ಬೋಧಿಸುವ ಅದ್ವೈತವು ಆಕಾಶದಂತೆ ಆಧಾರವಿಲ್ಲದೇ ಇದೆ ; ಮನಸ್ಸು, ವಾಕ್ಕು,
ವೃತ್ತಿಗಳಿಗೆ ಅಗೋಚರವಾದದ್ದು ; ಇಂತಹ ಅದ್ವೈತವಿದ್ಯೆಯು ಖಪುಷ್ಪದಂತೆ ಮು
ಮುಕ್ಷುಗಳಿಂದ ಧ್ಯಾನಮಾಡಲ್ಪಡುವುದಕ್ಕೆ ಹೇಗೆ ಯೋಗ್ಯವು ; ಆದ್ದರಿಂದ ನಮ್ಮ
ಮತವೇ ಉತ್ಕೃಷ್ಟವು ; ನಮ್ಮ ಮತಕ್ಕೆ ಗಣಪತಿಯೇ ಒಡೆಯನು ; ಅವನೇ ಬ್ರಹ್ಮ,
ವಿಷ್ಣು ಮಹೇಶ್ವರರೇ ಮೊದಲಾದ ಗಣಗಳಿಗೂ ಒಡೆಯನು; ಅವನು ವಾಲ್ಮೀ
ಕಿ, ವ್ಯಾಸರೇ ಮೊದಲಾದವರುಗಳಿಗಿಂತ ಕವಿಂಕವೀನಾಮುಪಮಶ್ರವಸ್ತಮಮ್ ”
ಎಂಬ ಶ್ರುತಿಯಂತೆ, ಶ್ರೇಷ್ಠನು ; ಸಕಲ ವಿದ್ಯಾನಾಯಕರುಗಳಲ್ಲಿ ಇವನೇ ಶ್ರೇಷ್ಟ
ನು ; ಬ್ರಹ್ಮನೇ ಮೊದಲಾದ ಸೃಷ್ಟಿಕರ್ತರಿಗೂ ಗಣಪತಿಯೇ ಕಾರಣನು ; ಅಂತಹ
ಗಣಪತಿಯನ್ನು ಸೇವಿಸಿದರೆ ಮೋಕ್ಷ ಬರುತ್ತದೆ ಎನ್ನಲು -
ಶಂಕರರು "ಎಲೈ, ಮಧಮತಿಗಳಾದ ಧಂಡಿವಿಘ್ನೇಶ್ವರರೇ ! ಬ್ರಹ್ಮಾದಿಗ
ಳಿಗೆ ಗಣಪತಿಯೇ ಮೂಲಕಾರಣನೆಂದು ಹೇಳಲ್ಪಟ್ಟಿತಲ್ಲವೆ ? ಪಾರ್ವತಿಯ ಅಂಗಮ
ಲದಿಂದ ಜಾತನಾದ ಗಣಪತಿಗೆ ಜಗತ್ಕಾರಣತ್ವವು ಹೇಗೆ ಯಾವನಿಗೆ ಈಶ್ವರನು ತಂದೆ
ಯೋ ಅಂತಹ ಈಶ್ವರನಿಗೆ ಈ ಗಣಪತಿಯು ಹೇಗೆ ತಂದೆಯಾದಾನು ? ಬ್ರಹ್ಮನೇ
ಮೊದಲಾದ ದೇವತೆಗಳಿಗೆ ಪರಬ್ರಹ್ಮವೇ ಕಾರಣವು ; ಆ ಬ್ರಹ್ಮ ವಸ್ತುವಿಲ್ಲದೆ ಚರಾ
ಚರ ರೂಪವಾದೀ ಪ್ರಪಂಚವೇ ಇಲ್ಲ; ಈ ಗಣಪತಿಯು ಹೇಗೆ ಉತ್ಪನ್ನನಾದನೋ
ಹಾಗೆಯೇ ನಾಶವನ್ನೂ ಹೊಂದುತ್ತಾನೆ ; ಆದ್ದರಿಂದ ನಿನ್ನ ದೇಹದಲ್ಲಿ ಅಂಕನಗಳ
ಧರಿಸುವಿಕೆಯು ನಿರಾಧಾರವಾದದ್ದು; ಗಜಾನನನು, ಮಾಹಾತ್ಮನೂ, ಸಕಲ ದೇವತೆಗ
ಳಿಂದಲೂ ಪೂಜಿಸಲ್ಪಡಲು ಯೋಗ್ಯನಾಗಿದ್ದರೂ, ಈಶ್ವರನಿಂದ ಉತ್ಪನ್ನನಾದಕಾರಣ
ಜಗತ್ತರ್ತೃತ್ತ್ವವನ್ನು ಅವನಲ್ಲಿ ಹೇಳುವುದು ಸರಿಯಲ್ಲ” ಎನ್ನಲು, ಅವರೆಲ್ಲರೂ
ತಮ್ಮ ಚಿಹ್ನೆಗಳನ್ನು ಬಿಟ್ಟು , ಆಚಾರ್ಯರಿಗೆ ವಂದಿಸಿ ಅವರ ಶಿಷ್ಯರಾಗಿ ಅವರ ಜೊತೆಯ
ಲೈಯೇ ಹೊರಟರು.
ಅನಂತರ ಆಚಾರ್ಯರು ಅಲ್ಲಿಗೆ ಬಂದ ಆಂಧ್ರರನ್ನು ಸ್ವಸೇವಾರತರನ್ನಾಗಿಮಾಡಿ,
ವೆಂಕಟಾಚಲೇಶ್ವರರನ್ನು ವಂದಿಸಿ ಕಾಳಹಸ್ತಿಗೆ ಬಂದು ಕ್ರಥಕೈಶಿಕಾದಿಭೈರವ ಮತದವ
ರನ್ನು ನಿಗ್ರಹಿಸಿ, ಆಯುಧಧಾರಿಗಳಾಗಿ ಬಂದವರನ್ನು ಸುಧನ್ವರಾಯನಿಂದ ನಾಶಮಾ
ಡಿಸಿ, ಅಲ್ಲಿಂದ ವಿದರ್ಭದೇಶಕ್ಕೆ ಹೋಗಿ, ವಾದಿಗಳನ್ನು ಜಯಿಸಿ,ಕರ್ಣಾಟದೇಶಕ್ಕೆ
ಹೋಗಬೇಕೆಂದಿದ್ದರು.
ಆಗ ಅಲ್ಲಿಗೆ ಓರ್ವ ಕ್ರಕಚನೆಂಬ ಕಾಪಾಲಿಕನು; ಮದ್ಯದಿಂದ ಪೂರಿತವಾದ
ಒಂದು ನರಕಪಾಲವಂ "ಹಿಡಿದುಕೊಂಡು ವಿಭೂತಿರುದ್ರಾಕ್ಷಿಮಾಲೆಗಳಿಂದಲಂಕೃತ
ಪುಟ:ಶಂಕರ ಕಥಾಸಾರ.djvu/೭೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಕಾದಂಬರೀಸಂಗ್ರಹ