ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦
ಕಾದಂಬರೀಸಂಗ್ರಹ

ಯೋಚಿಸುತ್ತುರುವಾಗಲೇ ಚಂಡಾಲರೂಪವು ಬಯಲಾಗಿ ಕೋಟಿಸೂರ್ಯಪ್ರಕಾಶವಾದ
ದಿವ್ಯರೂಪದೊಂದಿಗೆ ಉಮಾರ್ಧದೇಹನೂ ವೃಷಭಾರೂಢನೂ ಪ್ರಮಥಗಣಯುತನೂ
ಚತುರ್ವೇದಸ್ತೂಯಮಾನನೂ ಆದ ದೇವೋತ್ತಮನೆನಿಸುವ ಪರಮೇಶ್ವರನು ನಿಂತಿದ್ದನು.
ಆಗ ಮಹೇಶ್ವರನು, ಮದಂಶಸಂಭೂತನಾದ ಯತಿಯೇ ! ನೀನು ಪ್ರಪಂಚವ
ನ್ನುದ್ದರಿಸಿ ವೇದಾಂತಪ್ರತಿಷ್ಠಾಪನಾರ್ಥವಾಗಿ ಅವತರಿಸಿರುವ ಕಾರಣ, ಮಹಾವಿಷ್ಣ್ವಂ
ಶಜನಾದ ವೇದವ್ಯಾಸನಿಂದ ರಚಿತವಾದ ಬ್ರಹ್ಮಸೂತ್ರಗಳಿಗೂ, ದಶೋಪನಿಷತ್ಪಂಚ ರುದ್ರ, ನೃಸಿಹ್ಮ ತಾಪಿನೀ, ಶ್ರೀ ರುದ್ರಾದಿವೇದಾಂತಗಳಿಗೂ, ಗೀತಾ, ಸಹಸ್ರನಾಮಾ
ದಿಗಳಿಗೂ ಅದ್ವೈ ತಪ್ರತಿಪಾದಕವಾದ ಭಾಷ್ಯವಂ ರಚಿಸಿ, ಶಿಷ್ಯರಿಗೆ ಪ್ರವಚನಮಾಡಿಸಿ,
ದುರ್ಮತಗಳಂ ಖಂಡಿಸಿ, ದೇವತಾಕಲೆಗಳಂ ಪ್ರತಿಷ್ಠಿಸಿ, ವಾಣೀಹಿರಣ್ಯಗರ್ಭರಿಗೆ ಶಾಪ
ವಿಮೋಚನೆಯಂಮಾಡಿ, ಗುರುಪೀಠಗಳು ಸ್ಥಾಪಿಸಿ, ಷಡ್ದರ್ಶನಸ್ಥಾಪನಾಚಾರ್ಯನೆನಿ
ಸಿಕೊಂಡು, ಶಿಷ್ಯರನ್ನುದ್ಧರಿಸಿ, ಶಾಶ್ವತಕೀರ್ತಿಯಂಪಡೆದು, ಕೊನೆಗೆ ಸಶರೀರನಾಗಿ
ನನ್ನೊಳಗೈಕ್ಯವಾಗೆಂದು ಹೇಳಿ ಅಂತರ್ಧಾನವನ್ನು ಹೊಂದಿದನು. ಆಚಾರ್ಯರು, ಅಲ್ಲಿಂದ ಬದರಿಕಾಶ್ರಮಕ್ಕೆ ಹೋಗಿ, ಅಲ್ಲಿ ವ್ಯಾಸರು
ಕಾಣದೇ ಹೋಗಲು, ಸನಂದನರನ್ನು ಅಲ್ಲಿಯೇ ಬಿಟ್ಟು ನರನಾರಾಯಣಾಶ್ರಮಕ್ಕೆ
ಹೋಗಿ ಅವರ ಆತಿಥ್ಯಮಂ ಕೈಕೊಂಡು "ನೀನು ಮಣಿಕರ್ಣಿಕಾಘಟ್ಟದಲ್ಲಿ, ಶಿಷ್ಯರಿಗೆ
ಭಾಷ್ಯಪ್ರವಚನಮಾಡಿಸುತ್ತಿರುವ ಸಮಯದಲ್ಲಿ ವ್ಯಾಸರಂ ಕಾಣುವಿ” ಎಂಬ ಅವರ
ಮಾತಿನಂತೆ,ಹಿಂತಿರಿಗಿ, ಭಾಷ್ಯವಂ ರಚಿಸಿ ಶಿಷ್ಯರಿಗೆ ಉಪದೇಶಿಸುತ್ತಿದ್ದರು.
ಅಲ್ಲಿದ್ದ ಇತರ ಶಿಷ್ಯರು, ಪದ್ಮನಾಭಾವತಾರಿಯಾದ, ಸನಂದನರನ್ನು ಅಂತ
ರಂಗದಲ್ಲಿ ದ್ವೇಷಿಸುತ್ತಿದ್ದರು.
ಸನಂದನಾಚಾರ್ಯನು, ಒಂದುದಿನ ಗಂಗಾನದಿಯ ಆಚೆದಡದಲ್ಲಿ, ದೇವ
ತಾರ್ಚನೆಗೆ ತುಲಸೀ, ಬಿಲ್ವ, ಪುಷ್ಪಗಳು, ಕುಯ್ಯುತ್ತಿರಲು, ಆಚಾರ್ಯರು ಅವ
ನನ್ನು ಆಗಲೇ ಬರಹೇಳಿ ಕೂಗಿದರು
. ಅದನ್ನು ಕೇಳಿದಕೂಡಲೇ ಗುರುಭಕ್ತಿಯುಳ್ಳ ಶಿಷ್ಯನು, ನದಿಯ ಪ್ರವಾಹದ
ಮೇಲೆಯೇ ನಡೆಯಲಾರಂಭಿಸಿದನು. ಗಂಗೆಯು, ಇವನ ಗುರುಭಕ್ತಿಯನ್ನು ಕಂಡು ಅವನ ಪ್ರತಿಒಂದು ಹೆಜ್ಜೆಗೂ, ಒಂದೊಂದು ಕಮಲವನ್ನು ,ಒಡ್ಡುತ್ತಾ ಬಂದಳು
. ಸನಂದನರು ಬೇಗ ಬಂದು ಗುರುಗಳಿಗೆ ನಮಸ್ಕರಿಸಿ ನಿಲ್ಲಲು, ಶಂಕರಾಚಾ
ರ್ಯರು ಬಹಳ ಸಂತೋಷದಿಂದ ಅವರನ್ನು ಕಟಾ ಕ್ಷಿಸಿ ಪದ್ಮಪಾದರೆಂದು ಹೆಸರಿಟ್ಟರು.