ಪುಟ:ವೇಣೀಬಂಧನ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗ್ಯೂಷಣ, ೯ ನೇ ಪ್ರಕರಣ, de+ ಕಪಟ ಬ್ರಾಹ್ಮಣನು. ಹಿಂದಿನ ಪ್ರಕರಣದಲ್ಲಿ ಹೇಳಿದ ಮೇರೆಗೆ ಧರ್ಮರಾಜನೂ ಬ್ರೌಪದಿ ಯೂ ನಿಬಿರದಲ್ಲಿ ಮಾತಾಡುತ್ತ ಕುಳಿತಿರಲು, ಹೊರಮಗ್ಗಲು, ಯಾರೋ ಆರ್ತಸ್ವರದಿಂದ-ಧರ್ಮಾತ್ಮರುಗಳಿರಾ, ನಾನು ವೃದ್ದ ಬ್ರಾಹ್ಮಣನು; ನೀರ ಡಿಕೆಯಿಂದ ಬಳಲುತ್ತೇನೆ. ಕುಡಿಯುವದಕ್ಕೆ ಸ್ವಲ್ಪ ನೀರು ಕೊಡಿರಿ ಎಂದು ಒದರುವ ಧ್ವನಿಯು ಕೇಳಬಂತು. ನಿಜವಾಗಿ ಅವನು ದುರ್ಯೋಧನನ ಮಿತ್ರನಾದ ಚಾರ್ವಾಕನೆಂಬ ರಾಕ್ಷಸನು. ಏನಾದರೂ ಕಪಟವನ್ನು ಮಾಡಿ, ಪಾಂಡವರನ್ನು ಸಂಕಟದಲ್ಲಿ ಕೆಡವಬೇಕೆಂಬ ದುರ್ಬುದ್ಧಿಯಿಂದ ಬ್ರಾಹ್ಮ ನ ವೇಷವನ್ನು ತಾಳಿ, ಧರ್ಮರಾಜನಿದ್ದಲ್ಲಿಗೆ ಬಂದಿದ್ದನು. ಧರ್ಮರಾಜನು ಅವನನ್ನು ಸೇವಕರಿಂದ ಒಳಗೆ ಕರೆಯಿಸಿಕೊಂಡು, ಆಸನಾದಿ ಉಪಚಾರ ಗಳಿಂದ ಅತಿಥಿ ಸತ್ಕಾರವನ್ನು ಮಾಡಿ, ಸುಗಂಧವೂ ಶೀತಲವೂ ಆದ ನೀರ ನ್ಯೂ ಉಪಹಾರವನ್ನೂ ತರಿಸಿ ಮುಂದೆ ಇಡಿಸಿ ಸ್ವೀಕರಿಸಬೇಕೆಂದು ಕೈ ಮುಗಿದು ಬಿನ್ನವಿಸಿದನು. ಆಗ ಬ್ರಾಹ್ಮಣನು ಉಪಹಾರದ ಜೀನಸನ್ನು ತಕೊಂಡು ಮುರಿದು ಬಾಯಲ್ಲಿ ಇಡತಕ್ಕವನು; ಅಸ್ಟರಲ್ಲಿ ಏನೋ ನೆನ ಪಾದವನಂತೆ ನಟಿಸಿ ಆ ಜೀನಸನ್ನು ಅಲ್ಲಿಯೇ ಇಟ್ಟು, ಓಹೋ ! ನೀವು ಕ್ಷತ್ರಿಯರಲ್ಲವೆ? ಈಗ ರಣಭೂಮಿಯಲ್ಲಿ ನಿತ್ಯದಲ್ಲಿಯೂ ನಿಮ್ಮ ಆಪ್ತರಿ ಮೂರು ಸಾವಿರಗಟ್ಟೆಯಾಗಿ ಮರಣಹೊಂದುತ್ತಿರುವರು. ಅದರಿಂದ ನಿಮಗೆ ಅಶೌಚವಿರುವದು. ನಾನು ಈ ಆಲದ ಗಿಡದ ತಂಪಾದ ನೆರಳಿನಲ್ಲಿಯೇ ಸ್ವಲ್ಪಹೊತ್ತು ಕುಳಿತು ವಿಶ್ರಾಂತಿಯನ್ನು ತಕ್ಕೊಂಡು, ನನ್ನ ನೀರಡಿಕೆಯನ್ನು ಕಳಕೊಳ್ಳುವೆನು. ಎಂದು ಹೇಳಿದನು. ಧರ್ಮ ರಾಜನೂ ದೌಪದಿಯೂ ಅತಿಥಿಸತ್ಕಾರವು ಸರಿಯಾಗಿ ಆಗಲಿಲ್ಲೆಂದು ಹಳಹಳಿಸಿದರು; ಬ್ರಾಹ್ಮಣನು ಮನಸಿಗೆ ಹಚ್ಚಿಕೊಳ್ಳಬೇಡಿರೆಂದು ಉಪಚಾರದ ಮಾತುಗಳನ್ನು ಆಡಿದನು. ತರುವಾಯ ಧರ್ಮರಾಜನು-ಎಲೈ ವಿಪ್ರಶ್ರೇಷ್ಠರೆ, ಈಗ ನೀವು ಎಲ್ಲಿಂದ ಬಂದಿರಿ? ಇಷ್ಟು ಯಾಕೆ ದಣಿದಿರುವಿರಿ ? ಎಂದು ಕೇಳಿದನು. ಅದಕ್ಕೆ ಆ ಬ್ರಾಹ್ಮಣನು-ನಾವು ವೇದಾಧ್ಯಯನದಲ್ಲಿ ಕಾಲಕಳೆಯುವ ಬ್ರಾಹ್ಮಣರು;