ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೦
ಕಾದಂಬರೀಸಂಗ್ರಹ

ಅನಂತರ ಶಾರದೋಪಾಸನೆಯಲ್ಲಿ ಆಸಕ್ತರಾದ ಕೆಲವರು ಪುಸ್ತ, ಪುಂಡ್ರಕಚಿಹ್ನಿ
ತರಾಗಿ ಬಂದು ಆಚಾರ್ಯರನ್ನು ಕುರಿತು "ಸ್ವಾಮಿಾ ! ವೇದಕ್ಕೆ ನಿತ್ಯತ್ವವಿರುವುದರಿಂದ
ಶಾರದೆಯೂ ನಿತ್ಯರೂಪಿಣಿಯು; ಅವಳೇ ಲೋಕಕ್ಕೆಲ್ಲಾ ಕಾರಣಭೂತಳು; 'ಪ್ರಣೋ
ದೇವೀ ಸರಸ್ವತೀ' ಎಂಬ ಶ್ರುತಿಯಂತೆ ಅವಳಿಂದಲೇ ಬುದ್ದಿಜ್ಞಾನಗಳು ಕೊಡಲ್ಪಡಬೇಕು;
ಸಕಲ ಗುಣಗಳಿಂದ ಕೂಡಿರುವ ಅವಳು ಮುಕ್ಷುಗಳಿಂದಲೂ ಸೇವಿಸಲ್ಪಡಲು ಅರ್ಹಳು.
ಆದ್ದರಿಂದ ನೀವೂ ಅವಳ ಉಪಾಸನೆಯನ್ನು ಮಾಡಿ ” ಎನ್ನಲು ಆಚಾರ್ಯರು "ಎಲೈ
ಜನರೇ ! ಕಂಠತಾಲ್ವಾದಿಗಳ ಸಂಗಮದಿಂದ ಹುಟ್ಟಿದ ವೇದಕ್ಕೆ ನಿತ್ಯತ್ವವು ಹೇಗೆ ?
ವರ್ಣಮಾತ್ರಕ್ಕೋ ಅಥವಾ ವರ್ಣ ಸಂತತಿಗೋ ನಿತತ್ವವೇ ಹೊರ್ತು ವೇದಕ್ಕೆ
ನಿತ್ಯತ್ವವಿಲ್ಲ ; ಭಗರ್ವಾ ಸಹಸ್ರರಶ್ಮಿಯು, ಸೃಷ್ಟಿ ಕಾಲದಲ್ಲಿ ಮಹರ್ಷಿಗಳಿಗೆ 'ಅಂಗಸ
ಹಿತವಾದ ವೇದಕ್ಕೆ ಯುಗಾಂತ್ಯದಲ್ಲಿ ಪ್ರಳಯವು ಎಂದು ಹೇಳಿರುವನು'
ಎಂದು ಸೂರ್ಯ ಸಿದ್ಧಾಂತದಲ್ಲಿದೆ. ಸೂರ್ಯನಿಂದ ಪ್ರಳಯವನ್ನು ಹೊಂದಿದ ಶಾರ
ದೆಗೆ ನಿತ್ಯತ್ವವು ಹೇಗೆ ? ಆದ್ದರಿಂದ ನಿತ್ಯನಾದ ಪರಬ್ರಹ್ಮನಿಂದ ಮೋಕ್ಷ ಬರುವುದಲ್ಲದೆ
ಬೇರೆ ಅಲ್ಲ” ಎಂದು ಅವರಿಗೆ ಬೋಧಿಸಿ, ಅವರನ್ನೆಲ್ಲಾ ಪಂಚಾಯತನ ಪೂಜಾರತ
ರಾದ ಅದ್ವೈತಿಗಳನ್ನಾಗಿ ಮಾಡಿ ವಾದಕ್ಕೆ ನಿಂತ ವಾಮಾಚಾರರರನ್ನು ಶ್ರುತ್ಯುಪ್ತ
ಪ್ರಮಾಣಗಳಿಂದ ಸೋಲಿಸಿ, ಅವರಿಗೆಲ್ಲಾ ಅದ್ವೈತಾಮೃತಪಾನವಂ ಮಾಡಿಸಿ, ಶ್ರೀರಾಮ
ನಿಂದ ಪ್ರತಿಷ್ಟಿತವಾದ ರಾಮೇಶ್ವರಲಿಂಗವನ್ನು ಗಂಗಾಜಲದಿಂದ ಅಭಿಷೇಕವಂಮಾಡಿ,
ಕಮಲ, ಬಿಲ್ವಪತ್ರಾದಿಗಳಿಂದ ಸ್ವಾಮಿಯನ್ನು ಪೂಜಿಸಿ, ಪಾಂಡ್ಯರನ್ನೂ ಚೋಳರ
ನ್ನೂ , ದ್ರವಿಡರನ್ನೂ, ಸ್ವಾಧೀನಮಾಡಿಕೊಂಡು, ಹಸ್ತಿಪರ್ವತಕ್ಕೆ ಕಟಿಮೇಖಲಾಭೂತ
ವಾದ ಕಾಂಚೀ ನಗರಕ್ಕೆ ಪ್ರಯಾಣಮಾಡಿದರು.

ಶ್ರೀಚಕ್ರ ಸ್ಥಾಪನೆ.

ಆಚಾರ್ಯರು ಕಂಚಿಯನ್ನು ತಲಪಿದಮೇಲೆ ಸಶಿಷ್ಯರಾಗಿ ಒಂದು ಜಗುಲಿಯ
ಮೇಲೆ ಕುಳಿತಿರಲು, ಆ ಮನೆಯ ಯಜಮಾನನು ಬಂದು " ಸ್ವಾಮಿಾ ! ಸಾಯಂಕಾಲ
ದಲ್ಲಿ ಇಲ್ಲಿರಬೇಡಿ. ಏಕೆಂದರೆ ಈ ಊರಿನ ಅಧಿದೇವತೆಯಾದ ಕಾಮಾಕ್ಷಿಯು ಅತಿ
ಕ್ರೂರಳು ; ಸಾಯಂಕಾಲವಾದಮೇಲೆ ಆಕೆಯು ಬೀದಿಯನ್ನೆಲ್ಲಾ ಸುತ್ತಿ ಸಿಕ್ಕಿದವ
ರನ್ನು ತಿಂದುಬಿಡುತ್ತಾಳೆ ; ಆದ್ದರಿಂದ ತಾವು ಎಲ್ಲಿಯಾದರೂ ದಯಮಾಡಿ ” ಎಂದು
ಹೇಳಿ ಹೊರಟುಹೋದನು.

ಆದಿನ ಸಾಯಂಕಾಲವಾಗುತ್ತಲೂ, ಆಚಾರ್ಯರು ಸ್ವಕರ್ಮಾನಂತರ ಶಿಷ್ಯರ
ನ್ನೆಲ್ಲಾ ಮಲಗಿಕೊಳ್ಳುವಂತೆ ಹೇಳಿ ತಾವು ಓರ್ವರೇ ಎಚ್ಚರವಾಗಿ ಕುಳಿತಿದ್ದರು ;