ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ
೨೧.

ಇತರ ಶಿಷ್ಯರು, ಅದನ್ನು ನೋಡಿ ಭಯಾಶ್ಚರ್ಯಯುಕ್ತರಾಗಿ, ಅವರಲ್ಲಿದ್ದ
ದ್ವೇಷವನ್ನು ಬಿಟ್ಟು ಬಿಟ್ಟರು.
ಅನಂತರ ಒಂದುದಿನ ಆಚಾರ್ಯರು ಶಿಷ್ಯರಿಗೆ ಭಾಷ್ಯಪ್ರವಚನಮಾಡಿಸುತ್ತಿದ್ದಾಗ
ಸಗರ್ವಿಗಳಾದ ಕೆಲವರು ಪಾಶುಪತರು ಆಚಾರ್ಯರ ಭಾಷ್ಯವಂ ಖಂಡಿಸಬೇಕೆಂಬ
ಮನಸ್ಸಿನಿಂದ ಬಂದು "ಕಾರ್ಯ, ಕಾರಣ, ಯೋಗ, ವಿಧಿ, ದುಃಖಾಂತಗಳೆಂಬ ಐದು
ಪದಾರ್ಥಗಳು ಜನರ ಮೋಕ್ಷಾರ್ಥವಾಗಿ ಈಶ್ವರ (ಪಶುಪತಿ) ನಿಂದ ಉಪದೇಶಿಸಲ್ಪ
ಟ್ಟಿವೆ; ಅವುಗಳಲ್ಲಿ ಮಹತ್ವಾದಿಗಳೇ ಕಾರ್ಯವು; ಪ್ರಧಾನವೇ ಕಾರಣವು; ಸಮಾಧಿಯೇ
ಯೋಗವು; ತ್ರಿಷವಣಸ್ನಾನಾದಿಗಳೇ ವಿಧಿಯು; ಮೋಕ್ಷವೇ ದುಃಖಾಂತವಾಗಿ
ಇರುತ್ತವೆ; ಅವುಗಳಲ್ಲಿ ಪ್ರಪಂಚಕ್ಕೆ ಪ್ರಧಾನವೇ ಉಪಾದಾನಕಾರಣವು; ಪಶುಪತಿಯಾದ
ಈಶ್ವರನೇ ನಿಮಿತ್ತ ಕಾರಣವು;'ಸಈಕ್ಷಾಂಚಕ್ರೇ ಸಪ್ರಾಣಮಸೃಜತ' ಇತ್ಯಾದಿ ಪ್ರಾಣಾ
ದಿಸೃಷ್ಟಿಯನ್ನು ತಿಳಿಸುವ ಈಕ್ಷಾ ಪೂರ್ವಕವಾದ ಶ್ರುತಿಗಳಿಂದ ಘಟಕರ್ತನಾದ ಕುಲಾಲ
ನಂತೆ ಆದಿಕರ್ತನಾದ ಪರಮೇಶ್ವರನು ರಾಜಸ್ಯೆವಸ್ವತಾದಿಗಳಂತೆ ನಿಮಿತ್ತ ಕಾರಣನಾಗಿ
ದ್ದಾನೆ; ಮತ್ತು ಸಾವಯವವಾಗಿಯೂ , ಅಚೇತನವಾಗಿಯೂ, ಅಶುದ್ದವಾಗಿಯೂ,
ನಾನಾವಿಧವಾಗಿಯೂ, ಇರುವ ಪ್ರಪಂಚವು, ಮೃಧ್ವಿಕಾರವಾದ ಘಟರುಚಕಾದಿಗಳಂತೆ
ಪ್ರಕೃತ್ಯು ಪಾದಾನಕಗಳಲ್ಲದೆ ಬ್ರಹ್ಮೋಪಾದಾನಕಗಳೆಲ್ಲವೂ; ಜಗತ್ತಿಗೆ ಬ್ರಹ್ಮವೇ
ಉಪಾದಾನವಾದರೆ ಪ್ರಳಯದಲ್ಲಿ ಬ್ರಹ್ಮನೊಡನೆ ಆವಿಭಾಗವಾಗುವ ಪ್ರಪಂಚದ ದೋಷ
ಗಳಿಂದ ಬ್ರಹ್ಮನು ದುಷ್ಟವೆಂದು ಒಡಂಬಡಬೇಕಾದೀತು; ಆದ್ದರಿಂದ ಅದ್ವೈತಿಗಳಿಗಭಿಮತ
ವಾದ ಬ್ರಹ್ಮೋಪಾದಾನಕತ್ವವು ಸರಿಯಲ್ಲವು" ಎಂದು ಇವೇ ಮೊದಲಾಗಿ ಹೇಳಲು
ಸನಂದನರು ಆಚಾರ್ಯರ ಅಪ್ಪಣೆಯಂ ಪಡೆದು" ಪ್ರಪಂಚಕ್ಕೆ ಬ್ರಹ್ಮವು ಅಭಿನ್ನ
ನಿಮಿತ್ತೋಪಾದಾನವೆಂದರೆ ಛಾಂದೋಗ್ಯಾದಿಶ್ರುತಿಗಳಲ್ಲಿ ಸ್ಪಷ್ಟವಾಗಿರುವ ಪ್ರತಿಜಾ
ದೃಷ್ಟಾಂತಗಳಿಗೆ ಉಪರೋಧವಿಲ್ಲವೆಂದು ಬ್ರಹ್ಮಸೂತ್ರವೇ ನಿರ್ಣಯಿಸುತ್ತದೆ.' ಉತ
ತಮಾದೇಶಮಪ್ರಾಕ್ಷ್ಯಹ' ಇತ್ಯಾದಿ ಶ್ರುತಿವಾಕ್ಯಗಳು ಬ್ರಹ್ಮವೇ ಜಗತ್ತಿಗೆ ಉಪಾದಾನ
ವಾಗಿದ್ದರೆ ಉಪರೋಧಿಸಲ್ಪಟ್ಟಾವು; ಭಿನ್ನ ನಿಮಿತ್ತೋಪಾದಾನಕತ್ವವನ್ನು ಹೇಳುವುದಾದರೆ
ಏಕಮೃತ್ಪಿಂಡ ವಿಜ್ಞಾನದಿಂದ ಸರ್ವಮೃಣ್ಮಯವಿಜ್ಞಾನವನ್ನು ದೃಷ್ಟಾಂತವಾಗಿ ತಿಳಿ
ಸುವ ಛಾಂದೋಗ್ಯವಚನವು ಉಪರೋಧಿಸಲ್ಪಟ್ಟಿತು;ಜಗದುತ್ಪತ್ತಿಗಿಂತಲೂ, ಪೂರ್ವ
ದಲ್ಲಿ 'ಏಕಮೇವಾದ್ವಿತೀಯಂ ಬ್ರಹ್ಮ' ಎಂಬ ಅವಧಾರಣದಿಂದಲೂ ಬೇರೆ ಅಧಿ
ಷ್ಟಾತೃವಿಲ್ಲದ್ದರಿಂದಲೂ, ಬ್ರಹ್ಮವೇ ನಿಮಿತ್ತವೆಂದು ಹೇಳಬಹದು;' ಸೋಕಾಮಯತ
ಬಹು ಸ್ಯಾಂಪ್ರಜಾಯೆಯೇತಿ, ಇತ್ಯಾದಿ ಶ್ರುತಿಗಳಿಂದ ಪ್ರಪಂಚಕ್ಕೆ ಪರಮಾತ್ಮನೇ ಕರ್ತ