ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ
೨೫

ಪದೇಶವನ್ನು ಮಾಡಬೇಕೆಂದು ಹೇಳಿ ಆಚಾರ್ಯರು ಬಂದ ಕಾರಣವನ್ನು ತಿಳಿದು
ಕೊಂಡು "ತಮ್ಮ ಭಾಷ್ಯಕ್ಕೆ ವಾರ್ತಿಕಮಾಡುವಬಗ್ಯೆ ನನ್ನ ಶಿಷ್ಯನೂ, ಕರ್ಮವಾ
ದಿಯೂ, ಆದ ಮಂಡನಮಿಶ್ರನು ಆರ್ಯಾವರ್ತದಲ್ಲಿದ್ದಾನೆ; ನೀವು ಆತನನ್ನು ವಾದ
ದಲ್ಲಿ ಸೋಲಿಸಿ ನಿಮ್ಮಿಷ್ಟವನ್ನು ನೆರವೇರಿಸಿಕೊಳ್ಳಬಹುದು" ಎಂದು ಆಚಾರ್ಯರಿಗೆ
ಹೇಳಲು, ಆಚಾರ್ಯರು ಭಟ್ಟ ಪಾದರನ್ನು ಆ ವ್ರತವನ್ನು ಬಿಡುವಂತೆ ಬಹಳವಾಗಿ ಹೇಳಿ
ದರೂ ಅದು ನಿಷ್ಪ ಪ್ರಯೋಜನವಾಗಲು, ಅವರ ಇಷ್ಟದಂತೆ ತಾರಕೋ ಪದೇಶವಂಗೈದು
ಸಶಿಷ್ಯರಾಗಿ ಮಾಹಿಷ್ಮತೀನಗರದ ಕಡೆ ತೆರಳಿದರು.
ಆ ನಗರವಂ ತಲಪಿದನಂತರ ಆಚಾರ್ಯರು ಮಂಡನಪಂಡಿತನ ಮನೆಯ ಸಮೀ
ಪಕ್ಕೆ ಹೋದರು.
ಆ ದಿನ ಮಂಡನಪಂಡಿತನ ತಂದೆಯ ಶ್ರಾದ್ಧವಾದ್ದರಿಂದ, ಮಂಡನಪಂಡಿತನು
ಮನೆಬಾಗಿಲುಗಳನ್ನು ಮುಚ್ಚಿ ವ್ಯಾಸರನ್ನು ಪಿತೃಸ್ಥಾನದಲ್ಲಿಯೂ, ಜೈಮಿನಿಗಳನ್ನು
ವಿಶ್ವೇದೇವಸ್ಥಾನದಲ್ಲಿ ಯೂ, (ಅವರಿಬ್ಬರಿಗೂ ಸಮಾನರಾದ ಬ್ರಾಹ್ಮಣರು ದೊರೆಯ
ದಕಾರಣ) ಲಕ್ಷ್ಮಿನಾರಾಯಣಮೂರ್ತಿ ಸಾಲಿಗ್ರಾಮವನ್ನು ವಿಷ್ಣು ಸ್ಥಾನದಲ್ಲಿಯೂ
ಇಟ್ಟು ಅರ್ಚಿಸುತ್ತಿದ್ದನು. ಆಗ ಶಂಕರರು ಯೋಗಶಕ್ತಿಯಿಂದ ಪಂಡಿತನ ಮನೆಯ
ಒಳಕ್ಕೆ ಹೋಗಿ ಇದು ಒಳ್ಳೆಯಸಮಯವೆಂದರಿತು ಅವರ ಸಮೀಪಕ್ಕೆ ಹೋದರು.
ಆಗ ಮಂಡನಪಂಡಿತನಿಗೂ ಆಚಾರ್ಯರಿಗೂ ಈರೀತಿ ಪ್ರಶೋತ್ತರಗಳು ನಡೆದವು :
ಮಂ ಪಂ:---" ಸನ್ಯಾಸಿಯು ಎಲ್ಲಿಂದ ಬಂದವನು” ಎಂಬರ್ಥದಿಂದ ಕುತೋ
ಮುಂಡೀ” ಎನ್ನಲು.
ಶಂ. ಯ.:--- "ಮುಂಡೀ ಎಂಬ ಶಬ್ದಕ್ಕೆ "ಬೋಳ" ಎಂದರ್ಥವಂ
ಮಾಡಿ, " ಆಗಳಾನ್ನುಂಡೀ" (ಕತ್ತಿನಿಂದಮೇಲೆ ಬೋಳ) ಎಂದರು.
ಮಂ. ಪಂ:--- 'ಕುತಃ' ಎಂಬ ಶಬ್ದದಿಂದ ದಾರಿಯನ್ನು ಕೇಳಿದ್ದೇನೆಂದು
ಹೇಳಿ "ಪಂಥಾಸ್ತೇಪ್ರೃಚ್ಛತೇಮಯಾ ” (ನಿನ್ನ ದಾರಿಯು ನನ್ನಿಂದ ಕೇಳಲ್ಪಡುತ್ತದೆ)
ಎಂದನು.
ಶಂ. ಯ.:--- "ನಿನ್ನನ್ನು ಕೇಳುವುದಿಲ್ಲ; ನಿನ್ನ ದಾರಿಯನ್ನು ಕೇಳುತ್ತೇನೆ"
ಎಂದರ್ಥಮಾಡಿಕೊಂಡು ಕಿಮಾಹಪಂಥಾಂ” (ದಾರಿಯು ಏನು ಹೇಳಿತು)ಎಂದರು.
ಮಂ. ಪಂ.:--- "ತ್ವನ್ಮಾತಾಮುಂಡೇತ್ಯಾಹ" (ನಿನ್ನ ತಾಯಿಯು ಮುಂಡೆ
ಎಂದಿತು ಅಂದರೆ 'ಮುಂಡೆಮಗನೇ' ಅಂದಿತು, ಎಂದುತ್ತರವಿತ್ತನು.