ಶಂ. ಯ.:----" ಆ ಉತ್ತರವು ಪೃಚ್ಛಕನಾದ ನಿನಗೆ ಸೇರುವುದೇಕೊರತು
ನನಗಲ್ಲವು" ಎಂದು ಹೇಳಿ ಹಾಗನ್ನಿಸಿಕೊಂಡೆಯಾ” ಎಂದರು
ಮಂ. ಪಂ:-(ಕೋಪದಿಂದ) "ಸುರಾಪೀತಾವಾ” (ಹೆಂಡವು ಕುಡಿಯಲ್ಪಟ್ಟಿ
ದೆಯೋ?) ಎನ್ನಲು-
ಶಂ ಯ: "ಪೀತ" ಶಬ್ದಕ್ಕೆ "ಹಳದಿ” ಎಂದರ್ಥಮಾಡಿ "ಹೆಂಡವುಹಚ್ಚಗಿಲ್ಲ” ; ಆದರೆ ಶ್ವೇತಾ (ಬಿಳುಪು) ಎಂದರು.
ಮಂ. ಪಂ.:----(ಮತ್ತಷ್ಟು ಕೋಪದಿಂದ) "ಕಿಂತ್ವಂಜಾನಾಸಿತದ್ವರ್ಣಂ ? ”
(ಸನ್ಯಾಸಿಗೆ ಅದರ ಬಣ್ಣವು ಹೇಗೆ ತಿಳಿಯಿತು ?”
ಶಂ.ಯ.:---- ಅಹಂವರ್ಣಂಭವಾವ್ರಸಮ್ ” (ಸನ್ಯಾಸಿಗೆ ಬಣ್ಣ ತಿಳಿಯು
ವುದು; ಗೃಹಸ್ಥನಿಗೆ ರುಚಿ ತಿಳಿಯುವುದು.)
ಮಂ. ಪಂ.'ಎಲೈ ಯತಿಯೇ ! ಕತ್ತೆಯಿಂದಲೂ ಹೊರಲಸಾಧ್ಯವಾದ
ಕಂತೆಯನ್ನು ಹೊದ್ದಿರುವ ನಿನಗೆ ಜುಟ್ಟು ಜನಿವಾರಗಳಿಂದ ಭಾರವಾಯಿತೇ?
ಶಂ. ಯ.:----ಮೂಢಮತಿಯೇ! ಅದು ನಿನಗೆ ಭಾರವಲ್ಲ; ವೇದಕ್ಕೆ ಭಾರವು;
ಮಂ. ಪಂ.: "ಮತ್ತೊ ಜಾತಃ ಕಳಂಜಾಸೀ ವಿಪರೀತಾನಿ ಭಾಷಸೇ
"
(ಮಾಂಸಭಕ್ಷಕನೂ, ಮತ್ತು ಮತ್ತನೂ, ಆಗಿರುವುದರಿಂದಲೇ ಈ ವ್ಯತ್ಯಾಸಗಳಾದ
ಮಾತುಗಳನ್ನಾಡುತ್ತೀಯೆ" ಎನ್ನಲು
ಶಂ, ಯ.:----" ಮತ್ತೊಜಾತಃ " ಎಂಬುದಕ್ಕೆ " ನನ್ನಿಂದ ಹುಟ್ಟಿದವನು ”
ಎಂದರ್ಥಮಾಡಿ “ಸತ್ಯಂ ಬ್ರವೀಷಿ ಪಿತೃವತ್ವ ಜಾತಃ ಕಳಂಜಭುಕ್ ” (ನೀನು
ಹೇಳಿದ್ದು ನ್ಯಾಯವೇ; ನೀನು ಮಾಂಸಭ
ಕ್ಷಕನಾದಕಾರಣ ನಿನ್ನ ಮಗನೂ ಮಾಂಸಭಕ್ಷಕನು) ಎಂದರು.
ಮಂ, ಪಂ.:----"ತ್ಯಕ್ತ್ವಾ ಪಾಣಿಗೃಹೀತಿಂ ಸ್ವಾಂ ಅಶಕ್ತ್ಯಾ ಪರಿರಕ್ಷಣೇ|
ಶಿಷ್ಯಪುಸ್ತಕಭಾರೇಚ್ಛೋಹೊ ವ್ಯಾಖ್ಯಾತಾ ಬ್ರಹ್ಮನಿಷ್ಟತಾ' (ಮದುವೆಯಾದರೆ ಹೆಂಡ
ತಿಯನ್ನು ಅನ್ನ ವಸ್ತ್ರಗಳಿಂದ ರಕ್ಷಿಸಬೇಕಾಗಿ ಬರುತ್ತದೆ ಎಂದು ತಿಳಿದು, ಶಿಷ್ಯರನ್ನೂ
ಪುಸ್ತುಗಳನ್ನೂ ಸಂಗ್ರಹಿಸಲಿಚ್ಛೆಯುಳ್ಳ ನಿನ್ನಿಂದ ಬ್ರಹ್ಮಜ್ಞಾನತತ್ತ್ವವು ತೋರಿಸಲ್ಪ
ಡುತ್ತದೆ) ಎನ್ನಲು
ಶಂ. ಯ.:---- "ಗುರುಶುಶ್ರೂಷಣಾಲಸ್ಯಾತ್ ಸಮಾವೃತ್ಯ ಗುರೋಕುಲಾತ್
ಸ್ತ್ರೀಯಶ್ಯು ಶೂಷಮಾಣಸ್ಯ ವ್ಯಾಖ್ಯಾತಾ ಕರ್ಮನಿಷ್ಟತಾ ” (ಗುರುಸೇವೆಮಾಡುವುದ
ಪುಟ:ಶಂಕರ ಕಥಾಸಾರ.djvu/೪೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಕಾದಂಬರೀಸಂಗ್ರಹ