ಪ್ರಸ್ತಾವನೆ . ಮಹನೀಯರೇ, ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದ ಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು; ( ಲೋಕೋಭಿನ್ನ ರುಚಿಃ” ಎಂಬ ನಾಣ್ಣುಡಿಯಂತೆ, ಸರ್ವಜನರಿಗೂ ಸಮಾಧಾನ ವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು, ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾದ್ಯರ ಚರಿತ್ರೆಯನ್ನು ಬರೆ ಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ « ಶಂಕರಕಥಾಸಾರ ” ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನ ದಿಂದ ರಸಭರಿತವಾಗಿ ಮಾಡಲ್ಪ ಟ್ಟಿದೆ. ಈ ಗ್ರಂಥಕರ್ತರಾದ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರಿಯ ವರು ಇನ್ನೂ ಚಿಕ್ಕ ವಯಸ್ಸಿನವರು. ಇದೇ ಇವರ ಮೊದಲನೆಯ ಗ್ರಂಥರಚನೆಯು. ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇಮಗೆ ಉತ್ಸಾಹ ಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರವಿಸದೇ ಶ್ರೀ ಆತ ನಿರರತರ ಚತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಸಕ್ರಮಿಸಿ ಮ... ಸಿದುದು ಆದ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು : ಶ್ರೇಯಾಂಸಿಬಹು ಎಫ್ಘಾನಿ” ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರದಲ್ಲಿ ಹತಾಶರಾಗಿ ಧೈರಗುಂದಿದವರಾಗಿದ್ದರು. ಆಗ ಇವರಿಗೆ ಉತ್ಸಾಹ ಕೊಟ್ಟಿದುದ ರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿ ಸುವರೆಂದು ಕೋರುತ್ತೇವೆ. ಇತಿ ಮೈಸೂರು | ಬಿ. ವಿ. ನರಸಿಂಹೈಯ್ಯಂಗಾರ್15-3-1916 |
ಪುಟ:ಶಂಕರ ಕಥಾಸಾರ.djvu/೧೧
ಗೋಚರ