ಪುಟ:ವೇಣೀಬಂಧನ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ವಾಗೂ ಷಣ. ರವಾಗಿ ಕಾಣುತ್ತಿತ್ತು. ಅದೇ ಸ್ವರೂಪದಿಂದ ಅವನು ಬ್ರೌಪದಿಯ ಹೇಳಲು ಹಾಕುವ ತನ್ನ ಪ್ರತಿಜ್ಞೆಯನ್ನು ಕೊನೆಗಾಣಿಸುವ ನಿಮಿತ್ತದಿಂದ ಅವಳನ್ನು ಶೋಧಿಸುತ್ತ ಬಹು ವೇಗದಿಂದ ಬರುತ್ತಿದ್ದನು. ಜನರು ಅವನನ್ನು ಕಂಡು ಹೆದರಿ ಗದ್ದಲವನ್ನು ಎಬ್ಬಿಸಿದರು. ಧರ್ಮರಾಜನು, ಅವನ ಭಯಂಕರ ವಾದ ಸ್ವರೂಪವನ್ನು ದೂರದಿಂದಲೇ ನೋಡಿ, ಭೀಮನ ಮರಣವಾರ್ತೆ ಯನ್ನು ಮೊದಲೇ ಹೇಳಿದ್ದನಾದ್ದರಿಂದ ಈಗ ಪಾಂಚಾಲಿಯ ಶೋಧಮಾಡುತ್ತ ಬರುವವನು ದುರ್ಯೋಧನನೇ ಎಂತಲೂ ಅವನು ಗದಾಯುದ್ಧದಲ್ಲಿ ಅರ್ಜು ನನನ್ನು ಕೊಂದು ಬಂದಿರುವನೆಂತಲೂ ತಿಳಕೊಂಡನು.' ಅಸ್ಕರಲ್ಲಿ ದುರ್ಯೋಧನನೆಂಬಂತೆ ಭ್ರಾಂತಿಯನ್ನು ಹುಟ್ಟಿಸುವ ಭೀಮಸೇನನುಎಲೈ ವೀರಾಗ್ರಣಿಗಳೇ ನನ್ನನ್ನು ಕಂಡು ಹೆದರಬೇಡಿರಿ, ನನ್ನಿಂದ ಯಾರಿಗೂ ಉಪದ್ರವವಾಗಲಿಕ್ಕಿಲ್ಲ. ಆದರೆ ಯಾವಳನ್ನು ದುಃಶ್ಯಾಸನನು ನೆರೆದ ಸಭೆಯಲ್ಲಿ ತುರುಬು ಹಿಡಿದು ತಂದನೋ ಯಾವಳನ್ನು ನಗ್ನ ಮಾಡುವದಕ್ಕಾಗಿ ಅವಳ ವಸ್ತ್ರಗಳನ್ನು ಕಳಕಳದು ಬಗೆದನೆ ಮತ್ತು ಯಾವಳಿಗೆ ತನ್ನ ದಾನಿಯಾಗಿ ತೊಡೆಯ ಮೇಲೆ ಕೂಡ್ರೆಂದು ದುರ್ಯೋಧ ನನು ಅಂದನೋ ಆ ಪಾಂಚಾಲರಾಜಕನ್ನಿಕೆಯಾದ ಬ್ರೌಪದಿಯು ಸದ್ಯಕ್ಕೆ ಎಲ್ಲಿರುವಳು ತೋರಿಸಿರಿ ಎಂದು ಒದರುತ್ತ ತೀರ ಸಮೀಪಕ್ಕೆ ಬಂದನು. ಈ ನೀತನಾದ ದುರ್ಯೋಧನನು ಈ ಅನಾಥ ಅಬಲೆಯನ್ನು ನಿಷ್ಕಾ ರಣವಾಗಿ ಪೀಡಿಸುವನೆಂದು ತಿಳಿದು ಧರ್ಮರಾಜನು ದುಃಖವನ್ನು ಮರೆತು ಬಿಟ್ಟನು. ಅವನ ಕಾತ್ರತೇಜವು ಜಾಗ್ರತವಾಯಿತು. ಮತ್ತು ದೌಪದಿ ಯನ್ನು ಕುರಿತು ಪ್ರಿಯೆ ಗಾಬರಿಯಾಗಬೇಡ, ಕ್ಷಣಮಾತ್ರದಲ್ಲಿ ಈ ದುಷ್ಟ ನನ್ನು ಯಮನಸದನಕ್ಕೆ ಅಟ್ಟುವೆನು. ಎಲಾ ಯಾರಲ್ಲಿ ? ನನ್ನ ಧನುಸ್ಯ ಬಾಣಗಳನ್ನು ತನ್ನಿರಿ ಎಂದು ಸೇವಕರಿಗೆ ಆಜ್ಞಾಪಿಸಿದನು. ಅವರು ಬೇಗ ಬಾರದ್ದರಿಂದ ಅವನನ್ನು ಕಿಚ್ಚಿನಲ್ಲಿ ನೂಕುವ ನಿಶ್ಚಯ ಮಾಡಿದನು. ಇತ್ತ ಅಗ್ನಿಪ್ರವೇಶಮಾಡಲಿಕ್ಕೆ ಸಿದ್ಧಳಾದ ಬ್ರೌಪದಿಯನ್ನು ಕಂಡು ಜಯಂದರ ನೆಂಬ ವಿಶ್ವಾಸದ ಸೇವಕನು ತಾಯಿ ದೌಪದಿ ನಿನ್ನ ದುಃಖವು ನೀಗುವೆ ಆಶೆಯು ಇನ್ನು ಉಳಿಯಲಿಲ್ಲ. ದುಃಶಾಸನು ಜಗ್ಗಿದ್ದರಿಂದ ಬಿಚ್ಚಿದ ಈ ನಿನ್ನ ಕೇಶಪಾಶಗಳು ಆಗಾಗ್ಗೆ ನಿನ್ನ ಕಣ್ಣ ಮುಂದೆ ಬರುತ್ತಿರುವವು. ಅವುಗಳನ್ನು