ಪುಟ:ಶಂಕರ ಕಥಾಸಾರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ನದಿಂದ ಸಹಾಯಮಾಡುವನು. ಇಂದ್ರನೂ ಸುಧನ್ವನೆಂಬ ಅರಸನಾಗಿ ನಿನ್ನನ್ನು ನಿರೀ ಕ್ಷಿಸುತ್ತಾ ಸೌಗತರಂ ಗುಂಪುಗೂಡಿಸುತ್ತಲಿರುವನು” ಎಂದುಸುರಿದನು, ಮಹೇಶ್ವರನ ಈ ಪ್ರಕಾರವಾದ ಆಜ್ಞೆಯಂ ಕುಮಾರಸ್ವಾಮಿಯು ಮಹಾಪ್ರಸಾದವೆಂದಂಗಿಕ ರಿಸಿದನು. ಬಳಿಕ ಆ ವಿಶಾಖನು ಭಟ್ಟಪಾದಾಚಾರ ” ರೆಂಬ ಹೆಸರಿನಿಂದ ಭೂಲೊ ಕದಲ್ಲಿ ಅವತಾರವಂ ಮಾಡಿದನು. ಆತನು, ವಾದಗಳಲ್ಲಿ ಯುಕ್ತಿಯುಕ್ತವಾದ ಶಾಸ್ತ್ರನಿದರ್ಶಗಳಿಂದ ಶತ್ರುಗಳಂ ಗೆಲ್ಲುತ್ಯ ದಿಗ್ವಿಜಯವಂ ಮಾಡಿಕೊಂಡು ಸುಧನ್ವರಾ ಯನ ರಾಜಧಾನಿಗೆ ಬಂದನು. ಬಹಳಕಾಲದಿಂದ ನಿರೀಕ್ಷಿಸಿಕೊಂಡಿದ್ದ ರಾಜನು ಅವರನ್ನು ಅರ್ತ್ಯಪಾದ್ಯಾಯಮನಾದಿಗಳಿಂದ ಪೂಜಿಸಿ ಸಿಂಹಾಸನದಮೇಲೆ ಕುಳ್ಳಿ ರಿಸಿದನು. ಆಗ ಭಟ್ಟಪಾದರು ಸಮಾಜದಲ್ಲಿದ್ದ ಒಂದು ಮರದಮೇಲೆ ಕುಳಿತು ಕೂಗು ತಿದ್ದ ಒಂದು ಕೋಗಿಲೆಯನ್ನು ಕಂಡು ( ಮಿನೈನ್ನ ಸಂಗಕ್ಕೆ ನೀಜೈ ಕಾಕ ಕುಲೈಃ ಸಿಕ| ಶ್ರುತಿದೂಷಕನಿರ್ಹಾರ್ದೈಶ್ವಾಸನೀಯಸ್ತದಾ ಭವೇ ' || ಎಲೈ ಕೋ ಗಿಲೆಯೇ ! ಮಲಿನವಾಗಿಯೂ, ನೀಚವಾಗಿಯೂ, ಶ್ರುತಿದೂಷಕವಾಗಿಯೂ ಇರುವ ಈ ಕಾಗೆಗಳ ಸಂಬಂಧವಿಲ್ಲದಿದ್ದರೆ ನೀನು ಶ್ಲಾಘ್ರನಾಗುವಿ. ಎಂದರ್ಥವುಳ್ಳ ಶ್ಲೋಕ ದಿಂದ « ಶ್ರುತಿದೂಷಕರಾದ ಬೌದ್ದರ ಸಂಬಂಧವಿಲ್ಲದಿದ್ದರೆ ನೀನು ಕೀರ್ತಿವಂತ ನಾಗು” ಎಂದು ಹೇಳಿದರು. ಅದನ್ನು ಕೇಳಿ ಬೌದ್ದರೆಲ್ಲರೂ ಮತವಿಷಯಕವಾದ ವಾಗ್ವಾದಕ್ಕಾರಂಭಿ ಸಿದರು. ಭಟ್ಟ ಪಾದರು ಅದನ್ನೆಲ್ಲಾ ಯುಕ್ತಿಸತವಾದ ಪ್ರಮಾಣಗಳಿಂದ ಖಂಡಿಸಿ ರಾಜನಿಗೆ ವೇದತತ್ವವನ್ನು ಬೋಧಿಸಲಾರಂಭಿಸಿದರು. ಆಗ ರಾಜನು « ಯಾರು ತಮ್ಮ ಮತವು ಸತ್ಯವನ್ನು ತ್ತಾರೋ ಅವರು ಪರ್ವತದ ತುದಿಯಿಂದ ಧುಮುಕಿ ಜೀವ ಸಹಿತವಾಗಿ ಬದುಕಿ ಬಂದರೆ ಅವರ ಮತವೇ ಸತ್ಯವನ್ನು ತೇನೆ” ಎಂದನು. ಬೌದ್ಧರು ಇದಕ್ಕೆ ಹೆದರಿದರು. ಆಗ ಭಟ್ಟಪಾದರು ಪರ್ವತದ ತುದಿಗೆ ಹತ್ತಿ ವೇದಗಳು ಪ್ರಮಾಣವಾಗಿದ್ದರೆ ನನಗೇನೂ ಆಗಬೇಡ ಎಂದು ಬಿದ್ದು, ಯಾವ ಉಪಹತಿಯೂ ಇಲ್ಲದೆ ರಾಜನಲ್ಲಿಗೆ ಬಂದರು. ಆಗ ಬೌದ್ಧರು : ಇವನು ಯಾವುದೋ ಮಣಿಮಂತೌಷಧದ ಸಹಾಯ ದಿಂದ ಬದುಕಿಬಂದಿದ್ದಾನೆ ಎನ್ನಲು, ರಾಜನು ಗುಟ್ಟಾಗಿ ಒಂದು ಕುಂಭದಲ್ಲಿ ಒಂದು ಕರಿನಾಗರಹಾವನ್ನು ಹಾಕಿಸಿ ಭದ್ರವಾಗಿ ಬಾಯಿಕಟ್ಟಿದಮೇಲೆ ಸಭೆಗೆ ೨ >>