ಪುಟ:ವೇಣೀಬಂಧನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗ್ಯೂಷಣ, - - - - - - - - - . . . . . . . . . . . . .. . . . • • ನೋಡಲಿಲ್ಲ. ಪ್ರಿಯವಾಚಕರೆ, ಸಿಟ್ಟಿನ ಮಹಿಮೆಯನ್ನು ನೋಡಿರಿ, ಆದ ನೆಲ್ಲ ನೋಡಿ ಆ ವೃದ್ದರ ಮನಸಿಗೆ ಬಹಳ ಅಸಮಾಧಾನವಾಯಿತು. ಆಗ ಧೃತರಾಷ್ಟ್ರನು ಅಶ್ವತ್ಥಾಮನಿಗೆ ಕೆಲವು ಮಾತುಗಳನ್ನು ಹೇಳಿ ಅವನನ್ನು ಸಮಾಧಾನಪಡಿಸಿ ಬಾ ಎಂದು ಸಂಜಯನನ್ನು ಅವನ ಬಳಿಗೆ ಕಳಿಸಿದನು. ಆ ಮಾತುಗಳು ಯಾವವೆಂದರೆ “ ಬಾಳಾ ಅಶ್ವತ್ಥಾಮಾ, ಸುಯೋಧನನೂ ನೀನೂ ಬಾಲಸ್ನೇಹಿತರು; ನೀವಿಬ್ಬರೂ ನನ್ನ ತೊಡೆಯಮೇಲೆ ಕೂತು ಆಡಿರುವಿರಿ, ನೂರು ಮಂದಿ ತಮ್ಮಂದಿರೂ ಮಡಿದರೆಂಬ ದಾರುಣವಾದ ದುಃಖದಿಂದಲೂ, ಕರ್ಣನ ಮೇಲಿನ ಪ್ರೇಮದಿಂದಲೂ ಸುಯೋಧನನು ನಿನಗೆ ಕೆಟ್ಟ ಮಾತುಗಳನ್ನು ಆಡಿ ದನು. ಅವುಗಳನ್ನು ನೀನು ಬಹಳ ಹೊತ್ತು ಮನಸ್ಸಿನಲ್ಲಿ ಹಿಡಿಯಬೇಡ. ರಣಭೂಮಿಯಲ್ಲಿ ನಿನ್ನ ತಂದೆಗೆ ಆದ ಅವಮಾನವನ್ನು ಸ್ಮರಿಸು. ಆ ಬಳಿಕ ನಿನ್ನ ಪರಾಕ್ರಮ, ಪೌರುಷಗಳಿಗೆ ತಕ್ಕಂತೆ ಏನು ಮಾಡತಕ್ಕದ್ದನ್ನು ಮಾಡು, ” ಮುಂದಿನ ಪ್ರಕರಣದಲ್ಲಿ ಭೀಮ ದುರ್ಯೋಧನರಿಗೆ ಆದ ಗದಾಯು ಆವು ವರ್ಣಿಸಲ್ಪಡುವದು. V ನೇ ಪ್ರಕರಣ ಗದಾಯುದ್ಧವು. ಮರುದಿವಸ ದುರ್ಯೋಧನನು ತನ್ನ ಉಳಿದ ಸೈನ್ಯವನ್ನೆಲ್ಲ ಒಟ್ಟು ಗೂಡಿಸಿ ಕಲ್ಯನಿಗೆ ಸೇನಾಧಿಪತ್ಯವನ್ನು ಕೊಟ್ಟು, ಪುನ: ಯುದ್ಧವನ್ನು ಹೂಡಿ ದನು. ಕಾಳಗವು ಒಳ್ಳೇ ರಂಗಿಗೆ ಬಂತು, ಧರ್ಮರಾಜನು ಶಲ್ಯನನ್ನು ಕೊಂದು ಹಾಕಿದನು. ಎಂದಿನಂತೆ ಕುರುಸೈನ್ಯವು ದಾರಿ ಸಿಕ್ಕ ಕಡೆಗೆ ಓಡ ಹತ್ತಿತು, ಕೃಪ ಅಶ್ವತ್ಥಾಮ ಕೃತವರ್ಮ ಈ ಮೂವರೇ ವೀರರು ರಣ ಭೂಮಿಯಲ್ಲಿ ಉಳಿದರು. `ಭೀಮಶೇನನು ಇಂದು ಸಾಯಂಕಾಲದೊಳಗಾಗಿ ದುರ್ಯೋಧನನನ್ನು ಕೊಲ್ಲುವೆನು ಇಲ್ಲವೆ ಅಗ್ನಿಕುಂಡದಲ್ಲಿ ಹಾರಿಕೊಳ್ಳು ವೆನು ಎಂದು ಪ್ರತಿಜ್ಞೆ ಮಾಡಿದನು. ಅದನ್ನು ತಿಳಿದು ದುರ್ಯೋಧನನು