲಿದ್ದ ಒಂದು ಸರೋವರದ ದಂಡೆಯ ಮೇಲಿದ್ದ ಆಲದ ಮರದ ತಂಪಾದ ನೆರವಿಗೆ ರಥವನ್ನು ಒಯು ನಿಲ್ಲಿಸಿದನು. ಅಷ್ಟೊ ಶಿಗೆ ದುರ್ಯೋಧನನು ಎಚ್ಚತ್ತು ಎಲಾ, ನನ್ನ ರಸವನ್ನು ಇಲ್ಲಿಗೆ ಯಾರು ತಂದರು ? ರಣಭೂಮಿಯಲ್ಲಿ ನನ್ನ ತಮ್ಮನು ಹಗೆಗಳ ಕೈಯಲ್ಲಿ ಸಿಕ್ಕಿರಲು ನಾನು ಇಲ್ಲಿರುವದು ಉಚಿತವೇ ? ಬೇಗನೆ ರಥವನ್ನು ನಡಿಸು ಎಂದು ಸಾರ ಥಿಗೆ ಅಜ್ಞಾಪಿಸಿದನು. ಅವನು ರಣಭೂಮಿಯಲ್ಲಿ ನಡೆದ ಸಂಗತಿಯನ್ನು ಯುಕ್ತಿಯಿಂದಲೂ, ವಿನಯದಿಂದಲೂ ಅರುಹಿದನು. ದುರ್ಯೋಧನನು ತಮ್ಮನು ಸತ್ತ ಸುದ್ದಿಯನ್ನು ಕೇಳಿ ನಿಟ್ಟುಸುರುಬಿಟ್ಟು ಅಯ್ಯೋ ದೈವವೇ, ಇನ್ನು ನಾನು ಯಾರ ಸಲುವಾಗಿ ಯುದ್ಧ ಮಾಡಲಿ ? -ಈ ರಾಜ್ಯವು ಈ ಜಯ ವು ನನಗೆ ಯಾತಕ್ಕೆ ಬೇಕು ? ಎಲಾ ತಮಾ, ದುಃಶಾಸನಾ, ನನ್ನ ಮಾತಿನ ಮೇಲೆ ವಿಶ್ವಾಸವಿಟ್ಟು ಪಾಂಡವರ ಕೂಡ ಹಗೆತನವನ್ನು ಬೆಳಿಸಿದೆ. ನಾನು ದುಷ್ಯನು, ನಿನ್ನ ಮನಸಿಗೆ ಬಂದಂತೆ ನಿನಗೆ ನಡೆಯಗೊಡಲಿಲ್ಲ. ನೀನು ಹಗೆ ಗಳ ಕೈಯಲ್ಲಿ ಸಿಕ್ಕಿರಲು ನಿನ್ನ ಸಂರಕ್ಷಣೆಯನ್ನು ಮಾಡುವದು ನನ್ನಿಂದಾಗ ಲಿಲ್ಲ. ಎಂದು ಮೂರ್ಛಿತನಾದನು. ಸಾರಥಿಯು ನೀತೋಪಚಾರಗಳಿಂದ ಅವನನ್ನು ಎಚ್ಚರಿಸಿದನು. ಅಸ್ಟ್ರಲ್ಲಿ ರಣಭೂಮಿಯಿಂದ ಕರ್ಣನ ದೂತನು ದುರ್ಯೋಧನನನ್ನು ಹುಡುಕುತ್ತ ಅಲ್ಲಿಗೆ ಬಂದನು. ಖಿನ್ನನಾದ ಅರಸನು ಆ ದೂತನನ್ನು ಕಂಡು, ನಿನ್ನ ಒಡೆಯನಾದ ಕರ್ಣನು ಕ್ಷೇಮದಿಂದಿರುವನೇ