ಪುಟ:ವೇಣೀಬಂಧನ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪ ವಾಗ್ಯೂಷಣ, ೧೦ ನೇ ಪ್ರಕರಣ. - ~ ಭ್ರಾಂತಿಯು, ಆ ಬಳಿಕ ಧರ್ಮರಾಜನು ಸೇವಕರಿಗೆ ಚಿತೆಯನ್ನು ಸಿದ್ಧ ಮಾಡಲಿಕ್ಕೆ ಆಜ್ಞಾಪಿಸಿದನು. ಅಗ್ನಿಯು ಸಿದ್ದವಾಗಿ ನಾಲ್ಕು ದಿಕ್ಕಿಗೆ ಕುಡಿಗಳನ್ನು ಚಾಚಿ ಭಯಂಕರವಾಗಿ ಉರಿಯಹತ್ತಿತು. ಆ ಇಬ್ಬರು ಸ್ತ್ರೀ ಪುರುಷರು ಅದರಲ್ಲಿ ಹಾರಲಿಕ್ಕೆ ಸಿದ್ಧರಾದರು; ಧರ್ಮರಾಜನು ಒಬ್ಬ ಸೇವಕನನ್ನು ಕರೆದು ಮಾತೆಯಾದ `ಕುಂತೀದೇವಿಗೆ-ತಾಯಿಯೇ, ಯಾವನು ನಮ್ಮೆಲ್ಲರನ್ನು ಲಾಕ್ಷಾಗೃಹದೊಳಗಿಂದ ಪಾರುಮಾಡಿದನೋ ಯಾವನು ಕಿರ್ಮಿರಬಕ ಹಿಡಿಂಬ ಮೊದಲಾದ ಕ್ರೂರ ರಾಕ್ಷಸರನ್ನು ತನ್ನ ಬಾಹುಬಲದಿಂದ ನಾಶ ಮಾಡಿದನೋ ಆ ಬಲಿಷ್ಠನಾದ ಭೀಮಸೇನನು ನಮ್ಮ ದುರ್ದೈವದಿಂದ ಇಂದು ಪರಲೋಕಕ್ಕೆ ತೆರಳಿದನು. ಈ ದು:ಖಕರವಾದ ಸಂಗತಿಯನ್ನು ನಿನಗೆ ತಿಳಿಸುವದು ನನ್ನ ಪಾಲಿಗೆ ಬಂದದ್ದಕ್ಕಾಗಿ ನನಗೆ ಬಹಳ ದುಃಖವಾ ಗುತ್ತದೆ. ಎಂದು ಹೇಳಿ ಕಳಿಸಿದನು. ತರುವಾಯ ಅವನು ತನ್ನ ಆಜ್ಞಾಧಾ ರಕ ತಮ್ಮನಾದ ಸಹದೇವನಿಗೆ-ತಮ್ಮಾ, ನೀನು ನಮ್ಮ ಕುಲದಲ್ಲಿ ಬೃಹಸ್ಪ ತಿಯಂತೆ ಬುದ್ದಿವಂತನಿರುವೆ. ನೀನು ವಯಸ್ಸಿನಿಂದ ಚಿಕ್ಕವನಾದಾಗ್ಯೂ ಜ್ಞಾನದಿಂದ ನನಗಿಂತ ಚಿಕ್ಕವನಲ್ಲ. ನಾನು ಭೀಮಾರ್ಜುನರ ಭೆಟ್ಟಿಗೆ ಪರ ಲೋಕಕ್ಕೆ ಹೋದೆನೆಂದು ಶೋಕಮಾಡಬೇಡ, ವಿವೇಕದಿಂದ ನಡೆದು ನಮಗೂ ನಮ್ಮ ಪಿತೃಗಳಿಗೆ ತರ್ಪಣೋದಕವನ್ನು ಕೊಡುವದಕ್ಕೆ ಬಹು ದಿವಸಗಳ ವರೆಗೆ ಬದುಕಿರು, ನಕುಲನು ನಮ್ಮಂತೆ ಅಭಿಮಾನಿಯಾಗಿರು ವನು. ಅವನ ಮನಸ್ಸನ್ನು ನೋಯಿಸದೆ ಉಭಯತರೂ ಒಮ್ಮನಸಿನಿಂದ ನಡೆಯುತ್ತ ಇರಿ. ಎಂದು ಹೇಳಿ ಕಳಿಸಿದನು. ಇದೇ ಮೇರೆಗೆ ಪದಿಯು ತನ್ನ ದಾನಿಯಕೂಡ ಸವತಿಯಾದ ಸುಭದ್ರಾದೇವಿಗೆ-ಪ್ರಿಯ ಸುಭದ್ರಾದೇ ವಿಯೇ, ಅಭಿಮನ್ಯುವಿನ ಹೆಂಡತಿಯಾದ ಉತ್ತರೆಯು ನಾಲ್ಕು ತಿಂಗಳು ಗರ್ಭವತಿ ಇರುವಳು, ಅವಳನ್ನು ಚನ್ನಾಗಿ ಜೋಕೆಮಾಡು. ಯಾಕಂದರೆ ಆ ಗರ್ಭವೇ ನಮ್ಮ ವಂಶಾಂಕುರವು. ಈಶ್ವರಕೃಪೆಯಿಂದ ಅದು ಉದ ಯಕ್ಕೆ ಬಂದರೆ ಅದೇ ನಮಗೆ ಮುಂದೆ ಸಿಂಡೋದಕಗಳನ್ನ ಕೊಡಬ ಹುದು ಎಂದು ಹೇಳಿ ಕಳಿಸಿದಳು,