ಪುಟ:ವೇಣೀಬಂಧನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗ್ಯೂಷಣ, ಶೂರನೇನು ? ಯುದ್ಧದಲ್ಲಿ ಜಯಪಡೆಯುವದು, ಅಥವಾ ಮರಣ ಹೊಂದು ವದು , ಕ್ಷತ್ರಿಯರ ಕರ್ತವ್ಯಗಳು, ಅ೦ದಮೇಲೆ ನಿನಗೇಕೆ ಇಷ್ಟು ಒಣ ಹೆಮ್ಮೆಯು ? ಎಂದು ಜರೆಯಲು, ಭೀಮಸೇನನು ಶಾಂತಮನಸಿನಿಂದ-ಮಹಾ ರಾಜರೆ, ನಾನು ಈಗ ಆತ್ಮಪೌರುಷದಿಂದ ಅಥವಾ ಹೆಮ್ಮೆಯಿಂದ ಈ ಮಾತುಗಳನ್ನು ಆಡುವದಿಲ್ಲ. ಆದರೆ ನೆರೆದ ಸಭೆಯಲ್ಲಿ ಯಾವ ಯಾವ ಅರ ಸರು ಪಾಂಡವರ ಹೆಂಡತಿಯಾದ ಬ್ರೌಪದಿಯನ್ನು ತುರುಬು ಹಿಡಿದು ಎಳೆದು ತಂದು ಮಾನಭಂಗ ಮಾಡಿಸಿದರೆ ಅವೆಲ್ಲರೂ ನನ್ನ ಬಟ್ಟೆ೦ಬ ಬೆಂಕಿಗೆ ಆಹುತಿಯಾದರು, ಅಂದಿನ ಸಭೆಯಲ್ಲಿ ನೀವು ಇದ್ದಿರಾದ ಕಾರಣ ನಿಮ್ಮ ಮುಂದೆ ಈ ಮಾತುಗಳನ್ನು ಆಡಬೇಕಾಯಿತು. ಎಂದು ಅಂದನು. ಅದ ಕ್ಕೆ ದುರ್ಯೋಧನನು ಸಿಬ್ಬಾಗಿ ತನ್ನ ಗದೆಯನ್ನು ಅವನ ತಲೆಯ ಮೇಲೆ ಹಾಕಹೋದನು. ಭೀಮನೂ ಅವನಮೇಲೆ ಏರಿ ಹೋದನು. ಉಭಯತ ರಿಗೂ ಕೈಗೆ ಕೈಹತ್ತುವ ಪ್ರಸಂಗವು ಒದಗಿತು. ಧೃತರಾಷ್ಟ್ರನು ದುರ್ಯೋ ಧನನ ಕೈಹಿಡಿದು ಕೂಡಿಸಿಕೊಂಡನು. ಇತ್ತ ಅರ್ಜುನನೂ ಭೀಮಸೇನ ನನ್ನು ತಡೆದು, ಅಣಣ್ಣ, ಇದು ಸಮಯವಲ್ಲ; ಎಂದು ಹೇಳಿ ಸಮಾಧಾನಪ ಡಿಸಿದನು. ಅಪ್ಪರಲ್ಲಿ ಶತ್ರುಗಳ ಸಂಗಡ ಸೂರ್ಯನಾರಾಯಣನೂ ಅಸ್ತ್ರ ವಾಗುವದನ್ನು ಕಂಡು, ಧರ್ಮರಾಜನು ಎಲ್ಲಿ ಸೈನಿಕರಿಗೂ ಯುದ್ಧವನ್ನು ನಿಲ್ಲಿಸಬೇಕೆಂದು ಅಪ್ಪಣೆ ಮಾಡಿದನು. ಅದನ್ನು ಕೇಳಿ ಭೀಮಾರ್ಜುನರು ಹೊರಟು ಹೋದರು. ಅದೇ ಕಾಲಕ್ಕೆ ತಂದೆಯ ಕೊಲೆಯಿಂದ ತಲೆತಿರುಗಿದವನಾದ ಅಕ್ಕ ತ್ಥಾಮನು ಕರ್ಣನು ಸತ್ತ ಸುದ್ದಿಯನ್ನು ಕೇಳಿ ಬಿಲ್ಲು ಬಾಣಗಳಿಂದ ಸಜ್ಜಾಗಿ, ವೈರಿಗಳ ಸೇಡು ತೀರಿಸಿಕೊಳ್ಳಬೇಕೆಂದು ಹೊರಟು ಬರುತ್ತಿ ದ್ದನು. ಆಗ ಅವನು-ಎಲೈ ಗಾಂಡೀವಧನುಸ್ಯವನ್ನು ಹಿಡಿದ ಅರ್ಜುನನೆ, ನಾನು ಕರ್ಣನ ಮೇಲೆ ಸಿಟ್ಟಾಗಿ, ಶಸ್ತ್ರಗಳನ್ನು ಬಿಟ್ಟ ಸಮಯದಲ್ಲಿ ರಣ ಭೂಮಿಯು ನಿರ್ವಿಯ್ರವಾದದ್ದನ್ನು ಕಂಡು, ಜಯ ಪಡೆದೆನೆಂದು ಪೌರುಷ ವನ್ನು ಕೊಳ್ಳುವೆಯಾ ? ಇಗೋ ಪ್ರಳಯಕಾಲದ ಅಗ್ನಿಯಂತೆ ಸಿಟ್ಟಿನಿಂದ ಉರಿಯುತ್ತಿರುವ ಈ ಅಶ್ವತ್ಥಾಮನ ಮುಂದೆ ನಿಮ್ಮ ಪರಾಕ್ರಮವು ಹೊರ ಬೀಳಲಿ. ಒಂದು ಕ್ಷಣಮಾತ್ರದಲ್ಲಿ ನಿಮ್ಮೆಲ್ಲರನ್ನೂ ಆ ದುಸ್ಮ ಪಾಂಚಾಲಿ ತನಯನನ ಮಣ್ಣುಗೂಡಿಸುವೆನು. ಎಂದು ಗರ್ಜನೆ ಮಾಡುತ್ತ ಬರುತ್ತಿ