ಪುಟ:ವೇಣೀಬಂಧನ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

19

ವಾಗ್ಯೂಷಣ, ಪಶುವೆ, ನಿಷ್ಕಲಂಕವಾದ ಚಂದ್ರವಂಶಕ್ಕೆ ನಿನ್ನಿಂದ ದೋಸವು ತಟ್ಟುವದಿ ಲ್ಲವೆ? ನಿನ್ನ ಕಣ್ಣ ಮುಂದೆಯೇ ನಿನ್ನ ನೂರುಮಂದಿ ತಮ್ಮಂದಿರನ್ನೂ ಕೊಂದುಹಾಕಿ ಪಾಂಚಾಲಿಯ ಸಿಟ್ಟೆ೦ಬ ಬೆಂಕಿಯನ್ನು ನಂದಿಸಿದೆನು. ಹೀಗಿ ರಲು ನಿನ್ನ ಅಭಿಮಾನವು ನಸ್ಮವಾಗಲಿಕ್ಕೆ ಕಾರಣವೇನು ? ಈಗಿನಂತೆ ಇದಕ್ಕು ಮೊದಲಾದರೂ ಅಭಿಮಾನವನ್ನು ಬಿಟ್ಟಿದ್ದರೆ ಉಪಯೋಗವಾಗು ತಿದ್ದಿಲ್ಲವೆ? ಎಂದು ಚುಚ್ಚಿ ಚುಚ್ಚಿ ಗರ್ಜನೆಮಾಡಿ ಮಾತಾಡುತ್ತಿದ್ದನು. ಆದರೂ ದುರ್ಯೋಧನನು ಸರೋವರದೊಳಗಿಂದ ಹೊರಬೀಳಲಿಲ್ಲ. ಭೀಮ ತೇನನು ಒಳ್ಳ ಆವೇಶಗೊಂಡು, ತನ್ನ ಗದೆಯನ್ನು ತಕೊಂಡು ಮಂದರ ಪರ್ವತದಿಂದ ಸಮುದ್ರವನ್ನು ಕಡೆದಂತೆ ಆ ಸರೋವರದ ನೀರನ್ನು ಬಳ್ಳ ಭರದಿಂದ ಕಡೆಯಹತ್ತಿದನು. ಅದರಿಂದ ಅದರೊಳಗಿಂದ ಜಲಚರಗಳು ಉಕ್ಕಿ ಹೊರಸೂಸುವ ನೀರಿನ ಸಂಗಡ ಹೊರಬಿದ್ದು ಪ್ರಾಣಬಿಡಹತ್ತಿದವು. ಸಮುದ್ರಮಥನದಿಂದ ಕಾಲಕೂಟ ವಿಷವು ಹೊರಬಿದ್ದಂತೆ ದುರ್ಯೋಧ ನನು ಹೊರಬಿದ್ದನು. ತರುವಾಯ ಅವನು ಎಲಾ ಮೂರ್ಖಾ, ವಾಯು ಪುತ್ರಾ ಯಾಕೆ ಸುಮ್ಮನೆ ಗಳಹು, ನಾನು ನಿನಗೆ ಹೆದರಿ ಈ ಸರೋವರ ದಲ್ಲಿ ಅಡಗಿಕೊಂಡಿದ್ದೇನೆಂದು ತಿಳಿಯಬೇಡ; ಇನ್ನೂ ನನ್ನಿಂದ ಪಾಂಡವ ರನ್ನು ಕೊಲ್ಲುವದಾಗಲಿಲ್ಲೆಂದು ನಾಚಿಕೆ ಪಟ್ಟು ವಿಶ್ರಾಂತಿಯ ಸಲುವಾಗಿ ಸ್ವಲ್ಪಹೊತ್ತು ಪಾತಾಳಲೋಕದಲ್ಲಿ ಹೋಗಿ ಕುಳಿತುಕೊಂಡಿದ್ದೆನು; ಎಂದು ಅಂದನು. ಆಗ ಶ್ರೀಕೃಷ್ಯನು ಅದು ಹ್ಯಾಗೇ ಇರಲಿ, ನೀನು ಭೀಮನ ಸಂಗಡ ಗದಾಯುದ್ಧವನ್ನು ಮಾಡಿದರೆ ಮಾತ್ರ ನಿಜವಾದ ಕ್ಷತ್ರಿಯನು ಎಂದು ಅನ್ನಲು, ದುರ್ಯೋಧನನು ಮೇಲೆಬಂದು ತನ್ನ ಗದೆಯನ್ನು ನೆಲದ ಮೇಲೆ ಇಟ್ಟು ರಣಭೂಮಿಯ ಕಡೆಗೆ ನೋಡಿದನು. ಅಲ್ಲಿ ಕೌರವಪಕ್ಷದ ಜನರು ಯಾರೂ ಇದ್ದಿಲ್ಲ. ಅಸಂಖ್ಯ ಹೆಣಗಳು ರಾಶಿರಾಶಿಯಾಗಿ ಬಿದ್ದಿದ್ದವು. ಪಾಂಡವರ ಪಕ್ಷದ ವೀರರು ನಿಂಹನಾದವನ್ನು ಮಾಡುತ್ತಿದ್ದರು. ಇದನ್ನೆಲ್ಲ ಕಂಡು ಅವನಿಗೆ ಬಹಳ ದುಃಖವಾಯಿತು. ಕೂಡಲೆ ಅವನು ಒಮ್ಮೆ ನಿಟ್ಟು ಸುರು ಬಿಟ್ಟನು. ಅದನ್ನು ಕಂಡು ಭೀಮಸೇನನು-ಎಲೈ ಕೌರವನೆ, ಪಾಂಡವರು ಸಬಾಂಧವರಾಗಿದ್ದು ನನ್ನ ಬಂಧುಬಾಂಧವರೆಲ್ಲ ತೀರಿಕೊಂಡ ರೆಂದು ಮನಸಿನಲ್ಲಿ ವ್ಯಸನಪಡಬೇಡ; ನವ ಅಯ್ಯರಲ್ಲಿ ಬೇಕಾದವರೊ ಡನೆ ಯುದ್ಧ ಮಾಡು ಎಂದು ಹೇಳಿದನು, ಈ ಮಾತು ಕೇಳಿ ದುರ್ಯೋಧನನು