ಪುಟ:ಶಕ್ತಿಮಾಯಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶಕ್ತಿಮಯಿ, F * ಇಂಥ ಆ ಶುಭಕರವಾದ ಪುಷ್ಕರಿಣಿಯ ತೀರದಲ್ಲಿ ಗಣೇಶ ದೇವನು ಮೇಲೆ ಹೇಳಿದಂತೆ ತನ್ನ ದಂಡಿನ ತಳವೂರಿದ್ದನು. ಮ ಧ್ಯಾಹ್ನ ದಲ್ಲಿ ಚನ್ನಾಗಿ ಮಳೆಯಾಗಿ ಈಗ ಅದು ನಿಂತಿತ್ತು; ಆದರೂ ಆಕಾಶವು ಇನ್ನೂ ಮೋಡಗಳಿಂದ ಪರಿಪೂರ್ಣವಾಗಿತ್ತು. ಅದು ಶರದೃತುವಿನ ಕಾಲವಾದ್ದರಿಂದ, ಆ ದಿವಸ ಸಾಯಂಕಾಲದಲ್ಲಿ ನಸು ಗೆಂಪಿನ ಅಥವಾ ಚಿನ್ನದ ಬಣ್ಣದಿಂದ ಸೂರ್ಯನು ಪರಿಶೋಭಿಸುತ್ತ ಲಿದ್ದನು. ವ.ಳೆಯಿಂದ ತೊಯ್ದ ಮರಗಳ ಎಲೆಗಳಿಂದ ಒಂದೊಂದೇ ನೀರಹನಿಗಳು ಟಪ ಟಪ ಎಂದು ಕೆಳಗಿನ ಹುಲ್ಲು ಪ್ರದೇಶದ ಮೇಲೆ ಬಿರು, ಮುತ್ತಿನಂತೆ ಹೊಳೆಯುತ್ತಿದವು. ಮನಸೋಕ್ತವಾಗಿ ಬೀ ಸುತ್ತಿರುವ ತಂಗಾಳಿಯಿಂದ ಆ ಪುಷ್ಕರಿಣಿಯ ಸೃಷ್ಟ ಭಾಗವು ಚಳಿ ಹತ್ತಿದ ಮನುಷ್ಯನಂತೆ ನಡಗುತ್ತದೆ ಎಂಬಂತೆ ಸಣ್ಣ ಪುಟ್ಟ ತೆರೆಗಳ ನಂಟುಮಾಡುತ್ತಿತ್ತು, ಇಂಗಗಳು ತೀರಪ್ರದೇಶದಲ್ಲಿಯ ಪ್ರಷ್ಟಗಳ ಸುಗಂಧವನ್ನು ಹೀರಿಕೊಳ್ಳುತ್ವ ಇತ್ತಿಂದತ್ತ ಅತ್ತಿಂದಿತ್ತ ಹೀಗೆ ಎದೆ ಬಿಡದೆ ಅತ್ಯಾನಂದದಿಂದ ಸಂಚರಿಸುತ್ತಿದ್ದವು. ಕೆರೆಯೊಳಗಿನ ಸಣ್ಣ ದೊಡ್ಡ ಕಪ್ಪೆಗಳ ಗೊಡ್ಸ್‌-ಗೊಡ್ಸ್ ಎಂಬ ಗತ್ತಿನ ಸಪ್ಪಳದಿಂದಲೂ, ಅಡವಿಯ ಕಾಡುಗಿಡಗಳೊಳಗಿನ ಒಂದು ಜಾತಿಯ ಹುಳಗಳ ಝರ್-ಎಂಬ ತಾಳಬದ್ದ ದನಿಯಿಂದಲೂ ಆ ವನಪ್ರದೇಶದ ನಾಲ್ಕು ಕಡೆಗೆ ಆನಂದದ ಗಾಂಭೀರ್ಯವು ಒಡೆದು ಕಾಣುತ್ತಿತ್ತು. ಅಂಥ ಆ ಅಪೂರ್ವವಾದ ಆನಂದದ ಪಾಲುಗಾರರಾಗಲಿಕ್ಕೆ ನಮ್ಮ ಗಣೇಶದೇವನ ದಂಡಿನೊಳಗಿನ ಸೃಷ್ಟಿ ಸೌಂದರ್ಯಾಪೇಕ್ಷಿಗಳಾದ ಕೆ ಲವು ಜನರು ಆ ಪುಷ್ಕರಿಣಿಯ ತೀರಕ್ಕೆ ಬಂದಿದ್ದರು. ಹೀಗೆ ವನಶೀಯ ಸೊಬಗನ್ನು ನೋಡಲು ಬಂದಿದ್ದವರಲ್ಲಿ ಕೆಲವರು ಪುಷ್ಕರಿಣಿಯ ನೀರ ಬಳಿಯಲ್ಲಿ ಕುಳಿತು ಮನೋರಂಜನನ ನ್ನುಂಟು ಮಾಡಿಕೊಳ್ಳುತ್ತಿದ್ದರು. ಕೆಲವರು ತೀರದ ವನಪ್ರದೇಶ