ಪುಟ:ಶಕ್ತಿಮಾಯಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FL ಶ, ಚಂದ್ರಿಕೆ ಶ್ಯಾಸವ ತಾಳಬೇಡಿರಿ, ಇನ್ನೊಮ್ಮೆ ಅಲ್ಲಿಯವರೆಗೆ ಹೋಗಿ ನೋಡಿ ಕೊಂಡು ಬರಿ, ಎಂದು ನುಡಿದು ತಾನೇ ಆ ಅಶ್ವತ್ಥವೃಕ್ಷದ ಕಡೆಗೆ ನಡೆದಳು. ಅವಳ ಹಿಂದಿನಿಂದ ಗಣೇಶದೇವನೂ ಅವನ ಸೈನಿಕರೂ ನಡೆ ದರು. ಗಿರವು ಸಮೀಪಿಸಿದ ಹಾಗೆ ಅದರ ಕೆಳಗಿನ ಪುಷ್ಕರಿಣಿಯ ಸ್ವಚ್ಛ ನೀರು ಮೃಗಜಲದಂತೆ ಅವರಿಗೆ ಕಾಣಹತ್ತಿತು. ಆಗ ಬೇಸಿಗೆ ಯೋಗೆ ಹರಿಣ ಶಿಶುಗಳು ಮೃಗಜಲವನ್ನು ಕಂಡು ನೀರೆಂದು ಓಡುತ್ತ ಹೋಗುವಂತೆ ಗಣೇಶದೇವನ ಸೈನಿಕರೆಲ್ಲರೂ ಆ ಪುಷ್ಕರಿಣಿಯನ್ನು ಮುಟ್ಟಿದರು. ಆ ಚಿಕ್ಕ ಕೆರೆಯ ಸ್ವಚ್ಛವಾದ ನೀರನ್ನು ಕಂಡೊಡನೆ ಯೇ ಅವರ ನೀರಡಿಕೆಯು ಅರ್ಧಕ್ಕರ್ಧ ಕಡಿಮೆಯಾಗಿ ಹೋಯಿತು. ಆಗ ಅವರೆಲ್ಲರೂ ಸನ್ಯಾಸಿನಿಯ ಕಡೆಗೆ ಕೃತಜ್ಞತಾಪೂರ್ವಕವಾಗಿ ನೋಡುತ್ತ ಕೆರೆಗಳಿದ್ದು ಮನದಣಿಯಾಗಿ ಜಲಪ್ರಾಶನ ಮಾಡಿದರು. ಅವರ ಕೃಪಾಶಾಂತವಾಗಿ ಅಂದಿನ ಆ ಪ್ರಾಣಸಂಕಟದಿಂದ ಪಾರಾಗ ಟು ಅವರಿಗೆ ಅತ್ಯಂತ ಹರ್ಷವಾಗಿ ಅವರ ಸನ್ಯಾಸಿನಿಯ ಹಾಗು ಕುನೂರ ಗಣೇಶದೇವನ ಜಯಜಯಕಾರ ಮಾಡಿದರು. ಬಳಿಕ ಅವ ರೆಲ್ಲರೂ ಗುಂಪುಗುಂಪಾಗಿ ಬಂದು ಸನ್ಯಾಸಿನಿಗೆಸಾಷ್ಟಾಂಗವೆರಗಿದರು. ಸನ್ಯಾಸಿನಿಯು' -೨ವರೆಲ್ಲರಿಗೆ ತಾನು ತಂದಿದ್ದ ಆಹಾರವನ್ನು ಸ್ವಲ್ಪ-ಸ್ವ ಆಗಿ ಕೊಟ್ಟಳು. ಅದರಿಂದ ಅವರು ಪರಮ ಸಂತುಷ್ಟರಾಗಿ ವಿಶ್ರಾಂ ತಿಯನ್ನು ಅನುಭವಿಸುತ್ತಿರಲು, ಶತ್ರುಗಳ ಸೈನ್ಯವು ತೀರ ಸಮೀಪಕ್ಕೆ ಬಂದಿರು, ಶತ್ರಗಳ ದಂಡಾಳುಗಳಾದರೂ ಬಿಸಿಲಿನ ತಾಪದಿಂದಲೂ ಬಾಯಾರಿಕೆಯಿಂದ ಕಂಗೆಟ್ಟಿದ್ದರು. ಆದರೆ ಗಣೇಶದೇವನು ಆ ಸಂಧಿಯನ್ನು ಸಾಧಿಸಿ ಶತ್ರುಗಳಿಗೆದುರಾಗಿ ತನ್ನ ತೀರ ತುಸ ದಂಡಿ ನಿಂದ ಬಾದಶಹಃ: ಬಹು ದೊಡ್ಡ ದಂಡನ್ನು ಸೋಲಿಸಿ ಬಿಟ್ಟನು. ಆ ದಿನ ಗಣೇಶದೇವನ ಪಕ್ಷದವರ ವಿಜಯಕ್ಕೆ ಆ ಪುಷ್ಕರಿಣಿಯೇ ಮೂಲಭೂತವಾದ್ದರಿಂದ, ಅಂದಿನಿಂದ ಆ ಚಿಕ್ಕ ಕೆರೆಗೆ ದೇವತಾನು ಗ್ರಹದಿಂದುಂಟಾದ ಪುಷ್ಕರಿಣಿಯೆಂದು ಲೋಕವಾರ್ತೆಯುಂಟಾಯಿತು.